ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಕಣ್ಮನ ಸೆಳೆಯುತ್ತಿದೆ ಮಾಗಿ ಉತ್ಸವ

|
Google Oneindia Kannada News

ಮೈಸೂರು, ಡಿಸೆಂಬರ್ 23 : ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ, ಅರಮನೆ ಮಂಡಳಿ ಜಂಟಿಯಾಗಿ ಅರಮನೆ ಆವರಣದಲ್ಲಿ ಮಾಗಿ ಉತ್ಸವ'ದ ಅಂಗವಾಗಿ 4ನೇ ವರ್ಷದ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ.

ಲಲಿತ ಮಹಲ್ ಅರಮನೆ, ಶ್ರೀ ಜಯಚಾಮರಾಜ ಒಡೆಯರ್, ದಸರಾ ಗಜಪಡೆ (9 ಅಡಿ ಎತ್ತರ) ಪಿಂಗ್‍ಪಾಂಗ್, ಜಟ್ಟಿ ಕಾಳಗ, ಶಿವಲಿಂಗಕ್ಕೆ ನಮಸ್ಕರಿಸುತ್ತಿರುವ ಆನೆ ಮತ್ತು ನಂದಿ, ಕೀಲುಕುದುರೆ, ಸೈಕಲ್ ತುಳಿಯುತ್ತಿರುವ ಅಳಿಲು, ಒಡೆಯರ್, ಲಲಿತ್ ಮಹಲ್ ಮೊದಲಾದ ಹೂವಿನ ಮಾದರಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಮಾಗಿ ಉತ್ಸವಕ್ಕೆ ಸಜ್ಜಾದ ಸಾಂಸ್ಕೃತಿಕ ನಗರಿ ಮೈಸೂರುಮಾಗಿ ಉತ್ಸವಕ್ಕೆ ಸಜ್ಜಾದ ಸಾಂಸ್ಕೃತಿಕ ನಗರಿ ಮೈಸೂರು

ಮೈಸೂರಿನವರೇ ಆದ ಜಯಶ್ರೀ ನಾಗಪ್ರಸಾದ್ ಅವರು ದೇವಿ ವೈಭವ', ಲೀಲಾವತಿ ಅವರು ಶ್ರೀ ರಾಮಾಯಣ ದರ್ಶನಂ, ಮಂಜುಳಾ ವೆಂಕಟೇಶ್ ಮೂರ್ತಿ ಶಿವಮಯಮಿದಂ ಜಗತ್' ಶೀರ್ಷಿಕೆಯಡಿ ಗೊಂಬೆಗಳನ್ನು ಪ್ರದರ್ಶಿಸಿದ್ದಾರೆ.

Winter festival commenced in Mysuru.

ಫಲಪುಷ್ಪ ಪ್ರದರ್ಶನ ವೀಕ್ಷಿಸಿದ 300ಕ್ಕೂ ಹೆಚ್ಚು ಮಂದಿಗೆ ಅಲವೆರಾ, ಕೃಷ್ಣ ತುಳಸಿ, ಮಲ್ಲಿಗೆ ಗಿಡಗಳನ್ನು ವಿತರಿಸಲಾಗುತ್ತಿರುವುದು ಪ್ರಶಂಸನಾರ್ಹ.

Winter festival commenced in Mysuru.

ಮೈಸೂರು ವಿವಿ ಕ್ರಿಕೆಟ್ ಮೈದಾನದಲ್ಲಿ ಪ್ಯಾರಾ ಮೋಟರಿಂಗ್ ರೈಡ್ ಗೆ ಚಾಲನೆ ನೀಡಲಾಗಿದ್ದು, 10 ನಿಮಿಷ ಮೈಸೂರಿನ ಸೌಂದರ್ಯ ಸವಿಯಬಹುದು.

English summary
Winter festival held in Mysuru till December 31st. Peoples are so excited and enjoying the movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X