• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ 5.5 ಲಕ್ಷ ಕೊರೊನಾ ಕೇಸ್: ಸರ್ಕಾರದಿಂದಲೇ ಸ್ಫೋಟಕ ಮಾಹಿತಿ

|
Google Oneindia Kannada News

ದೆಹಲಿ, ಜೂನ್ 9: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮಾಡುತ್ತಿದೆ. ಮಹಾರಾಷ್ಟ್ರ, ತಮಿಳುನಾಡು ಬಿಟ್ಟರೆ ದೆಹಲಿಯಲ್ಲಿ ಅತಿ ಹೆಚ್ಚು ಸೋಂಕು ವರದಿಯಾಗಿದೆ. ಈವರೆಗೂ ದೆಹಲಿಯಲ್ಲಿ 29,943 ಜನರಿಗೆ ಮಹಾಮಾರಿ ವಕ್ಕರಿಸಿದೆ.

   Celebrities we lost during the Lockdown | Oneindia Kannada

   ಭಾರತದಲ್ಲಿ ನಿನ್ನೆಯವರೆಗೂ 2.6 ಲಕ್ಷ ಮಂದಿಗೆ ಕೊವಿಡ್ ಸೋಂಕು ತಗುಲಿದೆ. ಆದರೆ, ದೆಹಲಿಯೊಂದರಲ್ಲಿಯೇ 5.5 ಲಕ್ಷ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಲಿದೆ ಎಂದು ಸ್ವತಃ ದೆಹಲಿ ಉಪಮುಖ್ಯಮಂತ್ರಿ ಹೇಳಿದ್ದಾರೆ.

   ದೆಹಲಿಯವರೆಂದರೆ ಯಾರು? ಮಿಸ್ಟರ್ ಕೇಜ್ರಿವಾಲ್: ಚಿದಂಬರಂ ಪ್ರಶ್ನೆದೆಹಲಿಯವರೆಂದರೆ ಯಾರು? ಮಿಸ್ಟರ್ ಕೇಜ್ರಿವಾಲ್: ಚಿದಂಬರಂ ಪ್ರಶ್ನೆ

   ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಹೇಳಿಕೆ ಈಗ ಭಾರಿ ಆತಂಕಕ್ಕೆ ಕಾರಣವಾಗಿದೆ. ''ಜುಲೈ 31ರ ಅಂತ್ಯದ ವೇಳೆಗೆ ದೆಹಲಿಯಲ್ಲಿ 5.5 ಲಕ್ಷ ಕೊವಿಡ್ ಕೇಸ್ ದಾಖಲಾಗಲಿದ್ದು, ಒಟ್ಟು 80 ಸಾವಿರ ಬೆಡ್‌ಗಳ ಅವಶ್ಯಕತೆ ಇದೆ'' ಎಂದಿದ್ದಾರೆ. ಮುಂದೆ ಓದಿ...

   ಜುಲೈ ಅಂತ್ಯಕ್ಕೆ 5.5 ಲಕ್ಷ ಕೇಸ್

   ಜುಲೈ ಅಂತ್ಯಕ್ಕೆ 5.5 ಲಕ್ಷ ಕೇಸ್

   ''ಜೂನ್ 15 ರವರೆಗೆ 44,000 ಕೊರೊನಾ ಪ್ರಕರಣಗಳು ವರದಿಯಾಗಲಿದೆ ಮತ್ತು ಆಗ 6,600 ಹಾಸಿಗೆಗಳು ಬೇಕಾಗುತ್ತವೆ. ಜೂನ್ 30ರ ಅಂತ್ಯಕ್ಕೆ ಒಂದು ಲಕ್ಷ ಕೇಸ್ ಪತ್ತೆಯಾಗಲಿದೆ. ಆಗ 15 ಸಾವಿರ ಹಾಸಿಗೆಗಳು ಬೇಕಾಗುತ್ತೆ. ಜುಲೈ 15 ರವರ ವೇಳೆ ದೆಹಲಿಯಲ್ಲಿ 2.5 ಲಕ್ಷಕ್ಕೂ ಅಧಿಕ ಕೊರೊನಾ ಕೇಸ್ ದಾಖಲಾಗುತ್ತದೆ. ಆಗ 33,000 ಹಾಸಿಗೆಗಳು ಬೇಕಾಗುತ್ತವೆ. ಜುಲೈ 31ರ ಅಂತ್ಯಕ್ಕೆ ಸೋಂಕಿನ ಸಂಖ್ಯೆ 5.5 ಲಕ್ಷ ದಾಟಲಿದೆ. ಆ ಸಮಯದಲ್ಲಿ 80,000 ಹಾಸಿಗೆಗಳು ಬೇಕಾಗುತ್ತವೆ'' ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.

   ದೆಹಲಿಯಲ್ಲಿ ಹೆಚ್ಚಲಿದೆ ಸೋಂಕು

   ದೆಹಲಿಯಲ್ಲಿ ಹೆಚ್ಚಲಿದೆ ಸೋಂಕು

   ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಬೈಜಾಲ್, ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮತ್ತು ಕೇಂದ್ರ ಸರ್ಕಾರದ ಕೆಲವು ಅಧಿಕಾರಿಗಳ ಜೊತೆ ಸಭೆ ನಡೆಸಿದ ಮನೀಶ್ ಸಿಸೋಡಿಯಾ ಮುಂದಿನ ದಿನಗಳು ಹೇಗಿರಲಿದೆ ಎಂದು ಚರ್ಚಿಸಿದರು. ಮುಂಬರುವ ದಿನಗಳಲ್ಲಿ ದೆಹಲಿಯಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದ್ವಿಗುಣವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

   ಆಸ್ಪತ್ರೆಯ 'ಬೆಡ್'ಗಾಗಿ ಬಡಿದಾಟ: ದಿಲ್ಲಿ ಜನರಿಗೆ ಮೊದಲ ಆದ್ಯತೆಆಸ್ಪತ್ರೆಯ 'ಬೆಡ್'ಗಾಗಿ ಬಡಿದಾಟ: ದಿಲ್ಲಿ ಜನರಿಗೆ ಮೊದಲ ಆದ್ಯತೆ

   ಹಾಸಿಗೆಗಳ ಕೊರತೆ ಉಂಟಾಗಲಿದೆ

   ಹಾಸಿಗೆಗಳ ಕೊರತೆ ಉಂಟಾಗಲಿದೆ

   ಸೋಂಕಿನ ಸಂಖ್ಯೆ ದ್ವಿಗುಣವಾಗುವ ಆತಂಕವಿದ್ದು, ಒಂದು ವೇಳೆ ಸೋಂಕು ಅಧಿಕವಾದರೆ ದೆಹಲಿಯಲ್ಲಿ ಹಾಸಿಗೆಗಳ ಕೊರತೆ ಉಂಟಾಗಲಿದೆ ಎಂದು ಮನೀಶ್ ಸಿಸೋಡಿಯಾ ಎಚ್ಚರಿಕೆ ನೀಡಿದ್ದಾರೆ. ಆ ಕಾರಣದಿಂದಲೇ ಬೆಡ್‌ಗಳನ್ನು ಕಾಯ್ದಿರಿಸಲು ದೆಹಲಿ ಸರ್ಕಾರ ಮುಂದಾಗಿದ್ದು ಎಂದು ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

   ಗರ್ವನರ್ ನಿರಾಕರಣೆ ಮಾಡಿದ್ದು ಏಕೆ?

   ಗರ್ವನರ್ ನಿರಾಕರಣೆ ಮಾಡಿದ್ದು ಏಕೆ?

   ಕೊರೊನಾ ವಿಚಾರದ ದೆಹಲಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪ್ರಜೆಗಳಿಗೆ ಸರ್ಕಾರಿ ಮತ್ತಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದುರಿಸಲು ನಿರ್ಧರಿಸಲಾಗಿತ್ತು. ಆದರೆ, ಸರ್ಕಾರದ ಆ ದೇಶವನ್ನು ರಾಜ್ಯಪಾಲರು ರದ್ದುಗೊಳಿಸಿದರು. 'ಅನಿವಾಸಿ ಎಂಬ ಕಾರಣಕ್ಕೆ ಯಾವುದೇ ರೋಗಿಗೆ ಚಿಕಿತ್ಸೆಯನ್ನು ನಿರಾಕರಿಸಬಾರದು' ಎಂದು ಸೂಚಿಸಿದ್ದರು. ಗರ್ವನರ್ ತಮ್ಮ ಆದೇಶವನ್ನು ಮರುಪರಿಶೀಲನೆ ಮಾಡಲು ಸಹ ಸಿದ್ಧವಿಲ್ಲ ಎಂದು ದೆಹಲಿ ಉಪಮುಖ್ಯಮಂತ್ರಿ ಆರೋಪಿಸಿದ್ದಾರೆ.

   ಶೇಕಡಾ 50 ರಷ್ಟು ಕೇಸಿಗೆ ಮೂಲವಿಲ್ಲ

   ಶೇಕಡಾ 50 ರಷ್ಟು ಕೇಸಿಗೆ ಮೂಲವಿಲ್ಲ

   ನಗರದಲ್ಲಿ ಹೊಸ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಸುಮಾರು 50% ರಷ್ಟು ಕೇಸ್‌ಗಳಿಗೆ ಮೂಲ ಯಾವುದು ಎಂದು ತಿಳಿದಿಲ್ಲ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ. ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಕುರಿತು ಚರ್ಚಿಸಲು ಎಲ್-ಜಿ ಅನಿಲ್ ಬೈಜಾಲ್ ಮಂಗಳವಾರ ಮಧ್ಯಾಹ್ನ ರಾಜಕೀಯ ಪಕ್ಷಗಳ ಸಭೆ ಕರೆದಿದ್ದಾರೆ.

   English summary
   5.5 lakh COVID-19 cases expected in Delhi by July 31, says Deputy Chief Minister Manish Sisodia.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X