ಸ್ವಚ್ಛ ಸರ್ವೇಕ್ಷಣ್ 2019: ಮೈಸೂರಿಗೆ ಸಿಗಲಿದೆಯಾ ಪ್ರಥಮ ಸ್ಥಾನ?

ಮೈಸೂರು, ಮಾರ್ಚ್ 03:ವಿವಿಧ ನಗರಗಳಿಂದ 'ಸ್ವಚ್ಛ ಸರ್ವೇಕ್ಷಣ್-2019' ಮಾಹಿತಿಯ ಪರಿಶೀಲನೆ, ಮೌಲ್ಯಮಾಪನ ಪ್ರಕ್ರಿಯೆ ಕೊನೆಗೊಂಡಿದ್ದು, ಇದೇ 6 ರಂದು ವಿಜೇತರನ್ನು ಪ್ರಕಟಿಸಲಾಗುತ್ತದೆ.

ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಿಂದ ಮೈಸೂರು ಮಹಾನಗರ ಪಾಲಿಕೆಗೆ ಅಧಿಕೃತ ಆಹ್ವಾನ ಬಂದಿದೆ. ಈ ಬಾರಿ ಮೈಸೂರು ನಗರವು 'ಸ್ವಚ್ಛ ನಗರ' ಮತ್ತು 'ತ್ಯಾಜ್ಯಮುಕ್ತ ನಗರ ವಿಭಾಗಗಳಲ್ಲಿ ಪ್ರಶಸ್ತಿಗೆ ಪೈಪೋಟಿಯಲ್ಲಿದ್ದು, ಅಗ್ರಸ್ಥಾನ ಲಭಿಸುವುದೇ ಎಂಬ ಕುತೂಹಲ ಮೂಡಿದೆ.

ಸ್ವಚ್ಛ ನಗರ ಮತ್ತು ತ್ಯಾಜ್ಯ ಮುಕ್ತ ನಗರ ವರ್ಗಗಳಲ್ಲಿ ಮೈಸೂರಿನ ಹೆಸರಿದೆ ಎಂಬ ಮಾಹಿತಿ ಮೈಸೂರು ಮಹಾನಗರ ಪಾಲಿಕೆಗೆ ಲಭ್ಯವಾಗಿದೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಿಂದ ಈ ಬಗ್ಗೆ ಇ-ಮೇಲ್ ಸಂದೇಶ ರವಾನೆಯಾಗಿದ್ದು, ಮಾ.6ರಂದು ನಡೆಯಲಿರುವ ಸಮಾರಂಭದಲ್ಲಿ ಈ ಕುರಿತು ಮಾಹಿತಿ ಲಭ್ಯವಾಗಲಿದೆ.

Will Mysuru get Top place in India?

3ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ಮೈಸೂರು ನಗರ ಕಳೆದ ಸಲ 'ಸ್ವಚ್ಛ ನಗರ' ರಾಂಕಿಂಗ್ ನಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ಆದರೆ, ದೇಶದಲ್ಲಿ ಒಟ್ಟಾರೆಯಾಗಿ ಎಂಟನೇ ಸ್ಥಾನ ಲಭಿಸಿತ್ತು. 2015 ಮತ್ತು 2016 ರಲ್ಲಿ ಮೈಸೂರಿಗೆ ಅಗ್ರಸ್ಥಾನ ದೊರೆತಿತ್ತು.

ಈ ಬಾರಿ ಮೈಸೂರು ನಗರ ಅಲ್ಲದೆ ಕೆ.ಅರ್.ನಗರ, ಪಿರಿಯಾಪಟ್ಟಣ ಮತ್ತು ತಿ.ನರಸೀಪುರ ಕೂಡ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗೆ ಸ್ಪರ್ಧೆಯಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+