• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಷೇಧದ ನಡುವೆ ಮಾರಾಟ: ದೆಹಲಿಯಲ್ಲಿ 6,000 ಕೆಜಿ ಪಟಾಕಿ ಜಪ್ತಿ, 55 ಮಂದಿ ಬಂಧನ

|
Google Oneindia Kannada News

ನವದೆಹಲಿ, ನವೆಂಬರ್‌ 04: ರಾಷ್ಟ್ರೀಯ ರಾಜಧಾನಿಯಲ್ಲಿ ಪಟಾಕಿಯನ್ನು ನಿಷೇಧ ಮಾಡಲಾಗಿದೆ. ಈ ನಡುವೆ ಪಟಾಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ 6,000 ಕಿಲೋ ಗ್ರಾಮ್‌ ತೂಕದ ಪಟಾಕಿಯನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಈ ಸಂಬಂಧ 55 ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ದೆಹಲಿ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಪಟಾಕಿ ನಿಷೇಧ ಮಾಡಿದ್ದರೂ ಕೂಡಾ ಪಟಾಕಿಯನ್ನು ಮಾರಾಟ ಮಾಡಿದ, ಪಟಾಕಿಯನ್ನು ಸಂಗ್ರಹ ಮಾಡಿ ಇರಿಸಿದ ಹಾಗೂ ಪಟಾಕಿಯನ್ನು ಸಿಡಿಸಿದ ಕಾರಣಕ್ಕೆ 55 ಮಂದಿಯ ವಿರು‌ದ್ಧ 56 ಪ್ರಕರಣಗಳು ದಾಖಲು ಆಗಿದೆ.

ನಿಷೇಧದ ನಡುವೆ ಮಾರಾಟಕ್ಕೆ ಯತ್ನ, 800 ಕೆಜಿಗೂ ಅಧಿಕ ಪಟಾಕಿ ಜಪ್ತಿ ನಿಷೇಧದ ನಡುವೆ ಮಾರಾಟಕ್ಕೆ ಯತ್ನ, 800 ಕೆಜಿಗೂ ಅಧಿಕ ಪಟಾಕಿ ಜಪ್ತಿ

56 ಪ್ರಕರಣಗಳಲ್ಲಿ ಒಟ್ಟು 6,050 ಕೆಜಿ ಪಟಾಕಿಯನ್ನು ಜಪ್ತಿ ಮಾಡಲಾಗಿದೆ. ಈ 6,050 ಕೆಜಿ ಪಟಾಕಿಗಳ ಪೈಕಿ 2,400 ಕೆಜಿ ಪಟಾಕಿಯನ್ನು ಉತ್ತರ ಜಿಲ್ಲೆಯ ದೆಹಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿದೆ. ರೋಹಿಣಿ ಜಿಲ್ಲೆಯಲ್ಲೇ 1,163 ಕೆಜಿ ಪಟಾಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇಂದ್ರ ಜಿಲ್ಲೆಯಲ್ಲಿ 298 ಕೆಜಿ ಪಟಾಕಿಯನ್ನು ವಶಕ್ಕೆ ಪಡೆಯಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ನಿಷೇಧ ಮಾಡಲಾದ ಹಿನ್ನೆಲೆಯಲ್ಲಿ, ಪಟಾಕಿ ತಯಾರಿಕ ಸಂಸ್ಥೆಗಳು, ಪಟಾಕಿ ಸಂಗ್ರಹ ಘಟಕಗಳ್ನು ಮುಚ್ಚಲಾಗಿದೆ. ಆದರೂ ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ ಹಾಗೂ ಹರಿಯಾಣದಿಂದ ಜನರು ಕಡಿಮೆ ಬೆಲೆಗೆ ಪಟಾಕಿಯನ್ನು ಭಾರೀ ಪ್ರಮಾಣದಲ್ಲಿ ಖರೀದಿ ಮಾಡಿ ವ್ಯಾಪಾರ ಮಾಡುವ ದಂಧೆಯನ್ನು ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಮುಂದಿನ ವರ್ಷ ಜನವರಿ 1 ರವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿ ಸೆಪ್ಟೆಂಬರ್ 28 ರಂದು ಆದೇಶ ನೀಡಿದೆ. ದೆಹಲಿ ಸರ್ಕಾರವು ಕೂಡಾ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಿದೆ. ಆದರೆ ಈಗ ಅಕ್ರಮವಾಗಿ ಪಟಾಕಿ ಮಾರಾಟವು ನಡೆಯುತ್ತಿದ್ದು, ಹಲವಾರು ಕಡೆಗಳಲ್ಲಿ ಪೊಲೀಸರು ಪಟಾಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದೀಪಾವಳಿ 2021: ಈ ರಾಜ್ಯಗಳಲ್ಲಿ ಪಟಾಕಿ ನಿಷೇಧದೀಪಾವಳಿ 2021: ಈ ರಾಜ್ಯಗಳಲ್ಲಿ ಪಟಾಕಿ ನಿಷೇಧ

ಹೊರ ರಾಜ್ಯಗಳಿಂದ ಪಟಾಕಿ ಖರೀದಿ ಮಾಡಿ ಅಕ್ರಮ ಮಾರಾಟ

ಚಾಂದಿನಿ ಚೌಕ್, ಪಹರ್‌ಗಂಜ್, ಕರೋಲ್ ಬಾಗ್ ಮತ್ತು ಇತರ ಮಾರುಕಟ್ಟೆ ಪ್ರದೇಶಗಳಲ್ಲಿ ಒಟ್ಟು 286 ಕೆಜಿ ಪಟಾಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಾಹದಾರ ಜಿಲ್ಲಾ ಪೊಲೀಸರು ನಾಲ್ವರನ್ನು ಬಂಧಿಸಿ 294 ಕೆಜಿ ಅಕ್ರಮ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ. ಆನಂದ್ ವಿಹಾರ್ ಪ್ರದೇಶದಲ್ಲಿ ಅಕ್ರಮ ಪಟಾಕಿ ಪೂರೈಕೆ ಬಗ್ಗೆ ಮಂಗಳವಾರ ಮಾಹಿತಿ ಲಭಿಸಿದೆ. ಆ ಬಳಿಕ ಕರ್ಕರ್‌ದೂಮ ಸಮೀಪದ ಆರ್ಯನಗರ ಗ್ರಾಮದ ಅಂಗಡಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಒಟ್ಟು 235 ಕೆಜಿ ಅಕ್ರಮ ಪಟಾಕಿಯನ್ನು ಜಪ್ತಿ ಮಾಡಲಾಗಿದ್ದು, ಈ ಅಂಗಡಿಯ ಮಾಲೀಕ ವಿನೋದ್‌ ಕುಮಾರ್‌ (53) ರನ್ನು ಬಂಧನ ಮಾಡಲಾಗಿದೆ. "ಆತ ಹರಿಯಾಣದ ಗುರುಗ್ರಾಮದಿಂದ ಪಟಾಕಿಯನ್ನು ಖರೀದಿ ಮಾಡಿದ್ದಾನೆ," ಎಂದು ಪೊಲೀಸರು ತಿಳಿಸಿದ್ದಾರೆ.

ಆ ನಂತರ ಶಹದಾರ ಜಿಲ್ಲೆಯ ಇತರ ತಂಡಗಳು 59 ಕೆಜಿ ಅಕ್ರಮ ಪಟಾಕಿಗಳನ್ನು ವಶಪಡಿಸಿಕೊಂಡಿದೆ. ಇಲ್ಲಿ ಇಬ್ಬರು ವಶಕ್ಕೆ ಪಡೆಯಲಾಗಿದ್ದು, ಬಂಧಿತ ಆರೋಪಿಗಳನ್ನು ರಾಮ್ ಅವತಾರ್, ಮಾಸುಮ್ ಅಲಿ ಮತ್ತು ಹರೀಶ್ ಸಿಂಘಾಲ್ ಎಂದು ಗುರುತಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಪೊಲೀಸರು 38 ವರ್ಷದ ಮನೀಶ್‌ ಗುಪ್ತಾ ಎಂಬಾತನ ಬಂಧನ ಮಾಡಿದ್ದಾರೆ. ಮಂಗಳವಾರ, ಕಲ್ಯಾಣಪುರಿ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಮಧ್ಯಾಹ್ನ 2.30 ರ ಸುಮಾರಿಗೆ ಕೇಂದ್ರ ಮಾರುಕಟ್ಟೆಯಲ್ಲಿ ವ್ಯಕ್ತಿಯೋರ್ವ ಪಟಾಕಿಯನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಅಂಗಡಿಯಿಂದ ಹನ್ನೆರಡು ಗೋಣಿಚೀಲಗಳು ಮತ್ತು ಎರಡು ಪೆಟ್ಟಿಗೆಗಳಲ್ಲಿ ಪಟಾಕಿಯನ್ನು ಜಪ್ತಿ ಮಾಡಲಾಗಿದೆ. ಒಟ್ಟು 236 ಕೆಜಿ ಪಟಾಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

   ಧೋನಿಯ ಈ ಮಾತನ್ನು ಕೇಳಿದ್ದಿದ್ರೆ ಟೀಂ‌ ಇಂಡಿಯಾ ಪಾಕ್ ವಿರುದ್ಧ ಸೋಲ್ತಾನೆ ಇರ್ಲಿಲ್ಲ | Oneindia Kannada
   English summary
   6,000 kg firecrackers seized in Delhi, 55 Arrested.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X