Narasimharaja Elections: ತನ್ವೀರ್ ಸೇಠ್‌ಗೆ ಕಾಂಗ್ರೆಸ್ ಟಿಕೆಟ್, ನರಸಿಂಹರಾಜ ಕ್ಷೇತ್ರದ ಗೆಲುವು ಯಾರ ಪಾಲು?
ಮೈಸೂರು, ಮಾರ್ಚ್ 26: ಸಾಂಸ್ಕೃತಿಕ ನಗರಿ ಮೈಸೂರಿನ 11 ವಿಧಾನಸಭಾ ಕ್ಷೇತ್ರಗಳಲ್ಲಿ ನರಸಿಂಹರಾಜ ಕ್ಷೇತ್ರ ಕೂಡ ಒಂದು. ಮೈಸೂರು ನಾರ್ಥ್(ಉತ್ತರ ಮೈಸೂರು) ಎಂದೇ ಕರೆಸಿಕೊಳ್ಳುತ್ತಿದ್ದ ಈ ಕ್ಷೇತ್ರಕ್ಕೆ ಕಂಠೀರವ ನರಸಿಂಹರಾಜ ಒಡೆಯರ್ ಕ್ಷೇತ್ರ ಎಂದು ಮರುನಾಮಕರಣ ಮಾಡಲಾಯಿತು. ಸದ್ಯ ಇದನ್ನು ನರಸಿಂಹರಾಜ ಕ್ಷೇತ್ರ ಎಂದು ಕರೆಯಲಾಗುತ್ತದೆ.
ರಾಜ್ಯದಲ್ಲಿಯೇ ಮುಸ್ಲಿಂ ಸಮುದಾಯದ ಕ್ಷೇತ್ರ ಎಂದು ಗುರುತಿಸಿಕೊಂಡಿರುವ ಕ್ಷೇತ್ರಗಳಲ್ಲಿ ನರಸಿಂಹರಾಜ ಮತಕ್ಷೇತ್ರವೂ ಒಂದು. ಇದುವರೆಗೂ ನಡೆದಿರುವ 16 ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದೊಂದು ಮುಸ್ಲಿಂ ಸಮುದಾಯದ ಭದ್ರಕೋಟೆಯಾಗಿದೆ. 13 ಬಾರಿ ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದು, ಅಜೀಜ್ ಸೇಠ್ ಹಾಗೂ ಪುತ್ರ ತನ್ವೀರ್ ಸೇಠ್ ಅವರೇ 11 ಬಾರಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ.

ನರಸಿಂಹರಾಜ ಕ್ಷೇತ್ರದ ರಾಜಕೀಯ ಹಿನ್ನೆಲೆ
1952ರ ಸಾರ್ವತ್ರಿಕ ಚುನಾವಣೆಯಲ್ಲಿ ಮೈಸೂರು ನಾರ್ಥ್ ಎಂದು ಕರೆಸಿಕೊಳ್ಳುತ್ತಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಟಿ. ಮರಿಯಪ್ಪ ಗೆಲುವು ಸಾಧಿಸಿದ್ದರು. 1957 ರಲ್ಲಿ ಮಹಮದ್ ಸೇಠ್, 1962ರಲ್ಲಿ ಬಿ.ಕೆ. ಪುಟ್ಟಯ್ಯ , 1985 ಮುಕ್ತಾರುನ್ನೀಸಾ ಬೇಗಂ 1994ರಲ್ಲಿ ಇ.ಮಾರುತಿ ರಾವ್ ಪವಾರ್ ಬಿಟ್ಟರೆ, 1967, 1972, 1978,1983, 1989, 1999ರಲ್ಲಿ ಅಜೀಜ್ ಸೇಠ್ ನರಸಿಂಹರಾಜ ಕ್ಷೇತ್ರದಲ್ಲಿ ಸತತ ಗೆಲುವು ಸಾಧಿಸಿದ್ದಾರೆ. ತಂದೆಯ ರಾಜಕೀಯವನ್ನು ಸಮೀಪದಿಂದ ಕಂಡ ಪುತ್ರ ತನ್ವೀರ್ ಸೇಠ್ 2002ರಿಂದ ಚುನಾವಣ ಕಣಕ್ಕಿಳಿದಿದ್ದು, 2004, 2008, 2013, 2018ರಲ್ಲಿ ಸೋಲಿಲ್ಲದ ಸರದಾರನಂತೆ ಗೆಲುವನ್ನು ಕಂಡಿದ್ದಾರೆ.
ನರಸಿಂಹರಾಜ ಕ್ಷೇತ್ರದ ಪ್ರಸ್ತುತ ರಾಜಕರಣ
ನರಸಿಂಹರಾಜ ಕ್ಷೇತ್ರದ ಸಾಮ್ರಾಟ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಹೀಗಾಗಿ ಆರೋಗ್ಯದ ಕಾರಣ ನೀಡಿ ಈ ಬಾರಿ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದರು. ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರಿಗೆ ಮನವಿ ಸಲ್ಲಿಸಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಕಾಂಗ್ರೆಸ್ ಮುಖಂಡರು ಸಮಾಧಾನಪಡಿಸಿ ಈ ಬಾರಿಯೂ ನರಸಿಂಹರಾಜ ಕ್ಷೇತ್ರದ ಟಿಕೆಟ್‌ನನ್ನು ತನ್ವೀರ್ ಸೇಠ್‌ಗೆ ನೀಡಿದ್ದಾರೆ.

ಧರ್ಮದ ಆಧಾರದ ಮೇಲೆಯೇ ಚುನಾವಣೆ ನಡೆಯುವ ನರಸಿಂಹರಾಜ ಕ್ಷೇತ್ರದಲ್ಲಿ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಗೆಲುವು ಸಾಧಿಸಲು ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸಿದೆ. ಎರಡು ಬಾರಿ ಪರಾಭವಗೊಂಡಿರುವ ಸಂದೇಶ್ ಸ್ವಾಮಿಯವರೇ ಈ ಬಾರಿಯೂ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಈ ನಡುವೆ ಆಮ್ ಆದ್ಮಿ ಪಕ್ಷದ ಪಡೆಯೂ ಕ್ಷೇತ್ರದಲ್ಲಿ ಸೇವಾ ಕಾರ್ಯದ ಮೂಲಕ ಮುಖ್ಯ ವಾಹಿನಿಗೆ ಇಳಿದಿದೆ. ಇನ್ನು ಕ್ಷೇತ್ರದಲ್ಲಿ ಜೆಡಿಎಸ್ ಕೂಡ ಈ ಬಾರಿ ಪ್ರಬಲ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಹೀಗಾಗಿ ಈ ಬಾರಿ ಕ್ಷೇತ್ರದಲ್ಲಿ ಮತ್ತಷ್ಟು ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಿದೆ.
2018 ನರಸಿಂಹರಾಜ ವಿಧಾನಸಭಾ ಚುನಾವಣಾ ಫಲಿತಾಂಶ
2018 ಚುನಾವಣೆಯಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ತನ್ವೀರ್ ಸೇಠ್ ಕಣಕ್ಕಳಿದಿದ್ದು, 62,268 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಂದೇಶ್ ಸ್ವಾಮಿ 44,141 ಮತಗಳನ್ನು ಪಡೆದು 18,127 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು.
Narasimharaja Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018td> | ತನ್ವೀರ್ ಸೇಠ್ (ಕಾಂಗ್ರೆಸ್) | 62,268 | ಸಂದೇಶ್ ಸ್ವಾಮಿ(ಬಿಜೆಪಿ) | 44,141 |
| 2013 | ತನ್ವೀರ್ ಸೇಠ್ (ಕಾಂಗ್ರೆಸ್) | 38,037 | ಅಬ್ದುಲ್ ಮಜೀದ್ ಕೆ.ಎಚ್. (ಎಸ್‌ಡಿಪಿಐ) | 29,667 |
| 2008 | ತನ್ವೀರ್ ಸೇಠ್ (ಕಾಂಗ್ರೆಸ್) | 37,789 | ಎಸ್. ನಾಗರಾಜು(ಜೆಡಿಎಸ್) | 31,104 |
ನರಸಿಂಹರಾಜ ಕ್ಷೇತ್ರದ ಮತದಾರರ ವಿವರ
ನರಸಿಂಹರಾಜ ಕ್ಷೇತ್ರದ ಮತದಾರರ ವಿಶ್ಲೇಷಣೆ ಮಾಡುವುದಾದರೆ, ಮುಸ್ಲಿಂ ಮತದಾರರ ಪ್ರಾಬ್ಲಯವೇ ಹೆಚ್ಚಾಗಿದ್ದು, 1 ಲಕ್ಷ 15 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ 25 ಸಾವಿರ ಮತದಾರರು ಕ್ಷೇತ್ರದಲ್ಲಿದ್ದಾರೆ. ಉಳಿದಂತೆ 15 ಸಾವಿರ ಒಕ್ಕಲಿಗರು, 14 ಸಾವಿರ ನಾಯಕರು, 12 ಸಾವಿರ ಲಿಂಗಾಯತರು, 12 ಸಾವಿರ ಕ್ರಿಶ್ಚಿಯನ್ನರು, 9 ಸಾವಿರ ಕುರುಬರು ಸೇರಿದಂತೆ 30 ಸಾವಿರ ಇತರೆ ಸಮಾಜದ ಮತದಾರರಿದ್ದಾರೆ.
| ಕ್ಷೇತ್ರದ ಒಟ್ಟು ಮತದಾರರು | 2,53,051 |
| ಪುರುಷ ಮತದಾರರು | 1,25,331 |
| ಮಹಿಳಾ ಮತದಾರರು | 1,27,720 |
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications