ಇರಾಕ್ ನಲ್ಲಿ ಅಪಹರಣಕ್ಕೊಳಗಾಗಿದ್ದ 39 ಭಾರತೀಯರು ಸಾವು: ಸುಷ್ಮಾ

ನವದೆಹಲಿ, ಮಾರ್ಚ್ 20: ಕಳೆದ ನಾಲ್ಕು ವರ್ಷದ ಹಿಂದೆ ಇರಾಕ್ ನ ಮೊಸುಲ್ ಎಂಬಲ್ಲಿ ಅಪಹರಣಕ್ಕೊಳಗಾಗಿದ್ದ 39 ಭಾರತೀಯರು ಸಾವಿಗೀಡಾಗಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

2014 ರಲ್ಲಿ ಐಸಿಸ್(ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಅಂಡ್ ಸಿರಿಯಾ) ಭಯೋತ್ಪಾದಕರು, ಪಂಜಾಬ್ ಮೂಲದ 39 ಭಾರತೀಯರನ್ನು ಅಪಹರಿಸಿದ್ದರು.

ಕಳೆದ ಜುಲೈ ತಿಂಗಳಿನಲ್ಲೇ ಈ ಕುರಿತು ಪ್ರಶ್ನೆ ಎದ್ದಾಗ, 'ಯಾವುದೇ ಸೂಕ್ತ ಸಾಕ್ಷ್ಯಾಧಾರವಿಲ್ಲದೆ 39 ಜನ ಸತ್ತಿದ್ದಾರೆ ಎಂದು ಹೇಳುವುದಕ್ಕಾಗುವುದಿಲ್ಲ' ಎಂದು ಸುಷ್ಮಾ ಸ್ವರಾಜ್ ಹೇಳಿದ್ದರು.

ಇರಾಕಿನಲ್ಲಿ ಕೆಲಸ ಮಾಡುವುದಕ್ಕೆಂಮದು ತೆರಳಿದ್ದ ಭಾರತೀಯರನ್ನು ಐಸಿಸ್ ಸಂಘಟನೆ ಅಪಹರಿಸಿತ್ತು. ಆದರೆ ಆ ನಂತರ ಈ ಕುರಿತು ಯಾವುದೇ ಮಾಹಿತಿ ತಿಳಿದಿರಲಿಲ್ಲ. ಅವರ ಬದುಕಿರುವ ಕುರಿತೂ ಶಂಕೆ ವ್ಯಕ್ತವಾಗಿತ್ತಾದರೂ, ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಡಿಎನ್ ಎ ವರದಿಯ ಆಧಾರದ ಮೇಲೆ ಅವರೆಲ್ಲರೂ ಭಾರತೀಯರು ಎಂಬುದು ದೃಢವಾಗಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+