1984 ರ ಸಿಖ್ ದಂಗೆ ಪ್ರಕರಣ: ಸಜ್ಜನ್ ಕುಮಾರ್ ಅರ್ಜಿ ವಜಾ
ನವದೆಹಲಿ, ಡಿಸೆಂಬರ್ 21: 1984ರ ಸಿಖ್ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಜ್ಜನ್ ಕುಮಾರ್ ಅವರು ಶರಣಾಗಲು ಸಮಯಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಸಿಖ್ ನರಮೇಧಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರನ್ನು ದೆಹಲಿಯ ನ್ಯಾಯಾಲಯ ದೋಷಿ ಎಂದು ಪರಿಗಣಿಸಿ ಡೊ.17 ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.
ಅವರು ಡಿ.31 ರವೊಳಗೆ ಶರಣಾಗಬೇಕೆಂಬ ಆದೇಶಕ್ಕೆ ಪ್ರತಿಯಾಗಿ, ಶರಣಾಗಲು ಜನವರಿ 31 ರವರೆಗೆ ಸಮಯಾವಕಾಶ ನೀಡಬೇಕು ಎಂದು ಸಜ್ಜನ್ ಕುಮಾರ್ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.













Click it and Unblock the Notifications