ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾದಲ್ಲಿ ಸೆ.24ರಂದು ಯೋಗೋತ್ಸವ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 20: ಯೋಗ ವಿಚಾರಕ್ಕೆ ಬಂದಾಗ ಸಾಂಸ್ಕೃತಿಕ ನಗರಿ ಮೈಸೂರು ಎಲ್ಲರ ಕಣ್ಮುಂದೆ ಬರುತ್ತದೆ. ಇಲ್ಲಿ ಹಲವು ಯೋಗಶಾಲೆಗಳಿದ್ದು, ಯೋಗ ಕಲಿಯಲೆಂದೇ ರಾಜ್ಯ, ದೇಶ ಮಾತ್ರವಲ್ಲದೆ ವಿದೇಶದಿಂದಲೂ ಇಲ್ಲಿಗೆ ಜನ ಬರುತ್ತಿದ್ದಾರೆ.

ಮೈಸೂರು ದಸರಾ: ಸೆ.21ರ ಕಾರ್ಯಕ್ರಮದ ಸಂಪೂರ್ಣ ವಿವರಮೈಸೂರು ದಸರಾ: ಸೆ.21ರ ಕಾರ್ಯಕ್ರಮದ ಸಂಪೂರ್ಣ ವಿವರ

ಇತ್ತೀಚೆಗಷ್ಟೆ ನಡೆದ ಯೋಗ ದಿನಾಚರಣೆ ವೇಳೆ ಕೂದಲೆಳೆಯಲ್ಲಿ ಗಿನ್ನಿಸ್ ದಾಖಲೆಯ ಪಟ್ಟವನ್ನು ಮೈಸೂರು ಕಳೆದುಕೊಂಡಿತ್ತು. ಇಷ್ಟೊಂದು ವೈಭವತೆಯನ್ನು ಹೊಂದಿರುವ ಯೋಗಕ್ಕೆ ದಸರಾದಲ್ಲಿಯೂ ಸ್ಥಾನ ನೀಡಲಾಗಿದ್ದು, ಒಂಬತ್ತು ದಿನಗಳ ಕಾರ್ಯಕ್ರಮದಲ್ಲಿ ಅದಕ್ಕೂ ಆದ್ಯತೆ ನೀಡುತ್ತಾ ಬರಲಾಗುತ್ತಿದೆ.

ವೈಭವದ ದಸರಾ ವಿಶೇಷ ಪುಟ

Yogothsava on Sep 24th during Mysuru Dasara

ಯೋಗ ದಸರಾ ಉಪಸಮಿತಿಯು ಈ ಬಾರಿಯ ದಸರಾದಲ್ಲಿ ಯೋಗೋತ್ಸವವನ್ನು ಅರಮನೆ ಆವರಣದಲ್ಲಿ ಸೆ.24ರಂದು ಬೆಳಿಗ್ಗೆ 6 ರಿಂದ 8 ಗಂಟೆವರೆಗೆ ನಡೆಸಲು ತೀರ್ಮಾನಿಸಿದೆ. ಇದಕ್ಕಾಗಿ ಈಗಾಗಲೇ ಪೂರ್ವ ತಯಾರಿಯನ್ನು ಕೂಡ ನಡೆಸಲಾಗುತ್ತಿದೆ. ಯೋಗೋತ್ಸವದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಸುಮಾರು ಐದು ಸಾವಿರ ಮಂದಿ ಭಾಗವಹಿಸಬಹುದು ಎಂದು ಯೋಗಸಮಿತಿ ನಿರೀಕ್ಷೆ ಮಾಡಿದೆ.

Photos : 407ನೇ ಮೈಸೂರು ದಸರಾಗೆ ವೈಭವದ ಚಾಲನೆ

Yogothsava on Sep 24th during Mysuru Dasara

ಉಪಸಮಿತಿಯು ಮೊದಲಬಾರಿಗೆ ವಿಶೇಷವಾಗಿ ಕುಳಿತು ಮಾಡುವ ಆಸನಗಳು, ನಿಂತು ಮಾಡುವ ಆಸನಗಳು, ಮಲಗಿ ಮಾಡುವ ಆಸನಗಳು ಹಾಗೂ ಧ್ಯಾನ, ಪ್ರಾಣಾಯಾಮಗಳು ಸೇರಿದಂತೆ 25 ರಿಂದ 28 ಆಸನಗಳ ಪ್ರೋಟೋಕಾಲ್ ಸಿದ್ದಪಡಿಸಿದ್ದು, ಸೆ. 21 ರಂದು ಯೋಗದಸರಾ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಸೀತಾಲಕ್ಷ್ಮಿ ಅವರು ತಿಳಿಸಿದ್ದಾರೆ.

English summary
To create awareness about importance of Yoga, Mysuru district administration will be organised Yogothsava on Sep 24th 8 am to 10am in Mysuru Dasara
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X