ನೋಯ್ಡಾದಲ್ಲಿ ಅಗ್ನಿ ದುರಂತ, ಆರು ಮಂದಿ ಸಾವು, ಹಲವರು ಕಣ್ಮರೆ

Posted By:
Subscribe to Oneindia Kannada

ನೋಯ್ಡಾ, ಏಪ್ರಿಲ್ 20: ಇಲ್ಲಿನ ಎಲೆಕ್ಟ್ರಾನಿಕ್ಸ್ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಆರು ಮಂದಿ ಮೃತಪಟ್ಟು, ಹಲವರು ಕಣ್ಮರೆಯಾಗಿದ್ದಾರೆ. ಬೆಂಕಿಯನ್ನು ಹತೋಟಿಗೆ ತರಲು ಹತ್ತು ಅಗ್ನಿಶಾಮಕ ವಾಹನ ಹಾಗೂ ಕ್ರೇನ್ ಗಳನ್ನು ಬಳಸಲಾಗಿದೆ. ಎಕ್ಸೆಲ್ ಗ್ರೀನ್ ವಿಚ್ ಕಂಪೆನಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಬೆಂದುಹೋದ ಆರು ದೇಹಗಳು ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾರ್ಟ್ ಸರ್ಕೀಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದ್ದು, ಕಟ್ಟಡದ ನಾಲ್ಕೂ ಅಂತಸ್ತಿನಲ್ಲಿ ತುಂಬ ವೇಗವಾಗಿ ಬೆಂಕಿ ವ್ಯಾಪಿಸಿದೆ. ಅಲ್ಲಿದ್ದವರಿಗೆ ತಪ್ಪಿಸಿಕೊಳ್ಳಲು ಅವಕಾಶವೇ ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದುರ್ಘಟನೆ ಸಂಭವಿಸಿದ ವೇಳೆ ಮೂವತ್ತಾರಕ್ಕೂ ಹೆಚ್ಚು ಮಂದಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.[ಬೆಂಗಳೂರು: ಅಗ್ನಿ ಅವಘಡದಲ್ಲಿ ಇಬ್ಬರು ಸಜೀವ ದಹನ]

6 Dead In Noida Factory Fire, several missing

ಮೃತರಲ್ಲಿ ಐವರು ಪುರುಷರು ಹಾಗೂ ಓರ್ವ ಮಹಿಳೆ ಇದ್ದಾರೆ. ಎಚ್ ಆರ್ ಮ್ಯಾನೇಜರ್ ಸೇರಿದಂತೆ ಹಲವು ಮಂದಿ ಕಣ್ಮರೆಯಾಗಿದ್ದಾರೆ. ಬೆಂಕಿಯಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಕೆಲವರು ಕಟ್ಟಡದಿಂದ ಜಿಗಿದಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ. ಹಲವರನ್ನು ಹತ್ತಿರದ ಆಸ್ಪ್ಪತ್ರೆಗೆ ದಾಖಲಿಸಿದ್ದು, ಹಲವು ಮೂಳೆ ಮುರಿತ ಹಾಗೂ ಗಂಭೀರವಾದ ಗಾಯಗಳಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At least six people were killed and six others injured in a massive fire at Noida electronics factory here on Wednesday, police said adding that several persons were missing in the incident.
Please Wait while comments are loading...