ಜಂಬೂಸವಾರಿ ಪುಷ್ಪಾರ್ಚನೆಯಲ್ಲಿ ಯದುವೀರ್ ಗೈರು, ಕಾರಣವೇನು?
ಇಂದು ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿ ವೈಭವಪೋತದಿಂದ ಸಂಪನ್ನಗೊಂಡಿದೆ. ದಸರಾ ಮಹೋತ್ಸವ ಸಂಭ್ರಮದಿಂದ ಮುಗಿದಿದೆ. ಆದರೆ, ಈ ಬಾರಿಯ ಜಂಬೂಸವಾರಿಯಲ್ಲಿ ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಒಡೆಯರ್ ಗೈರಾಗಿದ್ದರು.
ಬಿಜೆಪಿ ಸಂಸದರೂ ಆಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪ್ರತಿ ವರ್ಷ ದಸರಾ ಜಂಬೂಸವಾರಿ ಪುಷ್ಪಾರ್ಚನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಹಬ್ಬದ ವೇಳೆಯೇ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಮಗು ಜನನವಾಗಿದೆ.

ಯದುವೀರ್ ಅವರಿಗೆ ಕಂಕಣ ಧಾರಣೆ ನಂತರ ಮಗು ಜನಿಸಿದ್ದರಿಂದ ಅರಮನೆಯಲ್ಲಿನ ದಸರಾ ಧಾರ್ಮಿಕ ಕಾರ್ಯವನ್ನು ಯದುವೀರ್ ಅವರು ಮುಂದುವರಿಸಿದ್ದರು. ಆದರೆ ಕಂಕಣ ವಿಸರ್ಜನೆಯಾದ ಬಳಿಕ ಮತ್ತೆ ಜನನ ಸೂತಕ ಅನ್ವಯವಾದ ಹಿನ್ನೆಲೆಯಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆಯಲ್ಲಿ ಯದುವೀರ್ ಪಾಲ್ಗೊಳ್ಳಲಿಲ್ಲ ಎನ್ನಲಾಗಿದೆ.
ಅರಮನೆಯಲ್ಲಿನ ಶರನ್ನವರಾತ್ರಿ ಕಾರ್ಯ ಹಾಗೂ ವಿಜಯದಶಮಿ ಧಾರ್ಮಿಕ ಕಾರ್ಯ, ವಿಜಯಯಾತ್ರೆ ಮುಗಿಸಿದ ಬಳಿಕ ಯದುವೀರ್ ಅವರು ಕಂಕಣ ವಿಸರ್ಜನೆ ಮಾಡಿದರು. ಇದಾದ ಬಳಿಕ ಮಗುವಿನ ಜನನದ ಸೂತಕ ಅನ್ವಯವಾಗಿದ್ದು, ಚಾಮುಂಡೇಶ್ವರಿ ದೇವತೆಯ ಆರಾಧಕರಾದ ಯದುವೀರ್ ದೇವಿಯ ಪುಷ್ಪಾರ್ಚನೆಗೆ ಪಾಲ್ಗೊಳ್ಳಲಿಲ್ಲ.
ಅರಮನೆಯಲ್ಲಿ ಅಕ್ಟೋಬರ್ 3ರಂದು ಶರನ್ನವರಾತ್ರಿಯ ಮೊದಲ ದಿನ ಯದುವೀರ್ ಒಡೆಯರ್ ಒಂಬತ್ತು ದಿನಗಳ ಖಾಸಗಿ ದರ್ಬಾರ್ ಆರಂಭಿಸಿದರು. ಈ ಧಾರ್ಮಿಕ ಕಾರ್ಯಗಳಲ್ಲಿ ಯದುವೀರ್ ಜತೆಗೆ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಕೂಡ ಇದ್ದರು. ಆದರೆ ಆಯುಧ ಪೂಜೆ ದಿನದಂದು ತ್ರಿಷಿಕಾ ಒಡೆಯರ್ ಅವರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಗೆ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದರು ಎನ್ನಲಾಗಿದೆ.

ಹಾಗಾಗಿ ನಿನ್ನೆ ಶುಕ್ರವಾರ ಸಂಜೆ ರತ್ನಖಚಿತ ಸಿಂಹಾಸನದಲ್ಲಿ ಯದುವೀರ್ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸಿ, ಬಳಿಕ ಸಿಂಹಾಸನದಲ್ಲಿ ಜೋಡಿಸಲಾದ ಸಿಂಹದ ತಲೆಯನ್ನು ನಿಮಜ್ಜನಗೊಳಿಸಿದರು. ಇದಾದ ನಂತರ ಅಂಬಾವಿಲಾಸ ಪೂಜೆ ನಡೆಸಿದ ನಂತರ ಯದುವೀರ್ ದೇವರ ದರ್ಶನ ಪಡೆದು, ನವರಾತ್ರಿ ಪೂಜೆಯನ್ನು ಸಮಾಪನಗೊಳಿಸಿದರು ಎಂದು ತಿಳಿದುಬಂದಿದೆ.
ಈ ವರ್ಷ ಯುವರಾಜ ಯದುವೀರ್ ಒಡೆಯರ್ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸದ್ಯ ಬಿಜೆಪಿ ಸಂಸದರೂ ಆಗಿದ್ದಾರೆ. ಮತ್ತೊಂದೆಡೆ ದಸರಾ ಸಂಭ್ರಮದ ಜೊತೆಗೆ ಎರಡನೇ ಪುತ್ರನ ಆಗಮನದೊಂದಿಗೆ ಹರುಷದ ಕಡಲಲ್ಲಿ ತೇಲಿದ್ದಾರೆ.
ಮಗುವಿನ ಜನನದ ಬೆನ್ನಲ್ಲೇ ಮೈಸೂರಿಗೆ ಮತ್ತೊಬ್ಬ ಯುವರಾಜನ ಆಗಮನವಾಗಿದೆ ಎಂದು ಸಾಂಸ್ಕೃತಿಕ ನಗರಿಯ ಜನ ಫುಲ್ ಖುಷ್ ಆಗಿದ್ದಾರೆ. ಯುವರಾಜನ ಜನನವು ದಸರಾ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತ್ರಿಷಿಕಾ ಕುಮಾರಿ ಅವರನ್ನು 2016ರಲ್ಲಿ ವಿವಾಹವಾಗಿದ್ದರು. ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಆದ್ಯವೀರ್ ಎಂದು ನಾಮಕರಣ ಮಾಡಲಾಗಿದೆ. ಇದೀಗ ಮೈಸೂರು ರಾಜಮನೆತನಕ್ಕೆ ಮತ್ತೊಂದು ಕುಡಿ ಕಾಲಿಟ್ಟಿದೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications