ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮ್ಯಾಟ್ರಿಮೊನಿ ಮೂಲಕ ತ್ರಿಬಲ್ ಆಕ್ಟಿಂಗ್ ಮಾಡುತ್ತಿದ್ದ ಯುವತಿ ಬಂಧನ

|
Google Oneindia Kannada News

ಮೈಸೂರು, ಜೂನ್ 20: ತಾನು ಐಪಿಎಸ್ ಅಧಿಕಾರಿ ಸಹೋದರಿ ಎಂದು ಹೇಳಿಕೊಂಡು ಮ್ಯಾಟ್ರಿಮೋನಿ ಆಪ್ ಒಂದರಲ್ಲಿ ಯುವಕನೊಬ್ಬನನ್ನು ಪರಿಚಯಿಸಿಕೊಂಡು ನಂತರ ಹಣ ನೀಡುವಂತೆ ಬೆದರಿಸುತ್ತಿದ್ದ ಯುವತಿಯನ್ನು ಹುಣಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

 ಫೇಸ್‌ಬುಕ್ ಸ್ನೇಹಿತನಿಂದ ದೋಖಾ, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಫೇಸ್‌ಬುಕ್ ಸ್ನೇಹಿತನಿಂದ ದೋಖಾ, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ನಗರದ ಕಲ್ಕುಣಿಕೆ ಬಡಾವಣೆಯ ನಿವಾಸಿ ರಾಜಾ ನಾಯ್ಕ ಅವರ ಮಗಳು, ಬಿಎ ಪದವೀಧರೆ ಭಾರತಿ ಅಲಿಯಾಸ್ ಲಾವಣ್ಯ ಎಂಬಾಕೆ ಭಾನು, ದಿವ್ಯ, ರಮ್ಯಾ, ಭಾರತಿ ಎಂದು ನಾಲ್ಕು ಹೆಸರನ್ನಿಟ್ಟುಕೊಂಡು ಮೋಸ ಮಾಡುತ್ತಿದ್ದು, ಸಿಕ್ಕಿಬಿದ್ದಿದ್ದಾಳೆ. ಭಾರತೀಯ ನೌಕಾದಳದಲ್ಲಿ ಪ್ರಸ್ತುತ ಕೊಲ್ಕತ್ತಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಚ್.ಡಿ. ಕೋಟೆ ತಾಲ್ಲೂಕಿನ ಹೆಬ್ಬಲಗುಪ್ಪೆ ಗ್ರಾಮದ ಅವಿವಾಹಿತ ಲೋಕೇಶ್ ಎಂಬುವವರನ್ನು ಮ್ಯಾಟ್ರಿಮೊನಿಯಲ್ಲಿ, ತಾನು ಅವಿವಾಹಿತೆ ಎಂದು ಪರಿಚಯಿಸಿಕೊಂಡಿದ್ದಾಳೆ. ತನ್ನ ಅಕ್ಕ ರಮ್ಯಾ ಭಾರತಿ ಐಪಿಎಸ್ ಅಧಿಕಾರಿಯಾಗಿದ್ದು, ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.

young women arrested for fraud in Matrimony

ದಿವ್ಯಾ ಹಾಗೂ ಅಕ್ಕ ರಮ್ಯಾ ಭಾರತಿ, ದಿವ್ಯಾ ಗೆಳತಿ ಎಂದು ಬೇರೆ ಬೇರೆ ಹೆಸರಿನಲ್ಲಿ ಮೂರು ಮೊಬೈಲ್ ನಂಬರ್ ಗಳಲ್ಲಿ ಆಗಾಗ್ಗೆ ಲೋಕೇಶ್ ನನ್ನು ಸಂಪರ್ಕಿಸುತ್ತಿದ್ದು, ಮದುವೆ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಲೋಕೇಶ್ ಒಪ್ಪಿಗೆಯನ್ನೂ ಸೂಚಿಸಿದ್ದಾರೆ. ಲೋಕೇಶ್ ಗೆ ಈ ನಡುವೆ ತನ್ನನ್ನು ಮದುವೆಯಾಗಲು ನಿಶ್ಚಿತಾರ್ಥ ಮಾಡಿಕೊಳ್ಳುವಂತೆ ದುಂಬಾಲು ಬಿದ್ದಿದ್ದು, ಮನೆಯವರನ್ನು ಒಪ್ಪಿಸಿದ್ದ ಲೋಕೇಶ್ ಏಪ್ರಿಲ್ ನಲ್ಲಿ ಹುಣಸೂರಿನ ವಾಲ್ಮೀಕ ಸಮುದಾಯ ಭವನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆ ದಿನಾಂಕವನ್ನು ತಾನೇ ನಿಗದಿಪಡಿಸಿ ಮೈಸೂರಿನ ಸಿಂಧೂರ ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಿಕೊಳ್ಳುವುದಾಗಿಯೂ ತಿಳಿಸಿದ್ದಾಳೆ.

 ಮೈಸೂರು ಪೊಲೀಸ್ ಭವನದ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ? ಮೈಸೂರು ಪೊಲೀಸ್ ಭವನದ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ?

ನಿಶ್ಚಿತಾರ್ಥ ನಡೆದ ನಂತರ, ತನಗೆ ಬರುತ್ತಿದ್ದ ಮೂವರು ಯುವತಿಯರ ಕರೆಯಲ್ಲೂ ಒಂದೇ ಧ್ವನಿ ಕೇಳಿಸುತ್ತಿದ್ದ ಲೋಕೇಶ್ಗೆ ಅನುಮಾನ ಬಂದು ಧ್ವನಿಯನ್ನು ಪರಿಶೀಲಿಸಿದಾಗ ಮೂವರದ್ದೂ ಒಂದೇ ಧ್ವನಿ ಎಂಬುದು ಪತ್ತೆಯಾಗಿದೆ. ಈ ನಡುವೆ ನಿಶ್ಚಿತಾರ್ಥದ ವೇಳೆ ಲೋಕೇಶ್ ನಿಂದ ಸಾಕಷ್ಟು ಹಣ ಪಡೆದಿದ್ದಲ್ಲದೆ, ನಂತರ ದಿವ್ಯಾಳ ಅಕ್ಕ ಎಂದು ಹೇಳಿಕೊಂಡು, 13 ಲಕ್ಷ ನೀಡಬೇಕೆಂದು ಒತ್ತಾಯಿಸಿದ್ದಾಳೆ. ನನ್ನ ಬಳಿ ಹಣವಿಲ್ಲ ಎಂದಾಗ, ಸಾಲ ಮಾಡಿಕೊಡಿ, ಇಲ್ಲದಿದ್ದರೆ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡು ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆಂದು ವರಾತ ಬದಲಿಸಿದ್ದಾಳೆ.

ಈ ಬಗ್ಗೆ ಲೋಕೇಶ್ ಅಣ್ಣ ವೆಂಕಟೇಶ್ ಹುಣಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆಗಿಳಿದ ಪೊಲೀಸರು ತ್ರಿಬಲ್ ಆಕ್ಟಿಂಗ್ ಕಥೆಯನ್ನು ಬಟಾಬಯಲು ಮಾಡಿದ್ದಾರೆ.

English summary
Hunsur Police have arrested a young women, who uploaded her profile as a sister of IPS Officer on a matrimonial website, got engaged to an Indian Navy Sailor and then demanded money from him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X