ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುರ್ತು ಪರಿಸ್ಥಿತಿಗೆ 43, ಇಂದಿರಾರನ್ನು ಹಿಟ್ಲರ್ ಗೆ ಹೋಲಿಸಿದ ಜೇಟ್ಲಿ

|
Google Oneindia Kannada News

ನವದೆಹಲಿ, ಜೂನ್ 25 : "ಭಾರತದ ದಿವಂಗತ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಹಾಗೂ ಜರ್ಮನಿಯ ಅಡಾಲ್ಫ್ ಹಿಟ್ಲರ್ ಇಬ್ಬರೂ ಸಂವಿಧಾನವನ್ನು ದುರ್ಬಳಕೆ ಮಾಡಿಕೊಂಡವರು. ಪ್ರಜಾತಾಂತ್ರಿಕ ಸಂವಿಧಾನವನ್ನು ಪ್ರಜಾಪ್ರಭುತ್ವದಿಂದ ಸರ್ವಾಧಿಕಾರಕ್ಕೆ ಕೊಂಡೊಯ್ದವರು. ವಿರೋಧ ಪಕ್ಷದ ಬಹುತೇಕ ಸಂಸದರನ್ನು ಬಂಧಿಸಿ, ಅಲ್ಪ ಮತದ ಸರಕಾರವನ್ನು ಎರಡನೇ ಮೂರರಷ್ಟು ಬಹುಮತದ ಸರಕಾರವಾಗಿ ಬದಲಿಸಿದ".

-ಹೀಗೆ ಕಾಂಗ್ರೆಸ್ ನ ಇಂದಿರಾಗಾಂಧಿ ಹಾಗೂ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನನ್ನು ಹೋಲಿಕೆ ಮಾಡಿ, ಟೀಕಿಸಿದವರು ಕೇಂದ್ರ ಸಚಿವ ಅರುಣ್ ಜೇಟ್ಲಿ. ಇದೇ ಸೋಮವಾರಕ್ಕೆ (ಜೂನ್ 25) ನಲವತ್ಮೂರು ವರ್ಷಗಳ ಹಿಂದೆ, ಆಗಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು.

ಕಾಂಗ್ರೆಸ್ ಪಾಲಿಗೆ ಇಂಡಿಯಾ ಈಸ್ ಇಂದಿರಾ: ಬಿಜೆಪಿ ವ್ಯಂಗ್ಯಕಾಂಗ್ರೆಸ್ ಪಾಲಿಗೆ ಇಂಡಿಯಾ ಈಸ್ ಇಂದಿರಾ: ಬಿಜೆಪಿ ವ್ಯಂಗ್ಯ

ಆ ದಿನದ ಕರಾಳ ನೆನಪಿನ ಭಾಗವಾಗಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಟ್ವೀಟ್ ಗಳನ್ನು ಮಾಡಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಟ್ಲರ್ ನ ಆಲೋಚನೆ ಹಾಗಿದ್ದರೆ, ಇಂದಿರಾ ಗಾಂಧಿ ಅವರು ಭಾರತವನ್ನು ವಂಶಪಾರಂಪರ್ಯ ಪ್ರಜಾಪ್ರಭುತ್ವವಾಗಿ ಬದಲಾಯಿಸಲು ಮುಂದಾದರು ಎಂದು ಟೀಕಿಸಿದ್ದಾರೆ.

ಈ ದಿನ ಯಾರು, ಏನು ಟ್ವೀಟ್ ಮಾಡಿದ್ದಾರೆ ಎಂಬುದನ್ನು ತಿಳಿಯಲು ಮುಂದೆ ಓದಿ.

ರಾಣಾ ಸಫ್ವಿ

ಒಂದಾನೊಂದು ಕಾಲದಲ್ಲಿ 28 ಜೂನ್ 1975ರಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ದ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಖಾಲಿ ಸಂಪಾದಕೀಯ ಪುಟವನ್ನು ಪ್ರಕಟಿಸಿತ್ತು.

ಕಾಂಚನ್ ಗುಪ್ತಾ

1975ರ ಈ ದಿನ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದರು. ಮೂಲಭೂತ ಹಕ್ಕು ಅಮಾನತು ಮಾಡಲಾಯಿತು. ನಾಗರಿಕ ಹಕ್ಕುಗಳು ಮೂಲೆ ಸೇರಿದವು. ವಿರೋಧಿ ಪಕ್ಷಗಳವರು ಜೈಲಿನ ಕಂಬಿ ಹಿಂದೆ ನಿಂತರು. ಮಾಧ್ಯಮಗಳ ಏಲೆ ಸೆನ್ಸಾರ್ ತರಲಾಯಿತು. ಪ್ರಜಾಪ್ರಭುತ್ವಕ್ಕೆ ಘಾಸಿಯಾಯಿತು. ಮಧ್ಯರಾತ್ರಿ ಯಾರೋ ಬರಬಹುದು ಎಂಬ ಆತಂಕದಲ್ಲಿ ನಾವು ಬದುಕಿದೆವು.

ನಿಶೀತ್ ಶರಣ್

ತುರ್ತು ಪರಿಸ್ಥಿತಿಯನ್ನು ಜೂನ್ 26ಕ್ಕೆ ಹೇರಬೇಕು ಅಂತ ಇಂದಿರಾಗಾಂಧಿ ಅಂದುಕೊಂಡಿದ್ದರು. ಆದರೆ ಜಯಪ್ರಕಾಶ್ ನಾರಾಯಣರ ಮೆರವಣಿಗೆ 25ನೇ ತಾರೀಕು ಇದ್ದಿದ್ದರಿಂದ ಒಂದು ದಿನ ಮುಂಚಿತವಾಗಿಯೇ ತರುವಂತಾಯಿತು. ಜಯಪ್ರಕಾಶ್ ನಾರಾಯಣ್ ರ ಮೆರವಣಿಗೆ ಮಧ್ಯಾಹ್ನ ಮುಗಿಯಿತು. ಆ ನಂತರ ಗಂಟೆಗಳಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ಎಲ್ಲ ನಾಯಕರ ಬಂಧನವಾಯಿತು ಆರ್ಟಿಕಲ್ 21 ಅಮಾನತಾಯಿತು.

ಗಿರೀಶ್ ಆಳ್ವ

25 ಜೂನ್ 1975: ಭಾರತದ ಇತಿಹಾಸದಲ್ಲೇ ಕರಾಳ ದಿನ.

ಒಂದು ಕುಟುಂಬ ತನ್ನ ಅಧಿಕಾರಕ್ಕೋಸ್ಕರ, ಮತ್ತೆ ಅಧಿಕಾರಕ್ಕೆ ಬರಲು ಕೋಟ್ಯಂತರ ಜನರ ಸ್ವಾತಂತ್ರ್ಯ ಹರಣ ಮಾಡಿತು. ಭಾರತಕ್ಕೆ ಆಗಿದ್ದ ಆ ಅಪಾಯವನ್ನು ಈ ದಿನದಂದು ನಾವೆಲ್ಲರೂ ನೆನಪಿಸಿಕೊಳ್ಳುವ ದಿವಸ.

ಶೆಹಜಾದ್ ಜೈ ಹಿಂದ್

ಮುಂದಿನ ಸಲ ಅವರು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಮಾತನಾಡಿದಾಗ ಹೀಗೊಂದು ನೆನಪು ತರಬೇಕು.

ರವಿಶಂಕರ್ ಪ್ರಸಾದ್, ಕೇಂದ್ರಸಚಿವ

25 ಜೂನ್ 1975ರಂದು ಭಾರತ ಪ್ರಜಾಪ್ರಭುತ್ವವು ಇತಿಹಾಸದಲ್ಲೇ ಅತಿ ದೊಡ್ಡ ಬಿಕ್ಕಟಿಗೆ ಸಾಕ್ಷಿಯಾಯಿತು. ವ್ಯಕ್ತಿ ಸ್ವಾತಂತ್ರ್ಯದ ಮರುಸ್ಥಾಪನೆಗೆ, ಪತ್ರಿಕಾ ಸ್ವಾತಂತ್ರ್ಯ ಹಾಗೂ ನ್ಯಾಯಾಂಗ ವ್ಯವಸ್ಥೆ ಸ್ವಾತಂತ್ರ್ಯಕ್ಕೆ ಯುವ ವಿದ್ಯಾರ್ಥಿ ಮುಖಂಡನಾಗಿ ನಾನು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ್ದೆ. ಅವುಗಳಲ್ಲಿ ಕೆಲವುದನ್ನು ಹಂಚಿಕೊಳ್ತಿದ್ದೇನೆ.

ಯೋಗೇಶ್

ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಸ್ನಾನದ ಕೋಣೆಯಲ್ಲಿರುವಾಗ ತುರ್ತು ಪರಿಸ್ಥಿತಿಗೆ ಸಹಿ ಹಾಕಿಸಿಕೊಂಡರಾ?

ಶಿವಂ ವಿಜ್

ಅಧಿಕಾರದಿಂದ ಭ್ರಷ್ಟಾಚಾರ ಆಗುತ್ತದೆ, ಮತ್ತು ಸಂಪೂರ್ಣ ಅಧಿಕಾರದಿಂದ ಪೂರ್ತಿಯಾಗಿ ಭ್ರಷ್ಟರನ್ನಾಗಿ ಮಾಡುತ್ತದೆ.

English summary
June 25th of 1975 emergency imposed by then prime minister Indira Gandhi. Now 43 year completed on 2018. Here are the some of the twitter reactions. Central minister Arun Jaitley compared Indira Gandhi with Adolf Hitler.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X