ರಸ್ತೆಯಲ್ಲಿ 'ಯೋಗಡೇ'ಗೆ ಅನುಮತಿ, ನಮಾಜ್‌ಗೆ ಯಾಕಿಲ್ಲ?: ಪ್ರಧಾನಿ ಬೃಹತ್ ಕಾರ್ಯಕ್ರಮಕ್ಕೆ ಮುಸ್ಲಿಮರ ಆಕ್ಷೇಪ

ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿಯವರು ಅತಿಥಿಯಾಗಿ ಪಾಲ್ಗೊಳ್ಳಬೇಕಿರುವ 'ಅಂತಾರಾಷ್ಟ್ರೀಯ ಯೋಗ ದಿನಾಚರಣೆ'ಗೆ ಸ್ಥಳೀಯ ಕೆಲವು ಮುಸ್ಲಿಂ ಮುಖಂಡರು ಖ್ಯಾತೆ ತೆಗೆದಿದ್ದಾರೆ. ಇಸ್ಲಾಂ ಹಬ್ಬಗಳ ವೇಳೆ ರಸ್ತೆ ಮೇಲೆ ನಮಾಜ್‌ಗೆ ಅವಕಾಶ ನೀಡಿದಿದ್ದರೆ ಯೋಗ ದಿನಕ್ಕೆ ಅವಕಾಶ ನೀಡಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

'ಅಂತಾರಾಷ್ಟ್ರೀಯ ಯೋಗ ದಿನಾಚರಣೆ' ಪ್ರಯುಕ್ತ ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ದೊಡ್ಡ ಪ್ರಮಾಣದ ಯೋಗಡೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ. ರಸ್ತೆಯಲ್ಲಿ 'ಯೋಗಡೇ'ಗೆ ಅನುಮತಿ ನೀಡಿದ್ದನ್ನು ಕೆಲವು ಮುಸ್ಲಿಂ ಮುಖಂಡರು ಪ್ರಶ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ-ರಸ್ತೆ ನಮಾಜ್ ನಿರ್ಬಂಧಗಳನ್ನು ಎದುರಿಸುತ್ತಿದ್ದೇವೆ ಎಂದು ಅವರು ವಾದಿಸಿದ್ದಾರೆ.

International Yoga Day 2026

ಮುಸ್ಲಿಮರ ನಡೆಗೆ ಹಲವರ ಆಕ್ರೋಶ

ಬಕ್ರೀದ್, ಇನ್ನಿತರ ಹಬ್ಬಗಳ ಸಂದರ್ಭದಲ್ಲಿ ಮುಸ್ಲಿಮರು ರಸ್ತೆಗಳಲ್ಲಿ, ಮೈದಾನಗಳಲ್ಲಿ ನಮಾಜ್ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎನ್ನುವ ನೀವು, ಈಗ ರಸ್ತೆಯಲ್ಲಿ ಯೋಗಾ ದಿನಾಚರಣೆಗೆ ಅವಕಾಶ ಹೇಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿ ಶುಕ್ರವಾರ ನಮಾಝ್‌ಗಾಗಿ ಅಕ್ರಮವಾಗಿ ಬೀದಿಗಿಳಿಯುವ ಈ ಧಾರ್ಮಿಕ ಮತಾಂಧರಿಗೆ ಇಂತಹ ಪ್ರಶ್ನೆಗಳನ್ನು ಕೇಳುವ ಹಕ್ಕಿದೆಯೇ?, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಜೈಲಿಗೆ ಹಾಕಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಬಂಡಾಯದ ಬಿರುಗಾಳಿಯಿಂದ TMC ಚಿದ್ರ; 20 ಎಂಪಿಗಳಿಂದ ಅಚ್ಚರಿ ನಿರ್ಧಾರ, ಮಮತಾ ಬ್ಯಾನರ್ಜಿಗೆ ಭಾರೀ ಆಘಾತ
ಬಂಡಾಯದ ಬಿರುಗಾಳಿಯಿಂದ TMC ಚಿದ್ರ; 20 ಎಂಪಿಗಳಿಂದ ಅಚ್ಚರಿ ನಿರ್ಧಾರ, ಮಮತಾ ಬ್ಯಾನರ್ಜಿಗೆ ಭಾರೀ ಆಘಾತ

ಬೀದಿಗಿಳಿದು ನಮಾಜ್ ಮಾಡುವಂತೆ ಒತ್ತಾಯಿಸುವವರನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಕಳುಹಿಸುವ ಸಮಯ ಬಂದಿದೆಯೇ?, ಪಶ್ಚಿಮ ಬಂಗಾಳದಲ್ಲಿ ವಲಸಿಗರು ಬಾಲ ಬಿಚ್ಚುತ್ತಿದ್ದಾರೆ ಎಂದು ಕೆಲವು ನೆಟ್ಟಿಗರು ಕಿಡಿ ಕಾರಿದ್ದಾರೆ.

ಬೃಹತ್ ಕಾರ್ಯಕ್ರಮ ಆಯೋಜನೆ: ಸಾವಿರಾರು ಯೋಗಪಟುಗಳು ಭಾಗಿ!

ಜೂನ್ 21ರಂದು ಕೋಲ್ಕತ್ತಾದ ಐತಿಹಾಸಿಕ 'ರೆಡ್ ರೋಡ್‌'ನಲ್ಲಿ ಬೃಹತ್ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳು ಪಾಲ್ಗೊಂಡು ಯೋಗ ಮಾಡಲಿದ್ದಾರೆ. ಯೋಗದ ಮಹತ್ವವನ್ನು ಜಗತ್ತಿಗೆ ಸಾರಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬೃಹತ್ ಕಾರ್ಯಕ್ರಮ ಇದಾಗಿದ್ದು, ಕೋಲ್ಕತ್ತಾ ನಗರದಲ್ಲಿ ಭರ್ಜರಿ ತಯಾರಿಗಳು ನಡೆಯುತ್ತಿವೆ.

ಈ ಅದ್ದೂರಿ ಕಾರ್ಯಕ್ರಮದಲ್ಲಿ ಸುಮಾರು 30,000ಕ್ಕೂ ಹೆಚ್ಚು ಯೋಗಪಟುಗಳು ಹಾಗೂ ನಾಗರಿಕರು ಒಟ್ಟಾಗಿ ಯೋಗಾಭ್ಯಾಸ ನಡೆಸಲಿದ್ದಾರೆ. ನಗರದಲ್ಲಿ ಕೋಲ್ಕತ್ತಾದ ಭದ್ರತೆ ಹೆಚ್ಚಿಸಲಾಗಿದೆ. ಪ್ರಮುಖ ರಸ್ತೆ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಜಾರಿಗೆ ತರಲು ತೀರ್ಮಾನಿಸಲಾಗಿದೆ. ಪ್ರಧಾನಿಯವರ ಆಗಮನದಿಂದಾಗಿ ಇಡೀ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಪ್ರಮುಖ ರಸ್ತೆಗಳು ಬಂದ್, ಮುಸ್ಲಿಮರು ಹೇಳುವುದೇನು?

ನಗರದ ಏಳು ಪ್ರಮುಖ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ನಿರ್ಧರಿಸಲಾಗಿದೆ. ಜೂನ್ 20ರ ಮಧ್ಯರಾತ್ರಿಯಿಂದಲೇ ಈ ಹೆದ್ದಾರಿಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಹೀಗೆ ರಸ್ತೆ ಬಂದ್ ಮಾಡಿ ಯೋಗ ಮಾಡುವುದನ್ನು ಕೆಲವು ಮುಸ್ಲಿಂ ಪ್ರತಿನಿಧಿಗಳು ಪ್ರಶ್ನಿಸಿದ್ದಾರೆ. ಸಂಚಾರ ದಟ್ಟಣೆಯ ಕಾರಣವನ್ನು ನೀಡಿ ಸಾರ್ವಜನಿಕವಾಗಿ ಯೋಗ ಮಾಡಲು ರಸ್ತೆಗಳನ್ನು ಮುಚ್ಚುವುದಾದರೆ, ಅದೇ ರಸ್ತೆಗಳಲ್ಲಿ ಧಾರ್ಮಿಕ ನಮಾಜ್ ಪ್ರಾರ್ಥನೆ ಮಾಡಲು ನಮಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಧಾರ್ಮಿಕ ಪ್ರಾರ್ಥನೆಗೆ ಒಂದು ನಿಯಮ ಮತ್ತು ಯೋಗಕ್ಕೆ ಮತ್ತೊಂದು ನಿಯಮವೇ ಎಂದಿರುವುದು ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ನಮಾಜ್ ಸ್ಥಳಾಂತರಕ್ಕೆ ಈಗ ಮುಸ್ಲಿಮರು ಕಿಡಿ

ಸಂವಿಧಾನದ ನಿಯಮ ಮತ್ತು ಸಮಾನತೆಯ ಹಕ್ಕಿನ ಕುರಿತು ಮಾತನಾಡಿರುವ ಮುಸ್ಲಿಂ ಧರ್ಮಗುರುಗಳು, ಈ ಹಿಂದೆ ರೆಡ್ ರೋಡ್‌ನಲ್ಲಿ ನಡೆಯುತ್ತಿದ್ದ ಈದ್ ನಮಾಜ್ ಅನ್ನು ನಗರದ ಸಾರಿಗೆ ಇಲಾಖೆಯ ಸಂಚಾರಕ್ಕೆ ಅಡಚಣೆಯಾಗುವ ಕಾರಣಕ್ಕೆ ಬ್ರಿಗೇಡ್ ಪರೇಡ್ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಅದೇ ರಸ್ತೆಯಲ್ಲಿ ಒಂದು ದಿನ ಯೋಗಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+