ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ, ಯಡಿಯೂರಪ್ಪ ಕೆಂಡಾಮಂಡಲ

Recommended Video

      ಸಿದ್ದರಾಮಯ್ಯರನ್ನ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಬಿ ಎಸ್ ಯಡಿಯೂರಪ್ಪ | Oneindia Kannada

      ಮೈಸೂರು, ಮೇ 01: ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ಟರ್‌ನಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಯಡಿಯೋರಪ್ಪ ಕೆಂಡಾಮಂಡಲವಾಗಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

      ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯಾವನ್ರಿ ಅವ್ನು ಸಿಎಂ, ಚಾಮುಂಡೇಶ್ವರಿ ಗೆಲ್ಲಲಾಗ್ದೆ ಇರೋನು ಪ್ರಧಾನಿಗೆ ಪ್ರಶ್ನೆ ಕೇಳ್ತಾನಾ?' ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

      ತಾಕತ್ತಿದ್ದರೆ, ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಒಟ್ಟಿಗೆ ಪ್ರಚಾರ ಮಾಡಲಿ ನೋಡೋಣ, ಕಾಂಗ್ರೆಸ್ ಒಡೆದ ಮನೆ ಆಗಿದೆ, ಅದಕ್ಕೆ ಹೇಳುವವರು ಕೇಳುವವರು ಯಾರೂ ಇಲ್ಲ, ಒಂಟಿಯಾಗಿ ತಿರುಗುತ್ತಿರುವ ಸಿದ್ದರಾಮಯ್ಯನಿಗೆ ಮೋದಿ ಅವರನ್ನು ಪ್ರಶ್ನಿಸುವ ನೈತಿಕತೆ ಇದೆಯಾ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

      Yeddyurappa lambasted on Siddarmaiah in Mysuru

      ರಾಹುಲ್ ಗಾಂಧಿ ರಾಜ್ಯ ಪ್ರವಾಸದ ಬಗ್ಗೆ ಮಾತನಾಡಿದ ಅವರು, 'ರಾಹುಲ್ ಬಂದಷ್ಟೂ ನಮಗೆ ಒಳ್ಳೆಯದೇ ಅವರು ಹೋದಲ್ಲೆಲ್ಲಾ ಕಾಂಗ್ರೆಸ್‌ ಸೋಲುತ್ತದೆ. ಕರ್ನಾಟಕವೂ ಸಹ ಕಾಂಗ್ರೆಸ್‌ ಮುಕ್ತ ರಾಜ್ಯವಾಗುತ್ತದೆ, ಮೇ 17ಕ್ಕೆ ನಾನು ಪ್ರಮಾಣ ವಚನ ಸ್ವೀಕರಿಸಿಸುವುದು ಖಾಯಂ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+