ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದ ಮತ್ತೆ 7 ಭಾರತೀಯರು

|
Google Oneindia Kannada News

ದೆಹಲಿ, ಮಾರ್ಚ್ 14: ಜಗತ್ತಿನಾದ್ಯಂತ ಕೊರೊನಾ ವೈರಸ್‌ ರುದ್ರನರ್ತನಕ್ಕೆ 5 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಚೀನಾವೊಂದರಲ್ಲಿ 3 ಸಾವಿರ ಗಡಿ ದಾಟಿದ್ದು, ಇಟಲಿಯಲ್ಲಿ 1.2 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಇದುವರೆಗೂ ಇಬ್ಬರು ಸಾವನ್ನಪ್ಪಿದ್ದಾರೆ.

ಚೀನಾದಲ್ಲಿ ಕೊರೊನಾ ಸೋಂಕಿತರು ಚೇತರಿಕೆ ಕಾಣುತ್ತಿದ್ದಾರೆ. ಮೊದಲು ಇದ್ದಂತೆ ಈಗ ಚೀನಾದಲ್ಲಿ ಪರಿಸ್ಥಿತಿ ಇಲ್ಲ. ಈಗ ಎಲ್ಲವೂ ನಿಯಂತ್ರಣದಲ್ಲಿದೆ. ಇದೀಗ, ಭಾರತದಲ್ಲೂ ಕೊರೊನಾ ಸೋಂಕಿತರು ಚೇತರಿಕೆ ಕಂಡಿರುವ ಪ್ರಕರಣಗಳು ಹೆಚ್ಚಾಗುತ್ತಿದೆ.

ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಕೊರೊನಾ ಕೇಸ್ ಎಷ್ಟು?ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಕೊರೊನಾ ಕೇಸ್ ಎಷ್ಟು?

ಸದ್ಯ, ಭಾರತದಲ್ಲಿ ಹೊಸದಾಗಿ 7 ಕೊರೊನಾ ಸೋಂಕಿತರು ಚೇತರಿಕೆ ಕಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸೋಂಕು ಖಚಿತವಾದ ಮೇಲೆ ಪ್ರತ್ಯೇಕ ಕೊಠಡಿಯಲ್ಲಿರಿಸಿ, ಕೆಲವು ನಿಯಂತ್ರಣ ಕ್ರಮ ಜರುಗಿಸಿದ ಬಳಿಕ ಅವರಲ್ಲಿ ಸಂಪೂರ್ಣ ಚೇತರಿಕೆ ಕಂಡಿದೆ ಎನ್ನಲಾಗಿದೆ. ಮುಂದೆ ಓದಿ....

ಹೊಸದಾಗಿ ಏಳು ಜನ ಚೇತರಿಕೆ

ಹೊಸದಾಗಿ ಏಳು ಜನ ಚೇತರಿಕೆ

ಭಾರತದಲ್ಲಿ ಒಂದು ಕಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೊಂದು ಕಡೆ ಸೋಂಕಿತರು ಚೇತರಿಕೆ ಕಾಣುತ್ತಿದ್ದಾರೆ ಎಂಬ ಸಂತಸ ವಿಚಾರ ತಿಳಿದು ಬಂದಿದೆ. ಭಾರತದಲ್ಲಿ ಒಟ್ಟು 83 ಕೊರೊನಾ ಕೇಸ್‌ ಗಳು ದಾಖಲಾಗಿದೆ. ಇದೀಗ, ಹೊಸದಾಗಿ ಏಳು ಜನರು ಚೇತರಿಕೆ ಕಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಎಲ್ಲೆಲ್ಲಿ ಚೇತರಿಕೆ ಕಂಡಿದೆ

ಎಲ್ಲೆಲ್ಲಿ ಚೇತರಿಕೆ ಕಂಡಿದೆ

ಭಾರತದಲ್ಲಿ ಒಟ್ಟು ಹತ್ತು ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅದರಲ್ಲಿ ಹೊಸದಾಗಿ ಏಳು ಜನರು ಸೋಂಕಿನಿಂದ ಹೊರಬಂದಿದ್ದಾರೆ. ಉತ್ತರ ಪ್ರದೇಶದಲ್ಲಿ 5, ದೆಹಲಿ ಮತ್ತು ರಾಜಸ್ಥಾನದಲ್ಲಿ ತಲಾ ಒಬ್ಬರು ಕೊರೊನಾ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ ಎನ್ನಲಾಗಿದೆ.

ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?

ಅಂತಿಮ ಫಲಿತಾಂಶದ ನಂತರ ನಿರ್ಧಾರ

ಅಂತಿಮ ಫಲಿತಾಂಶದ ನಂತರ ನಿರ್ಧಾರ

''ಯಾವುದೇ ವ್ಯಕ್ತಿಯನ್ನು ಪರೀಕ್ಷಿಸಿದ ಬಳಿ ಪಾಸಿಟೀವ್ ಎಂದು ಬಂದರೆ ನಿರ್ದಿಷ್ಟ ಅವಧಿಗೆ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ನಿಗಾ ವಹಿಸಬೇಕಾಗುತ್ತದೆ. 14 ದಿನಗಳ ಬಳಿಕ ಮತ್ತೊಮ್ಮೆ ಆ ವ್ಯಕ್ತಿಯ ಪರೀಕ್ಷೆ ಮಾಡಲಾಗುವುದು. ಆಗ ಪಾಸಿಟೀವ್ ಬಂದರೆ ಮತ್ತೊಮ್ಮೆ ಚಿಕಿತ್ಸೆ ಮುಂದುವರಿಸಲಾಗುತ್ತೆ. ಅಥವಾ ನೆಗಿಟೀವ್ ಬಂದರೆ ಆ ವ್ಯಕ್ತಿಯನ್ನು ವೈರಸ್ ಮುಕ್ತ ಎಂದು ನಿರ್ಧರಿಸಲಾಗುತ್ತೆ. ಬಳಿಕ ಡಿಸ್ಚಾರ್ಜ್ ಮಾಡಲಾಗುವುದು'' ಕೇಂದ್ರ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೇರಳದಲ್ಲಿ ಮೂರು ಕೇಸ್

ಕೇರಳದಲ್ಲಿ ಮೂರು ಕೇಸ್

ಭಾರತದಲ್ಲಿ ಮೊದಲ ಸಲ ಕೊರೊನಾ ಪತ್ತೆಯಾಗಿದ್ದೇ ಕೇರಳದಲ್ಲಿ. ಈಗ ಕೇರಳದಲ್ಲಿ ಸೋಂಕಿರ ಸಂಖ್ಯೆ ಹೆಚ್ಚಾಗಿದೆ. ಆದರೆ, ಇದುವರೆಗೂ ಕೇರಳದಲ್ಲಿ ಒಟ್ಟು ಮೂರು ಕೇಸ್ ಕೊರೊನಾದಿಂದ ಹೊರಬಂದಿದ್ದಾರೆ. ಆರಂಭದಲ್ಲಿ ಪತ್ತೆಯಾದ ಮೂವರು ಸೋಂಕಿನಿಂದ ತಪ್ಪಿಸಿಕೊಂಡಿದ್ದರು.

English summary
10 Covid-19 Patients Cured In India Till Today said reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X