• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವ ರಂಗಭೂಮಿ ದಿನಾಚರಣೆ -ಮಂಡ್ಯ ರಮೇಶ್ ಸಂದರ್ಶನ

By Yashaswini
|

ಮೈಸೂರು, ಮಾರ್ಚ್ 26 : ರಂಗಭೂಮಿ ಎಂದಾಕ್ಷಣ ನೆನಪಿನ ಮೂಸೆಗೆ ಹೋಗುವ ನಾವು, ಪಾತ್ರಗಳಾಗಿಬಿಡುತ್ತೇವೆ. ನಾಟಕಗಳನ್ನು ನೋಡಿ ನಾವೇ ಎಲ್ಲೋ ಅರಿವಿಲ್ಲದೇ ಅಭಿನಯಿಸಿರುತ್ತೇವೆ. ಆದರೆ ಅಂತಹ ನಾಟಕ ಕಲೆ ಪ್ರಸ್ತುತ ದಿನಮಾನಗಳಲ್ಲಿ ಅಳಿವಿನಂಚಿಗೆ ಸರಿಯುತ್ತಿರುವುದು ವಾಸ್ತವ.

ರಂಗಾಯಣ ಮೈಸೂರು, ನೀನಾಸಂ ಸಾಗರ, ರಂಗತೋರಣ ಬಳ್ಳಾರಿ, ಶಿವಕುಮಾರಸ್ವಾಮಿ ನಾಟ್ಯ ಕಲಾ ತಂಡ ಸಾಣೇಹಳ್ಳಿ, ಶ್ರೀ ಗುರು ಕೊಟ್ಟೂರೇಶ್ವರ ನಾಟ್ಯ ಕಲಾ ತಂಡ ಕೊಟ್ಟೂರು ಮೊದಲಾದ ಸಂಘಟನೆಗಳು ರಂಗಭೂಮಿ ಕಲೆಯನ್ನು ಜೀವಂತವಾಗಿರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ. ಇವುಗಳಲ್ಲಿ ಮತ್ತೊಂದು ಸೇರ್ಪಡೆ ಮಂಡ್ಯ ರಮೇಶ್ ರ ನಟನ.

ರಂಗಾಯಣದ ನೂತನ ನಿರ್ದೇಶಕಿ ಭಾಗೀರಥಿ ಕದಂರೊಂದಿಗಿನ ಸಂದರ್ಶನ

ಕಳೆದ 4 ದಶಕಗಳಿಂದಲೂ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಂಡ್ಯ ರಮೇಶ್, ವಿಶ್ವ ರಂಗಭೂಮಿ ದಿನಾಚರಣೆಯ ದಿನವಾದ ಇಂದು(ಮಾ.27) 'ಒನ್ ಇಂಡಿಯಾ ಕನ್ನಡ'ಕ್ಕೆ ವಿಶೇಷ ಸಂದರ್ಶನವೊಂದನ್ನು ನೀಡಿದ್ದಾರೆ. ಇಲ್ಲಿದೆ ಅದರ ಸಾರಾಂಶ... (ಚಿತ್ರಕೃಪೆ: ಫೇಸ್ ಬುಕ್)

ರಂಗಭೂಮಿ ಅಂದರೆ....

ರಂಗಭೂಮಿ ಅಂದರೆ....

ಪ್ರಶ್ನೆ: ರಂಗಭೂಮಿ ಅಂದರೆ ನಿಮ್ಮ ಪ್ರಕಾರ ಏನು ?

ಉತ್ತರ: ನನ್ನ ಮಟ್ಟಿಗೆ ರಂಗಭೂಮಿ ಎಂದರೆ ಪ್ರತಿಕ್ಷಣ ಬದುಕುವ, ಕಲಾತ್ಮಕವಾಗಿ ಹಾಗೂ ಸಂಕಟಗಳನ್ನು ಹೇಳಿಕೊಳ್ಳುವ ಸೌಂದರ್ಯಪ್ರಜ್ಞೆಯನ್ನು ಮೂಡಿಸುವ ಮಾಧ್ಯಮ. ಕನ್ನಡದ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಾಧ್ಯಮದಲ್ಲಿ ರಂಗಭೂಮಿಯ ಪಾತ್ರ ಹಿರಿದು. ಪುರಾಣ, ಇತಿಹಾಸ, ಭವಿಷ್ಯ, ವರ್ತಮಾನದ ಬಗ್ಗೆ ತಿಳಿಸುವ ಏಕೈಕ ಮಾಧ್ಯಮವಾಗಿರುವುದರಲ್ಲಿ ರಂಗಭೂಮಿಗೆ ಮೊದಲ ಸ್ಥಾನ.

ಪ್ರಾಯೋಜಕರು ಕಡಿಮೆಯಾಗಿದ್ದಾರಾ..?

ಪ್ರಾಯೋಜಕರು ಕಡಿಮೆಯಾಗಿದ್ದಾರಾ..?

ಪ್ರ: ರಂಗಭೂಮಿಯಲ್ಲಿ ಎಲ್ಲವೂ ಇದೆ. ಹಾಗಾದರೆ ಜನರನ್ನು ಉ: ಮುಟ್ಟುವಲ್ಲಿ ಪ್ರಾಯೋಜಕರು ಕಡಿಮೆಯಾಗುತ್ತಿದ್ದಾರಾ ?

ನಮ್ಮ ಪ್ರಾಯೋಜಕರು ಕಾಸ್ಮೋಪಾಲಿಟನ್ ನೆಲೆಯಲ್ಲಿದ್ದಾರೆ. ರಂಗಭೂಮಿ ಪ್ರಚಾರಕ್ಕಾಗಿ ಮಾತ್ರವಲ್ಲ. ಅದೊಂದು ಸ್ಟೈಲ್ ಎಂದು ಅಂದುಕೊಳ್ಳುತ್ತಿದ್ದಾರೆ. ಅದೊಂದು ಮುಗಿದ ಫ್ಯಾಷನ್ ಎಂದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿಯೇ ಪ್ರಾಯೋಜಕರು ಕಡಿಯೆಯಾಗುತ್ತಿದ್ದಾರೆ.

(ಸಂಸ್ಮರಣೆ) ಕನ್ನಡ ರಂಗಭೂಮಿಯ ಧ್ರುವತಾರೆ ಏಣಗಿ ಬಾಳಪ್ಪ

ಸರ್ಕಾರಿ ಪ್ರಾಯೋಜಿತವಾಗಿಲ್ಲ ಯಾಕೆ?

ಸರ್ಕಾರಿ ಪ್ರಾಯೋಜಿತವಾಗಿಲ್ಲ ಯಾಕೆ?

ಪ್ರ: ಇಂದಿನ ದಿನಮಾನಸಗಳಲ್ಲಿ ಎಲ್ಲವೂ ಸರಕಾರಿ ಪ್ರಾಯೋಜಿತವಾಗುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ರಂಗಭೂಮಿ ಏತಕ್ಕೆ ಸೇರ್ಪಡೆಗೊಂಡಿಲ್ಲ?

ಉ: ಖಂಡಿತ. ಜಯಂತಿಗಳನ್ನು ಆಚರಿಸುವ ವಿಧಾನದಲ್ಲೇ ರಂಗಭೂಮಿ ದಿನಾಚರಣೆಯಾಗಬೇಕು. ಹಂಪಿ ನಾಟಕೋತ್ಸವ ಮಾಡುತ್ತಾರೆ, ಅದರಲ್ಲಿ ನಾಟಕೋತ್ಸವ ಭಾಗವಾಗುತ್ತದೆ ಅಷ್ಟೇ. ಆದರೆ ರಂಗಭೂಮಿ ಮುಖ್ಯಭೂಮಿಕೆಯಾಗಿಲ್ಲ. ಅಲ್ಲದೇ ರಂಗವಿಶ್ವವಿದ್ಯಾಲಯ ಬೇಕು. ಬೇರೇ ಎಲ್ಲಾ ವಿಷಯಗಳಿಗೂ ವಿವಿಗಳಿದ್ದು, ರಂಗಭೂಮಿಗೇಕಿಲ್ಲ. ಜಾನಪದ ಕಲೆಗೆ ಸರಕಾರದಿಂದಲೇ ಬೆಲೆ ಇಲ್ಲ.ಶಾಲೆಗಳಲ್ಲಿ ಮಕ್ಕಳಿಗೆ ರಂಗಭೂಮಿಯ ಪಠ್ಯ ಇರಬೇಕು. ಶಿಕ್ಷಣ ಮಾಧ್ಯಮದಲ್ಲಿ ಬಳಸಿದಾಗ ಮಾತ್ರ ರಂಗಭೂಮಿಯ ಅಳಿವು - ಉಳಿವು ಸಾಧ್ಯ.

ದ.ಕರ್ನಾತಕ ಭಾಗದಲ್ಲಿ ನಾಟಕ ಪ್ರಕಾರ ಕ್ಷೀಣಿಸುತ್ತಿದೆಯೇ?

ದ.ಕರ್ನಾತಕ ಭಾಗದಲ್ಲಿ ನಾಟಕ ಪ್ರಕಾರ ಕ್ಷೀಣಿಸುತ್ತಿದೆಯೇ?

ಪ್ರ: ನಾಟಕವೆಂದರೇ ಹೆಚ್ಚು ಕೇಳಲ್ಪಡುವುದು ಉತ್ತರ ಕರ್ನಾಟಕದ ಭಾಗದಲ್ಲಿ ಮಾತ್ರ. ಹಾಗಾದರೆ ನಮ್ಮ ದಕ್ಷಿಣ ಕರ್ನಾಟಕದ ಭಾಗದಲ್ಲಿ ಅದರ ಪ್ರಸ್ತುತತೆ ಕ್ಷೀಣಿಸಲು ಕಾರಣವೇನು ?

ಉ: ಹೌದು, ಉತ್ತರ ಕರ್ನಾಟಕ ಭಾಗದಲ್ಲಿ 115ಕ್ಕೂ ಹೆಚ್ಚು ಕಂಪೆನಿ ನಾಟಕ ತಂಡಗಳಿದೆ. ಸದ್ಯ ದಿನದಿಂದ ದಿನಕ್ಕೆ ಅದರ ಸಂಖ್ಯೆ 23ಕ್ಕೆ ಬಂದಿದೆ. ಅದರಲ್ಲೂ ಸರಕಾರದಿಂದ ಹಣ ಪಡೆಯದೇ ಕೆಲಸ ಮಾಡುತ್ತಿರುವುದು 15 ಕಂಪೆನಿಗಳು. ಅದರಲ್ಲೂ. 12 ಸಂಸ್ಥೆಗಳು ಡಬ್ಬಲ್ ಮೀನಿಂಗ್ ನಾಟಕಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತವೆ. ಏಕೆಂದರೆ ಜನ ಬರುವುದೇ ಅಂತಹ ನಾಟಕಗಳಿಗೆ. ಅಲ್ಲಿ ದಕ್ಷಿಣ ಭಾರತಕ್ಕಿಂತ ವಿದ್ಯಾವಂತರ ಸಂಖ್ಯೆ ಕಡಿಮೆ. ಇದೇ ಕಾರಣಕ್ಕೆ ಅಲ್ಲಿ ನಾಟಕಗಳು ಒಂದು ಕಾಲದಲ್ಲಿ ಪ್ರಾಶಸ್ತ್ಯ ಪಡೆದಿತ್ತು. ಆದರೆ ಈಗಿಲ್ಲ.

ಮುನ್ನಡೆಸುವ ನಾಯಕರ ಕೊರತೆ?!

ಮುನ್ನಡೆಸುವ ನಾಯಕರ ಕೊರತೆ?!

ಪ್ರ: ರಂಗಭೂಮಿ ಎಂದರೆ ಟೀಂ ವರ್ಕ್. ಇಂತಹ ಟೀಂ ವರ್ಕ್ ನ್ನು ಮುನ್ನಡೆಸುವಲ್ಲಿ ನಾಯಕರ ಕೊರತೆ ಹೆಚ್ಚು ಎದ್ದು ಕಾಣುತ್ತಿದೆ. ಏಕೆ ?

ಉ: ಹೌದು. ಇದರಲ್ಲಿ ಹೆಚ್ಚು ತಪ್ಪು ನಮ್ಮ ಸರಕಾರದ್ದೇ. ರಂಗಭೂಮಿಗೆ ಕೊಡಬೇಕಾದ ಮೌಲ್ಯವನ್ನು ಮಕೊಡುತ್ತಿಲ್ಲ. ನಾಟಕ ಕಲಿಯುವವರು ಕೇವಲ ಚಿತ್ರಗಳಲ್ಲಿ ಆಕ್ಟಿಂಗ್ ಮಾತ್ರ ಕಲಿಯುತ್ತಿದ್ದಾರೆ. ಆದರೆ ರಂಗಭೂಮಿಯನ್ನು ಬೆಳೆಸಲು ಬರುತ್ತಿಲ್ಲ. ದುಡ್ಡು ಬರುತ್ತಿಲ್ಲ ಎಂದರೆ ನಾವೇಕೇ ಕಲಿಯಬೇಕೇಂದು ಜನ ಬರುವುದೇ ನಿಲ್ಲಿಸಿಬಿಟ್ಟಿದ್ದಾರೆ. ಸಂಬಳವೋ ಅಥವಾ ಗೌರವಧನ ಕೊಟ್ಟು ಮಕ್ಕಳಿಗೆ ರಂಗಾಸಕ್ತಿ ಕಲಿಸಲು ಸರಕಾರ ಮುಂದೆ ಬಂದರೆ ರಂಗಭೂಮಿ ನಡೆಸಲು ನಾಯಕರು ಹುಟ್ಟಿಕೊಳ್ಳುತ್ತಾರೆ.

ಈಗಿನ ರಂಗಭೂಮಿ ಕಲಿಕೆ ಹೇಗಿದೆ?

ಈಗಿನ ರಂಗಭೂಮಿ ಕಲಿಕೆ ಹೇಗಿದೆ?

ಪ್ರ: ನಿಮ್ಮ ಕಲಿಕೆಯ ರಂಗಭೂಮಿ ಹಾಗೂ ಈಗಿನ ರಂಗಭೂಮಿಯ ಕಲಿಕೆಯಲ್ಲಿನ ವ್ಯತ್ಯಾಸವೇನು ?

ಉ: ಆಗಿನ ರಂಗಭೂಮಿಗೂ ಹಾಗೂ ಇಂದಿನ ಭೂಮಿಕೆಗೂ ವ್ಯತ್ಯಾಸವೆಂದರೇ ಬಟನ್ ಒತ್ತಿದ ಕೂಡಲೇ ಪ್ರಪಂಚವೇ ತೆಗೆದುಕೊಳ್ಳದಿರುವುದು ಹಾಗೂ ಈಗ ತೆಗೆದುಕೊಳ್ಳುವುದರ ನಡುವಿನ ವ್ಯತ್ಯಾಸವಷ್ಟೇ. ಈಗಿನ ರಂಗಭೂಮಿಯದ್ದು ಧಾವಂತದ ಸ್ಥಿತಿ, ಅಮ್ಮನ ಎದೆಹಾಲು ನೀಡುತ್ತಿದ್ದ ಅಂದಿನ ರಂಗಭೂಮಿ, ಈಗಿನ ಸ್ಥಿತಿಯಲ್ಲಿ ಅಮ್ಮ ತನ್ನ ಸೌಂದರ್ಯಕ್ಕೋಸ್ಕರ ಬಾಟಲ್ ಅಥವಾ ಪೌಡರ್ ಹಾಲು ಕೊಡಿಸುವ ಸ್ಥಿತಿ. ನಮ್ಮ ರಂಗಭೂಮಿ ತಾಳ್ಮೆ ಕಳಿಸುತ್ತಿತ್ತು. ಆದರೆ ಈಗ ಅದನ್ನು ಕಲಿಯಲು ನಮ್ಮ ಯುವಕರೇ ತಯಾರಿಲ್ಲ.

ವಿದೇಶಕ್ಕೆ ನಟನೆ ಕಲಿಯಲು ಹೋಗುತ್ತಿರುವ ಬಗ್ಗೆ...

ವಿದೇಶಕ್ಕೆ ನಟನೆ ಕಲಿಯಲು ಹೋಗುತ್ತಿರುವ ಬಗ್ಗೆ...

ಪ್ರ: ಯುವಕರು ಇತ್ತೀಚಿನ ದಿನದಲ್ಲಿ ವಿದೇಶಕ್ಕೆ ಹೋಗಿ acting ಕ್ಲಾಸ್ ಗಳಿಗೆ ಹೋಗುತ್ತಿದ್ದಾರಲ್ಲ, ಏಕೆ ? ಅಲ್ಲಿನ ಶಾಲೆಗೂ - ನಮ್ಮ ರಂಗಭೂಮಿಗೂ ವ್ಯತ್ಯಾಸವೇನು ?

ಉ: ಮನಸ್ಸಿಗೆ ನೋವಾಗದೇ ಅಲ್ಲಿ ಹೇಳಿಕೊಳ್ಳುತ್ತಾರೆ. ಆದರೆ ಇಲ್ಲಿ ಕಷ್ಟ ಪಡುವ ಕೆಲಸ. ಇಲ್ಲಿ ಕಷ್ಟ ಪಡುವ ಜೀವನ ಮೌಲ್ಯ ಹೇಳಿಕೊಡುತ್ತೇವೆ. ಇಲ್ಲಿನ ಪುರಾಣ, ಕನ್ನಡ ಮಣ್ಣಿನ ಸೊಗಡು, ಜೀವನದ ಮೌಲ್ಯ ಹೇಳಿಕೊಡುತ್ತೇವೆ. ಆದರೆ ವಿದೇಶದಲ್ಲಿ ಅದಿಲ್ಲ. ಪದೇ - ಪದೇ ಭೂಮಿಗೆ ಹೋಗದಿದ್ದರೆ ಕಷ್ಟವೆಲ್ಲಿ ? ಸ್ತ್ರೀವಾದದ ಸರ್ವ ಲಕ್ಷಣವನ್ನು ಇಲ್ಲಿನ ರಂಗಭೂಮಿ ಇಲ್ಲಿ ಹೇಳಿಕೊಡುತ್ತೇವೆ. ಅಲ್ಲಿ ಇಲ್ಲ. ಕಷ್ಟಪಡದೇ ರೆಡಿಫುಡ್ ಗೆ ದುಡ್ಡು ಇರುವವರು ಅಲ್ಲಿ ಹೋಗುತ್ತಾರೆ. ಅಷ್ಟೇ. ವ್ಯತ್ಯಾಸದ ಮಾತೇ ಇಲ್ಲ.

ಧೀಡೀರ್ ಸ್ಟಾರ್ ಆಗುವ ಹುಚ್ಚು ಹೆಚ್ಚಾಗಿದೆಯಲ್ಲ..?!

ಧೀಡೀರ್ ಸ್ಟಾರ್ ಆಗುವ ಹುಚ್ಚು ಹೆಚ್ಚಾಗಿದೆಯಲ್ಲ..?!

ಪ್ರ: ವೃತ್ತಿ ರಂಗಭೂಮಿಗೆ ಬರುವವರು ಕ್ಷಣಾರ್ಧದಲ್ಲಿ ಸ್ಟಾರ್ ನಟರಾಗಬೇಕೆಂದು ಅಪೇಕ್ಷಿಸುತ್ತುರಲ್ಲಾ. ಏಕೆ ?

ಉ: ಅಕ್ಷರಶಃ ನಿಜ. ವೃತ್ತಿ ರಂಗಭೂಮಿಯ ಒಂದು ಶಕ್ತಿ ಎಂದರೆ ಅದರ ಸ್ಥಿತಿ ಸ್ಥಾಪಕತ್ವದಗುಣ ಹಾಗೂ ಒಳಗೊಳ್ಳುವ ಗುಣ. ರಂಗಭೂಮಿಗೆ ಬರುವ ಪ್ರತಿಯೊಬ್ಬರು ಈಗ ಬಯಸುತ್ತಿರುವುದೇ ಅದನ್ನೇ. ನಾನು ತಕ್ಷಣ ಸ್ಟಾರ್ ನಟನಾಗಬೇಕೆಂದು ಅಪೇಕ್ಷಿಸುತ್ತಾರೆ. ಅದು ತಪ್ಪು. ರಂಗಭೂಮಿಯಲ್ಲಿ ದುಡಿದಾಗ ನಿನಗೆ ಒಳ್ಳೆ ಅವಕಾಶ ಹುಡುಕಿ ಬಂದೇ ಬರುತ್ತದೆ. ಕೇವಲ ಕೆಲವೇ ದಿನದಲ್ಲಿ ಸ್ಟಾರ್ ನಟರಾಗಬೇಕೇಂದು ಬಯಸುವವರು, ರಂಗಭೂಮಿಯಲ್ಲಿ ಕೆಲಸ ಮಾಡದೇ ಇರುವವರು ಪೀಚು ಕಾಯಿಗಳಾಗಿ ಹೊರಬರುತ್ತಾರೆ ಅಷ್ಟೇ.

ರಂಗಭೂಮಿ ಬಗ್ಗೆ ಯುವಕರಲ್ಲಿ ಒಲವು ಕಡಿಮೆ?!

ರಂಗಭೂಮಿ ಬಗ್ಗೆ ಯುವಕರಲ್ಲಿ ಒಲವು ಕಡಿಮೆ?!

ಪ್ರ: ಯುವಕರಲ್ಲಿ ರಂಗಭೂಮಿ ಬಗ್ಗೆ ಒಲವು ಕಡಿಮೆಯಾಗುತ್ತಿದೆಯಾ?

ಉ: ವೀಕ್ಷಕರ ದೃಷ್ಟಿಯಲ್ಲಿ ಕಡಿಮೆ ಆಗುತ್ತಿರುವುದು ನಿಜ. ದೃಶ್ಯ ಮಾಧ್ಯಮ, ಸಿನೆಮಾಗಳಿಂದಾಗಿ ಸೂಕ್ಷ್ಮ ಸಂವೇದನೆಯ ನಾಟಕಗಳತ್ತ ಯುವಕರ ಒಲವು ಕಡಿಮೆ. ಆದರೆ ರಂಗಭೂಮಿ ನಾಟಕ ತರಬೇತಿಗೆ ಬರುತ್ತಿರುವ ಹುಡುಗರ ಸಂಖ್ಯೆ ಹೆಚ್ಚಿದೆ. ಅಷ್ಟೇ ಬೇಗ ಹೊರ ಹೋಗುತ್ತಿರುವವರ ಸಂಖ್ಯೆಯೂ ಸಾಕಷ್ಟಿದೆ. ಆರ್ಥಿಕ ಸ್ಥಿತಿಯೂ ಇದಕ್ಕೆ ಕಾರಣವಾಗಿರಬಹುದು. ಸಿನೆಮಾದಲ್ಲಾದರೆ ಉತ್ತಮ ಸಂಭಾವನೆ ಸಿಕ್ಕರೆ, ನಾಟಕದಲ್ಲಿ ಅಂತಹ ಸಂಭಾವನೆ ಸಿಗುತ್ತಿಲ್ಲ. ರಂಗಭೂಮಿಯಿಂದ ದೂರವಾಗಲು ಇದು ಕೂಡ ಕಾರಣವಾಗಿರಬಹುದು.

ಸ್ಟಾರ್ ನಟರು ರಂಗಭೂಮಿಯಲ್ಲಿ ಅಭಿನಯಿಸದಿರುವುದೇಕೆ?

ಸ್ಟಾರ್ ನಟರು ರಂಗಭೂಮಿಯಲ್ಲಿ ಅಭಿನಯಿಸದಿರುವುದೇಕೆ?

ಪ್ರ: ಹಿಂದಿನ ಕಾಲವೊಂದಿತ್ತು, ಸ್ಟಾರ್ ನಟರು ಕೂಡ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಆದರೆ ಈಗೇಕಿಲ್ಲ ?

ಉ: ಅದು ಅವರವರ ಪಾಲಿಗೆ ಬಿಟ್ಟದ್ದು. ಆದರೆ ಸ್ಟಾರ್ ನಟರು ರಂಗಕಲಾವಿದರಾದರೆ ರಂಗಭೂಮಿ ಬೆಳೆಯುವುದರಲ್ಲಿ ಸಂಶಯವಿಲ್ಲ. ಇನ್ನೊಂದು ಬಹುದೊಡ್ಡ ವಿಷಯವೆಂದರೆ ಅವರು ಕೇಳಿದಷ್ಟು ಸಂಭಾವನೆ ನಮಗೆ ಕೊಡುವುದಕ್ಕಾಗಬೇಕಲ್ಲ. ಅದಕ್ಕೇನು ಹೇಳೋಣ!?

English summary
World Theatre Day (WTD) is celebrated on 27 March 2018. It was initiated in 1961 by the International Theatre Institute. Here is an interview of Kannada actor and famous theatre artist Mandya Ramesh on present situation of theatres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more