ದಸರಾ ವೈಭವ ಸವಿಯುವವರಿಗಾಗಿ ಒಂದಷ್ಟು ಉಪಯುಕ್ತ ಮಾಹಿತಿ

ಮೈಸೂರು, ಸೆಪ್ಟೆಂಬರ್ 23: ನಾಡಿನ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ದಸರಾ ಈಗಾಗಲೇ ಆರಂಭವಾಗಿದೆ. ಅರಮನೆ ನಗರಿ ಮೈಸೂರಿಗೆ ಬಂದು ಹೋಗುತ್ತಿರುವ ಜನಸಂಖ್ಯೆಯೂ ಹೆಚ್ಚಾಗಿದೆ.

ವೈಭವದ ದಸರಾ ವಿಶೇಷ ಪುಟ

ಹೀಗಿರುವಾಗ ಈ ಬಾರಿಯ ದಸರಾವನ್ನು ಜನರಿಗೆ ಸುಲಭ, ಸುಂದರಗೊಳಿಸುವ ಸಲುವಾಗಿ ಮೈಸೂರು ಜಿಲ್ಲಾಡಳಿತ ಹತ್ತು ಹಲವು ಸೌಲಭ್ಯಗಳನ್ನು ನೀಡಿದೆ.

ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು

ಪ್ರವಾಸಿ ತಾಣಗಳ ಮುಂದೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಆವರಣದಾಚೆ ಟಿಕೇಟ್ ಗಾಗಿ ಸಾಲುಗಟ್ಟಿ ನಿಂತು ಪಡಿಪಾಟಲು ಪಡುವ ಕಷ್ಟ ಈ ಬಾರಿ ಪ್ರವಾಸಿಗರಿಗಿಲ್ಲ. ಏಕೆಂದರೆ ಅಗತ್ಯವಿರುವ ಟಿಕೇಟ್ ಗಳನ್ನು ಮುಂಚಿತವಾಗಿಯೇ ಆನ್ ಲೈನ್ ಮೂಲಕ ಖರೀದಿಸುವ ಅವಕಾಶವನ್ನು ಇದೀಗ ಜಿಲ್ಲಾಡಳಿತ ನೀಡಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನಲೆಯಲ್ಲಿ ದಸರಾ ದರ್ಶಿನಿ ಪ್ಯಾಲೇಸ್ ಆನ್ ವ್ಹೀಲ್ಸ್ ಮತ್ತು ಇತರ ಕಾರ್ಯಕ್ರಮಕ್ಕೆ ಸೆ.22 ರಂದು ಚಾಲನೆ ದೊರೆತಿದೆ. ದಸರಾ ದರ್ಶಿನಿ ಪ್ಯಾಕೇಜ್ ಅಡಿಯಲ್ಲಿ ಚಾಮುಂಡಿ ಬೆಟ್ಟ, ಮೃಗಾಲಯ, ಅರಮನೆ, ರೈತ ದಸರಾ ಕಾರ್ಯಕ್ರಮಗಳ ದರ್ಶನ ಸಿಗಲಿದೆ. ಇದರೊಂದಿಗೆ ಮೈಸೂರಿನ ಪ್ರವಾಸಿಗರಿಗೆ ಉಪಯುಕ್ತವಾಗಬಲ್ಲ ಒಂದಷ್ಟು ಮಾಹಿತಿ ಇಲ್ಲಿದೆ.

ಗಿರಿದರ್ಶಿನಿ

ಗಿರಿದರ್ಶಿನಿ

ಗಿರಿದರ್ಶಿನಿ ಪ್ಯಾಕೇಜ್ ನಲ್ಲಿ ಬಂಡಿಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿಬೆಟ್ಟ, ವಯಸ್ಕರಿಗೆ ರೂ. 340/- , ಮಕ್ಕಳಿಗೆ 175/- ರೂ. ಗಳಲ್ಲಿ ನಿಗದಿಪಡಿಸಿದೆ.

ಜಲದರ್ಶಿನಿ

ಜಲದರ್ಶಿನಿ

ಜಲದರ್ಶಿನಿ ಪ್ಯಾಕೇಜ್ ಅಡಿಯಲ್ಲಿ ಗೋಲ್ಡನ್ ಟೆಂಪಲ್, ದುಬಾರೆ, ನಿಸರ್ಗದಾಮ, ಅಬ್ಬಿಪಾಲ್ಸ್, ರಾಜಾಸ್ಟ್ರೀಟ್, ಹಾರಂಗಿ ಮತ್ತು ಕೆ.ಆರ್.ಎಸ್. ಜಲಾಶಯಗಳ ದರ್ಶನ ವಯಸ್ಕರಿಗೆ ರೂ. 374/- , ಮಕ್ಕಳಿಗೆ 180/- ರೂ. ಗಳಲ್ಲಿ ಪ್ರಯಾಣ ದರ ನಿಗದಿಪಡಿಸಿದೆ.

ದೇವದರ್ಶಿನಿ

ದೇವದರ್ಶಿನಿ

ದೇವದರ್ಶಿನಿ ಪ್ಯಾಕೇಜ್ ಅಡಿಯಲ್ಲಿ ನಂಜನಗೂಡು, ತಲಕಾಡು, ಬ್ಲಫ್, ಮುಡುಕುತೊರೆ, ಸೋಮನಾಥಪುರ, ಕೆ.ಆರ್.ಎಸ್. ದರ್ಶನ ವಯಸ್ಕರಿಗೆ ರೂ. 285/- , ಮಕ್ಕಳಿಗೆ 140/- ರೂ. ಗಳಲ್ಲಿ ಪ್ರಯಾಣ ದರ ನಿಗದಿಪಡಿಸಿದೆ.

ಗೋಲ್ಡ್ ಕಾರ್ಡ್

ಗೋಲ್ಡ್ ಕಾರ್ಡ್

ಮೈಸೂರು ದಸರಾದೊಂದಿಗೆ, ಇಲ್ಲಿನ ಪ್ರವಾಸಿ ತಾನಗಳ ವೈಭವವನ್ನು ಸವಿಯುವ ಇಚ್ಛೆಯಿರುವವರು ಗೋಲ್ಡ್ ಕಾರ್ಡ್ ಸೌಲಭ್ಯ ಪಡೆಯಬಹುದು. ಈ ಕಾರ್ಡ್ ಹೊಂದಿರುವವರು ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ನೋಡಬಹುದು. ಜೊತೆಗೆ ದಸರಾ ಕಾರ್ಯಕ್ರಮಗಳನ್ನೂ ಸವಿಯಬಹುದು. ಕಾರ್ಡ್ ಬೆಲೆ 3,999/- ರೂ. ಇದರೊಂದಿಗೆ ಸೆ. 30 ರಂದು ನಡೆಯುವ ವಿಶೇಷ ಕಾರ್ಯಕ್ರಮಗಳ ಟಿಕೇಟ್ ಅನ್ನೂ ಮುಂಚಿತವಾಗಿಯೇ ಆನ್ ಲೈನ್ ಮೂಲಕ ಖರೀದಿಸಬಹುದು. ಹೆಚ್ಚಿನ ಮಾಹಿತಿಗೆ www.bookmyshow.com

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+