ಸುರೇಶ್ ಪ್ರಭು ರೈಲ್ವೆ ಬಜೆಟ್‌ನಲ್ಲಿ ಮೈಸೂರಿಗೆ ಸಿಕ್ಕಿದ್ದೇನು?

ಮೈಸೂರು, ಫೆ. 27 : ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಗುರುವಾರ ಮಂಡಿಸಿದ 2015-16ನೇ ಸಾಲಿನ ರೈಲ್ವೆ ಬಜೆಟ್‌ನಲ್ಲಿ 108 ರೈಲುಗಳಲ್ಲಿ ಇ-ಕೆಟರಿಂಗ್ ಸೇವೆ ಆರಂಭಿಸುವುದಾಗಿ ಹೇಳಿದ್ದಾರೆ. ಮೈಸೂರಿನಿಂದ ಹೊರಡುವ 2 ರೈಲುಗಳಲ್ಲಿ ಈ ಸೇವೆ ಲಭ್ಯವಾಗಲಿದೆ.

ರೈಲ್ವೆ ಬಜೆಟ್ ಮಂಡನೆ ನಂತರ ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಪಿ.ಕೆ.ಸಕ್ಸೇನಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮೈಸೂರು-ಬೆಂಗಳೂರು ಚಾಮುಂಡಿ ಎಕ್ಸ್‌ಪ್ರೆಸ್ ಮತ್ತು ಮೈಸೂರು-ದಾದರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಇ-ಕೆಟರಿಂಗ್ ಸೇವೆ ಆರಂಭವಾಗಲಿದೆ.[ರೈಲ್ವೆ ಬಜೆಟ್ ಮುಖ್ಯಾಂಶಗಳು]

ಈ ಎರಡು ರೈಲುಗಳಲ್ಲಿ ಪ್ರಯಾಣಿಸುವ ಮುನ್ನ ಊಟ, ಉಪಹಾರಕ್ಕೆ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಲು ಇ-ಕೆಟರಿಂಗ್ ಸೇವೆಯನ್ನು ಆರಂಭಿಸಲಾಗುತ್ತದೆ. ರಾಜ್ಯದ 4 ರೈಲುಗಳಲ್ಲಿ ಇ-ಕೆಟರಿಂಗ್ ಸೇವೆ ಆರಂಭಗೊಳ್ಳಲಿದೆ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. [ರೈಲ್ವೆ ಬಜೆಟ್ : 9 ಕನ್ನಡ ಪತ್ರಿಕೆಗಳ ಹಣೆಬರಹ]

suresh prabhu

ಮೈಸೂರಿನಿಂದ ಹೊರಡುವ ಎರಡು ರೈಲು ಮತ್ತು ಯಶವಂತಪುರ-ಕೋಚುವೇಲಿ ಎಕ್ಸ್‌ಪ್ರೆಸ್, ಬೆಂಗಳೂರು-ಸಿಕಂದರಾಬಾದ್ ಗರೀಬ್‌ರಥ್ ರೈಲುಗಳಲ್ಲಿ ಇ-ಕೆಟರಿಂಗ್ ಸೇವೆ ಲಭ್ಯವಾಗಲಿದೆ. [ರೈಲ್ವೆ ಬಜೆಟ್ : ಎಲ್ಲರಿಗೂ ಸುರೇಶ್ ಪ್ರಭು ನೀಡಿದ್ದೇನು?]

ಮೈಸೂರು ನಿಲ್ದಾಣದಲ್ಲಿ ವೈಫೈ : ಬಜೆಟ್‌ನಲ್ಲಿ ದೇಶದ 400ಕ್ಕೂ ಹೆಚ್ಚು ಪ್ರಮುಖ ನಿಲ್ದಾಣಗಳಲ್ಲಿ ವೈಫೈ ಸೇವೆ ಒದಗಿಸುವುದಾಗಿ ಘೋಷಣೆ ಮಾಡಲಾಗಿದೆ. ಕರ್ನಾಟಕದ 17 ನಿಲ್ದಾಣಗಳು ಇದರಲ್ಲಿ ಸೇರಿವೆ. ಮೈಸೂರು ಭಾಗದ ನಾಲ್ಕು ನಿಲ್ದಾಣಗಳು ಈ ವ್ಯಾಪ್ತಿಗೆ ಒಳಪಡಲಿವೆ.

ಬಿ ದರ್ಜೆಯ ನಿಲ್ದಾಣಗಳಲ್ಲಿ ವೈಫೈ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಮೈಸೂರು ವಿಭಾಗದಲ್ಲಿ ಮೈಸೂರು, ಶಿವಮೊಗ್ಗ ಹಾಗೂ ದಾವಣಗೆರೆ ರೈಲ್ವೆ ನಿಲ್ದಾಣಗಳು ಎ ದರ್ಜೆಗೆ, ಹಾಸನ, ಬೀರೂರು, ಅರಸಿಕೆರೆ, ಭದ್ರಾವತಿ, ಹಾವೇರಿ ಹಾಗೂ ಹರಿಹರ ರೈಲು ನಿಲ್ದಾಣಗಳು ಬಿ ದರ್ಜೆಗೆ ಸೇರಿವೆ.

ಮೈಸೂರು ವಿಭಾಗದ ಎ ದರ್ಜೆ ನಿಲ್ದಾಣಗಳಲ್ಲಿ ಇನ್ನೂ ವೈಫೈ ವ್ಯವಸ್ಥೆ ಕಲ್ಪಿಸಿಲ್ಲ. ಬಿ ದರ್ಜೆ ನಿಲ್ದಾಣಗಳಲ್ಲೂ ವೈಫೈ ವ್ಯವಸ್ಥೆ ಘೋಷಣೆ ಮಾಡಿರುವುದರಿಂದ ಮೈಸೂರು ವಿಭಾಗದಲ್ಲಿನ ನಿಲ್ದಾಣಗಳಲ್ಲಿ ಕೆಲವು ತಿಂಗಳುಗಳಲ್ಲಿ ವೈಫೈ ಸೇವೆ ಲಭ್ಯವಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+