Get Updates
Get notified of breaking news, exclusive insights, and must-see stories!

Navalgund Constituency: ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ನಡುವೆ ಭಾರಿ ಪೈಪೋಟಿ

ನವಲಗುಂದ, ಮಾರ್ಚ್‌, 24: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಎಲ್ಲಾ ಪಕ್ಷಗಳ ರಾಜಕಾರಣಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾರ್ಯನಿರತರಾಗಿದ್ದಾರೆ. ಹಾಗಾದ್ರೆ ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಹೇಗಿದೆ ಎಂದು ತಿಳಿಯೋಣ ಬನ್ನಿ.

ನವಲಗುಂದ ಕ್ಷೇತ್ರ ಧಾರವಾಡ ಜಿಲ್ಲೆಯ ವಿಭಿನ್ನ ಮತ್ತು ರೈತರ ಬಂಡಾಯದ ನಾಡು ಎಂದೇ ಪ್ಯಾಖ್ಯಾತಿ ಪಡೆದಿದೆ. ಮಹಾದಾಯಿ ಹೋರಾಟದ ಕಿಚ್ಚು ನವಲಗುಂದದ ಬಂಡಾಯದ ನೆಲದಿಂದಲೇ ಆರಂಭವಾಗಿದ್ದು ಇನ್ನು ವಿಶೇಷವಾಗಿದೆ. ಇದು ಇಡೀ ದೇಶವ್ಯಾಪಿ ಹಬ್ಬುವ ಮೂಲಕ ರೈತರ ತಾಕತ್ತು ಏನು ಎಂದು ತೋರಿಸಿದ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಒಂದು ಬಾರಿ ಗೆಲುವು ಪಡೆದಿರುವ ಅಭ್ಯರ್ಥಿಯನ್ನು ಮತ್ತೆ ಇಲ್ಲಿನ ಮತದಾರ ಪ್ರಭುಗಳು ಆಯ್ಕೆ ಮಾಡಿದ ಸಂದರ್ಭವೇ ಇಲ್ಲ.

navalagunda map

ನವಲಗುಂದ ಕ್ಷೇತ್ರ ಪರಿಚಯ

ಇಲ್ಲಿ ಒಂದು ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಮತ್ತೊಂದು ಬಾರಿ ಮತದಾರರು ಬಿಜೆಪಿಯತ್ತ ಒಲವು ತೋರಿದ್ದರು. ನಂತರ ಇವೆರಡನ್ನೂ ಧಿಕ್ಕರಿಸಿ ಜೆಡಿಎಸ್‌ ಪಕ್ಷವನ್ನು ಕೂಡ ಜಯದತ್ತ ತೆಗೆದುಕೊಂಡು ಹೋಗಿದ್ದರು. ಹೀಗೆ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣ ಆಗಿರುವ ಈ ಕ್ಷೇತ್ರ, ಈ ಬಾರಿ ಇಲ್ಲಿನ ಗೆಲುವಿನ ಕೇಕೆ ಹಾಕಲು ಮೂರು ಪಕ್ಷಗಳಿಂದಲೂ ಭಾರಿ ತಯಾರಿ ನಡೆದಿದೆ.

ಸೋಲು, ಗೆಲುವಿನ ಲೆಕ್ಕಾಚಾರ

2018ರಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿಯ ಶಂಕರಪಾಟೀಲ್‌ ಮುನೇನಕೊಪ್ಪ ಶಾಸಕರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಕ್ಷೇತ್ರದಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ ಪಾಳಯದಲ್ಲಿ ಅಭ್ಯರ್ಥಿ ಯಾರು ಅನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ. ಇನ್ನು 2013ರಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧೆಗಿಳಿದು ವಿಜಯಪತಾಕೆ ಹಾರಿಸಿದ್ದ ಎಸ್‌.ಹೆಚ್‌. ಕೋನರೆಡ್ಡಿ ಇದೀಗ ಕಾಂಗ್ರೆಸ್‌ ಸೇರ್ಪಡೆ ಆಗಿದ್ದಾರೆ.

2018ರಲ್ಲಿ ಸೋಲು ಕಂಡ ಬಳಿಕ ಇತ್ತೀಚೆಗಷ್ಟೇ ತೆನೆ ಕೆಳಗಿಳಿಸುವ ಮೂಲಕ ಕೈ ಹಿಡಿದಿದ್ದು, ಇದೀಗ ಮುಂದಿನ ಜೆಡಿಎಸ್‌ ಅಭ್ಯರ್ಥಿ ಯಾರು ಅನ್ನುವುದೇ ಪಕ್ಷದ ನಾಯಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದನ್ನು ಹೊರತುಪಡಿಸಿದರೆ ಕಾಂಗ್ರೆಸ್‌ ಪಾಳೆಯದಲ್ಲೂ ಈಗಾಗಲೇ ಸ್ಪರ್ಧಿಸಿ ಸೋಲನುಭವಿಸಿರುವ ವಿನೋದ್‌ ಅನೂಟಿ ಕೂಡ ಈ ಬಾರಿ ಚುನಾವಣೆಗೆ ಟಿಕೆಟ್‌ಗಾಗಿ ಬಕಪಕ್ಷಿಯಂತೆ ಕಾದು ಕುಳಿತಿದ್ದಾರೆ.

bjp jds congress

ಮೂರು ಪಕ್ಷಗಳಿಂದ ಭಾರಿ ಪೈಪೋಟಿ

ಈ ಮಧ್ಯೆ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರ್ಪಡೆಯಾಗಿರುವ ಎನ್‌.ಎಚ್‌.ಕೋನರೆಡ್ಡಿ ಸಹ ಕಾಂಗ್ರೆಸ್‌ನಿಂದ ನವಲಗುಂದ ಕ್ಷೇತ್ರದಲ್ಲಿ ಸ್ಪರ್ಧಿಸಲು ಭಾರಿ ತಯಾರಿ ಮಾಡಿಕೊಂಡಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಅಂತಲೇ ಗುರುತಿಸಿಕೊಂಡಿರುವ ವಿನೋದ್‌ ಅನೂಟಿಗೆ ಮತ್ತೆ ಕಾಂಗ್ರೆಸ್‌ ಟಿಕೆಟ್‌ ಸಿಗುತ್ತದೆಯೇ ಅಥವಾ ಕೋನರೆಡ್ಡಿಗೆ ನೀಡುತ್ತಾರೆಯೋ ಅನ್ನುವುದನ್ನು ಕಾದುನೋಡಬೇಕಿದೆ.

ಟಿಕೆಟ್‌ಗಾಗಿ ಕಾಳಗ ಶುರು

ಮತ್ತೊಂದೆಡೆ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ಆಪ್ತ ಹಾಲಿ ಸಚಿವ ಶಂಕರಪಾಟೀಲ್‌ ಮುನೇನಕೊಪ್ಪ ಬಹುತೇಕ ಖಚಿತವಾದಂತಾಗಿದೆ. ಈ ಹಿಂದೆ ಮುನೇನಕೊಪ್ಪ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು. ಇನ್ನು ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಲ್ಲಿ ಇಬ್ಬರಿದ್ದು, ಅವರಲ್ಲಿ ಎನ್‌.ಎಚ್‌. ಕೋನರೆಡ್ಡಿ ಮತ್ತು ಕಾಂಗ್ರೆಸ್‌ ಯುವ ನಾಯಕ ವಿನೋದ್‌ ಅನೂಟಿ ಈಗಾಗಲೇ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆಸಿದ್ದಾರೆ.

ನವಲಗುಂದ ಕ್ಷೇತ್ರದಲ್ಲಿ ಟಿಕೆಟ್‌ ಸಮರ

ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್‌ ಫೈಟ್‌ ಒಂದು ಕಡೆಯಾದರೆ, ಮತ್ತೊಂದೆಡೆ ಈ ಫೈಟ್‌ ನಡುವೆ ಜೆಡಿಎಸ್‌ ಮಾತ್ರ ಇನ್ನೂ ಅಭ್ಯರ್ಥಿ ಹುಡುಕಾಟದಲ್ಲೇ ಕಾರ್ಯನಿರತವಾಗಿದೆ. ಇತ್ತೀಚೆಗಷ್ಟೇ ಬಸವರಾಜ ಹೊರಟ್ಟಿ ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆ ಆಗಿದ್ದು, ಇದೀಗ ಇದರಿಂದ ಜೆಡಿಎಸ್‌ ಪಕ್ಷಕ್ಕೆ ದೊಡ್ಡ ನಷ್ಟ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

 jds bjp congress

ಈ ನಡುವೆ ಯಾರು ಮುಂದಿನ ಅಭ್ಯರ್ಥಿ ಎನ್ನುವ ಹುಡುಕಾಟ ಆರಂಭ ಆಗಿದ್ದು, ಪ್ರಕಾಶ್‌ ಅಂಗಡಿ, ಶಿವಶಂಕರ್‌ ಕಲ್ಲೂರು, ಶ್ರೀಶೈಲ ಮೂಲಿಮನಿ ಮುಂಚೂಣಿಯಲ್ಲಿ ಇದ್ದಾರೆ ಎನ್ನಲಾಗಿದೆ. ಇನ್ನು ನವಲಗುಂದ ಕ್ಷೇತ್ರದಲ್ಲಿ ಹೆಚ್ಚು ಲಿಂಗಾಯತ ಮತಗಳಿವೆ. ಅದರಲ್ಲೂ ಲಿಂಗಾಯತ ಪಂಚಮಸಾಲಿ ಮತಗಳು ನಿರ್ಣಾಯಕವಾಗಿವೆ. ಹಾಲಿ ಶಾಸಕ ಮುನೇನಕೊಪ್ಪ ಇದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದನ್ನು ಬಿಟ್ಟರೆ ಕುರುಬ, ರೆಡ್ಡಿ ಸಮುದಾಯದ ಮತದಾರರಿದ್ದಾರೆ.

2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಆರ್‌.ಬಿ. ಶಿರಿಯಣ್ಣನವರ್‌ 30,191 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಎನ್‌.ಗಡ್ಡಿ ಅವರು 3,839 ಮತಗಳ ಅಂತರದಿಂದ ಸೋಲುಂಡಿದ್ದರು. ನಂತರ 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಂಕರಪಾಟೀಲ್‌ ಮುನೇನಕೊಪ್ಪ 49,436 ಮತಗಳನ್ನು ಪಡೆದು ಗೆಲುವು ಸಾಧಿದ್ದರು. ಇವರ ವಿರುದ್ದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎನ್‌. ಗಡ್ಡಿ 16,895 ಮತಗಳ ಅಂತರದಿಂದ ಸೋಲನುಭವಿಸಿದ್ದರು.

2013ರಲ್ಲಿ ಎನ್‌.ಹೆಚ್‌. ಕೋನರೆಡ್ಡಿ ಜೆಡಿಎಸ್‌ನಿಂದ ಸ್ಪರ್ಧಿಸಿ 44,448 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು, ಇವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಂಕರಪಾಟೀಲ್‌ ಮುನೇನಕೊಪ್ಪ 2669 ಮತಗಳ ಅಂತದಿಂದ ಸೋತಿದ್ದರು. ಇನ್ನು 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಂಕರಪಾಟೀಲ್‌ ಮುನೇನಕೊಪ್ಪ 65,718 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಇವರ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎನ್‌.ಹೆಚ್‌ ಕೋನರೆಡ್ಡಿ 20,521 ಮತಗಳ ಅಂತರದಿಂದ ಸೋಲು ಕಂಡಿದ್ದರು.

ವರ್ಷ ವಿಜೇತರು ಮತಗಳು ಸೋತವರು ಮತಗಳು
2004 ಆರ್‌.ಬಿ. ಶಿರಿಯಣ್ಣನವರ್‌ (ಬಿಜೆಪಿ) 30191 ಕೆ.ಎನ್‌.ಗಡ್ಡಿ (ಕಾಂಗ್ರೆಸ್‌) 26356
2008 ಶಂಕಪಾಟೀಲ ಮುನೇನಕೊಪ್ಪ (ಬಿಜೆಪಿ) 49436 ಕೆ.ಎನ್‌.ಗಡ್ಡಿ (ಕಾಂಗ್ರೆಸ್‌) 32541
2013 ಎನ್‌.ಹೆಚ್‌.ಕೋನರೆಡ್ಡಿ (ಜೆಡಿಎಸ್‌) 44448 ಮುನೇನಕೊಪ್ಪ (ಬಿಜೆಪಿ) 41779
2018 ಶಂಕಪಾಟೀಲ ಮುನೇನಕೊಪ್ಪ (ಬಿಜೆಪಿ) 44448 ಕೋನರೆಡ್ಡಿ (ಜೆಡಿಎಸ್‌) 45197

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+