ಕೆಜಿಎಫ್ ಟಿಕೆಟ್ ಬೇಕೇ ಬೇಕು:ಮೈಸೂರಿನಲ್ಲಿ ಯಶ್ ಅಭಿಮಾನಿಗಳಿಂದ ಪ್ರತಿಭಟನೆ

Recommended Video

      KGF Kannada Movie : ಕೆಜಿಎಫ್ ಟಿಕೆಟ್ ಸಿಕ್ಕಿಲ್ಲ ಎಂದು ಯಶ್ ಫ್ಯಾನ್ಸ್ ಮೈಸೂರಿನಲ್ಲಿ ಪ್ರತಿಭಟನೆ

      ಮೈಸೂರು, ಡಿಸೆಂಬರ್ 21 : ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಿಡುಗಡೆಗೊಂಡಿದೆ. ಇತ್ತ ಥಿಯೇಟರ್ ಗಳಲ್ಲಿ ಟಿಕೆಟ್ ಸಿಗದೇ ಅಭಿಮಾನಿಗಳು ಪ್ರತಿಭಟನೆ ನಡೆಸಿರುವ ಘಟನೆ ಮೈಸೂರಿನ ಗರುಡಾ ಮಾಲ್ ನಲ್ಲಿ ನಡೆದಿದೆ.

      ಕೆಜಿಎಫ್ ಚಿತ್ರ ವೀಕ್ಷಣೆಗಾಗಿ ಯುವಕರ ಗುಂಪು ಕಳೆದ ರಾತ್ರಿಯಿಂದಲೇ ಕಾಯುತ್ತಿತ್ತು. ಗುರುವಾರ ಮಧ್ಯಾಹ್ನ ಕೇವಲ 20 ಟಿಕೆಟ್ ಗಳನ್ನು ಮಾತ್ರ ಕೊಟ್ಟು ಟಿಕೆಟ್ ಆನ್ ಲೈನ್ ನಲ್ಲಿ ಮುಕ್ತಾಯವಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡ ಅಭಿಮಾನಿಗಳು ನಮಗೆ ಟಿಕೆಟ್ ಬೇಕೇ ಬೇಕು ಎಂದು ಗದ್ದಲ ಎಬ್ಬಿಸಿದ್ದಾರೆ.

      'ಕೆ.ಜಿ.ಎಫ್' ಫಸ್ಟ್ ಹಾಫ್ ವಿಮರ್ಶೆ: ಇಂಟರ್ವೆಲ್ ವರೆಗೂ ಚಿಂದಿ ಗುರು.!

      ಇದರಿಂದ ಕೆಲಕಾಲ ಮಾಲ್ ನಲ್ಲಿ ಗೊಂದಲದ ವಾತಾವರಣ ಉಂಟಾಯಿತು. ತಕ್ಷಣ ಸ್ಥಳಕ್ಕಾಗಮಿಸಿದ ದೇವರಾಜ ಠಾಣೆ ಪೊಲೀಸರು ಅಭಿಮಾನಿಗಳನ್ನು ಸಮಾಧಾನಗೊಳಿಸಲು ಯತ್ನಿಸಿದ್ದು, ಯುವಕರು ಟಿಕೆಟ್ ಸಿಗುವವರೆಗೂ ಕೌಂಟರ್ ಬಿಟ್ಟು ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದರಲ್ಲದೆ, ಇಲ್ಲಿ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಅದರ ಬದಲಿಗೆ ನಮ್ಮ ಕನ್ನಡದ ಕೆಜಿಎಫ್ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು

      Yash fans protested for Kannada film KGF tickets

      ಫಸ್ಟ್ ಶೋ ಮುಗೀತು, ಫಸ್ಟ್ ರಿವ್ಯೂ ಹೊರಬಿತ್ತು: ರಾಕಿ ಭಾಯ್ ಗೆ ಪ್ರೇಕ್ಷಕರ ಸಲಾಂ.!

      ಕೆಜಿಎಫ್ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕನ್ನಡ ಚಿತ್ರರಂಗ ಉತ್ತುಂಗಕ್ಕೇರುವಾಗ ಈ ರೀತಿಯ ಷಡ್ಯಂತ್ರಗಳು ನಡೆಯುತ್ತಿವೆ. ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ಬಿಡುಗಡೆಗೆ ಅವಕಾಶ ನೀಡಿ ಎಂದು ಯಶ್ ಅಭಿಮಾನಿಗಳಿಂದ ಫಿಲ್ಮ್ ಚೇಂಬರ್ ಗೆ ಮನವಿ ಸಲ್ಲಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+