ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಅಲೆಯಲ್ಲಿ 624 ವೈದ್ಯರು ಬಲಿ, ಇತ್ತೀಚಿನ ಅಂಕಿಅಂಶದಲ್ಲಿ ಬಹಿರಂಗ

|
Google Oneindia Kannada News

ನವದೆಹಲಿ, ಜೂನ್ 3: ಕೊರೊನಾ ವೈರಸ್‌ನ ಎರಡನೇ ಅಲೆಯ ಅವಧಿಯಲ್ಲಿ 624 ವೈದ್ಯರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೊಸಿಯೇಶನ್ ತಿಳಿಸಿದೆ. ಕೊರೊನಾ ವೈರಸ್‌ನ ಎರಡನೇ ಅಲೆಯ ಇತ್ತೀಚಿನ ಅಂಕಿಅಂಶಗಳನ್ನು ಅದು ಬಹಿರಂಗಪಡಿಸಿದೆ.

ಐಎಂಎಯ ಕೊರೊನಾ ಅಂಕಿಅಂಶಗಳ ಪ್ರಕಾರ ಇದರಲ್ಲಿ ದೆಹಲಿಯಲ್ಲಿ 109 ವೈದ್ಯರು ಮೃತಪಟ್ಟಿರುವುದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬಿಹಾರದಲ್ಲಿ 96 ವೈದ್ಯ ಹಾಗೂ ಹಾಗೂ ಉತ್ತರ ಪ್ರದೇಶದಲ್ಲಿ 79 ವೈದ್ಯರು ಎರಡನೇ ಅಲೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೊದಲ ಅಲೆಯಲ್ಲಿ 848 ವೈದ್ಯರು ಪ್ರಾಣಕಳೆದುಕೊಂಡಿದ್ದರು ಎಂಬುದಾಗಿ ಅದು ಮಾಹಿತಿಯನ್ನು ನೀಡಿದೆ.

ಭಾರತದಲ್ಲಿ 22 ಕೋಟಿ ಮಂದಿಗೆ ಕೊರೊನಾವೈರಸ್ ಲಸಿಕೆ!ಭಾರತದಲ್ಲಿ 22 ಕೋಟಿ ಮಂದಿಗೆ ಕೊರೊನಾವೈರಸ್ ಲಸಿಕೆ!

ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ಒಟ್ಟು 1,34,154 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ವೈರಸ್‌ಗೆ ತುತ್ತಾದವರ ಸಂಖ್ಯೆ 2,84,41,986ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2,11,499 ರೋಗಿಗಳು ಗುಣಮುಖರಾಗಿದ್ದು ಭಾರತದಲ್ಲಿ 2,63,90,584 ಕೊರೊನಾ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಭಾರತದಲ್ಲಿ ಚೇತರಿಕೆ ಕಂಡವರ ಪ್ರಮಾಣ 92.72 ಶೇಕಡಾಗೆ ಏರಿಕೆಯಾಗಿದೆ.

624 doctors died in the coronavirus second wave said IMA,

ಇನ್ನು ಇಂಡಿಯನ್ಸ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನೀಡಿದ ಮಾಹಿತಿ ಪ್ರಕಾರ 35,37,82,648 ಸ್ಯಾಂಪಲ್‌ಗಳನ್ನು ಜೂನ್ 2ರವರೆಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 21,59,873 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರ ಲಸಿಕೆ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದು ಸುಮಾರು 22,10,43,693 ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.

English summary
624 doctors died in the coronavirus second wave, According to Indian Medical association.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X