ಮಹಾರಾಷ್ಟ್ರದಲ್ಲಾಯ್ತು, ಇದೀಗ ದೆಹಲಿ ಕಟ್ಟಡ ಕುಸಿತಕ್ಕೆ ಇಬ್ಬರು ಬಲಿ
ನವದೆಹಲಿ, ನವೆಂಬರ್ 24: ಮಹಾರಾಷ್ಟ್ರದ ಥಾಣೆಯಲ್ಲಿ ಇಂದು(ನ.24) ಬೆಳಿಗ್ಗೆ ತಾನೇ ಕಟ್ಟಡವೊಂದು ಕುಸಿದು ಓರ್ವ ವ್ಯಕ್ತಿ ಅಸುನೀಗಿದ ಘಟನೆ ಮಾಸುವ ಮುನ್ನವೇ ರಾಜಧಾನಿ ದೆಹಲಿಯಲ್ಲೂ ಕಟ್ಟಡ ಕುಸಿತದ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಮೃತರಾಗಿದ್ದಾರೆಂಬ ಮಾಹಿತಿ ದೊರಕಿದೆ.
ಇಂದು ಬೆಳಿಗ್ಗೆ ಸುಮಾರು 9:45 ದೆಹಲಿಯ ತೈಮುರ್ ನಗರದಲ್ಲಿ ಅರವತ್ತು ವರ್ಷ ಹಳೆಯ ಕಟ್ಟಡ ಕುಸಿದಿತ್ತು. ಕಟ್ಟಡದ ಮಾಲೀಕ ಮತ್ತು ಕೆಲವು ಕಾರ್ಮಿಕರು ಕಟ್ಟಡದ ಅವಶೇಷಗಳಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.

ಅಗ್ನಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.












Click it and Unblock the Notifications