ಮೈಸೂರು ದಸರಾ ಬರೀ ಜಂಬೂಸವಾರಿಯಲ್ಲ..ಕಲೆ, ಕ್ರೀಡೆ, ಸಂಸ್ಕೃತಿಯ ಮಹಾ ಸಂಗಮ!
ಮೈಸೂರು, ಸೆಪ್ಟೆಂಬರ್ 17: ಮೈಸೂರು ದಸರಾ ಎಂದಾಕ್ಷಣ ಮೇಲ್ನೋಟಕ್ಕೆ ಜಂಬೂಸವಾರಿ ಕಣ್ಮುಂದೆ ಹಾದು ಹೋಗುತ್ತದೆ. ಆದರೆ ನಿಜ ಹೇಳಬೇಕೆಂದರೆ ಜಂಬೂಸವಾರಿ ಜತೆ, ಜತೆಗೆ ಸಂಪ್ರದಾಯ, ಕಲೆ ಸಂಸ್ಕೃತಿಯ ಮೇಳವೂ ಇದಾಗಿದೆ ಎಂಬುದಕ್ಕೆ ದಸರಾ ಸಂಬಂಧಪಟ್ಟಂತೆ ನಡೆಯುವ ಹತ್ತಾರು ಕಾರ್ಯಕ್ರಮಗಳು ಸಾಕ್ಷಿಯಾಗಿವೆ. ದಸರಾದೊಳಗೆ ಇಣುಕಿ ನೋಡಿದರೆ ಏನಿಲ್ಲ ಏನಿದೆ ಎಂಬುದು ಗೋಚರವಾಗುತ್ತದೆ.
ದಸರಾ ಆಚರಣೆಗಳು ದೇಶದಾದ್ಯಂತ ನಡೆಯಬಹುದಾದರೂ ಮೈಸೂರಿನಂತೆ ದಸರಾ ಕಾರ್ಯಕ್ರಮಗಳು ನಡೆಯುವುದಿಲ್ಲ. ಹೀಗಾಗಿ ಮೈಸೂರು ದಸರಾಕ್ಕೆ ಸರಿ ಸಾಟಿ ಯಾವುದೂ ಇಲ್ಲ ಎಂಬುದನ್ನು ನಾವು ಹೆಮ್ಮೆಯಿಂದ ಹೇಳಬಹುದಾಗಿದೆ.

ನಿಜ ಹೇಳಬೇಕೆಂದರೆ ಮೈಸೂರು ದಸರಾದಲ್ಲಿ ಸಂಭ್ರಮವಿದೆ, ಸಡಗರವಿದೆ, ಕಲೆ, ಸಾಹಿತ್ಯ, ಕ್ರೀಡೆ, ಮನೋರಂಜನೆಯಿದೆ ಅದರಾಚೆಗೆ ಸಂಪ್ರದಾಯದ ವೈಯ್ಯಾರವಿದೆ ಅದರಾಚೆಗೆ ಭವ್ಯ ಇತಿಹಾಸವಿದೆ. ಒಮ್ಮೆ ಇತಿಹಾಸದತ್ತ ತಿರುಗಿ ನೋಡಿದರೆ ದಸರಾದ ಹೆಜ್ಜೆಗುರುತುಗಳು ಕಾಣ ಸಿಗುತ್ತವೆ.
ಆರಂಭದಿಂದ ಇಲ್ಲಿಯ ತನಕ ಹತ್ತು ಹಲವು ಬದಲಾವಣೆ ಕಂಡಿದ್ದು ಇತಿಹಾಸದ ಹೊಳಪು ಮಾತ್ರ ಕಳೆಗುಂದಿಲ್ಲ. ಹೀಗಾಗಿ ದಸರಾ. ಸಮಸ್ತ ನಾಡಿನ ಸಾಂಸ್ಕೃತಿಕ ಸಿರಿ ಸಂಪತ್ತಿನ ಮತ್ತು ನಾಡನ್ನಾಳಿದ ರಾಜ ಪರಂಪರೆಯ ಅನಾವರಣವಾಗಿ ಕಾಣಿಸುತ್ತದೆ.

ಇತರೆಡೆಗೆ ಹೋಲಿಸಿದರೆ ಮೈಸೂರು ದಸರಾ ವಿಭಿನ್ನ ಮತ್ತು ವಿಶಿಷ್ಟ. ಇಲ್ಲಿ ಅಶ್ವಯುಜ ಶುದ್ಧ ಪ್ರಥಮೆಯಂದು ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸುವುದರೊಂದಿಗೆ ನವರಾತ್ರಿ ಉತ್ಸವಕ್ಕೆ ಅರ್ಥಾತ್ ದಸರಾ ಕಾರ್ಯಕ್ರಗಳಿಗೆ ಚಾಲನೆ ಸಿಗುತ್ತದೆ. . ಅಂದು ಅಂಬಾ ವಿಲಾಸ ಅರಮನೆಯೊಳಗಿನ ದರ್ಬಾರ್‌ಹಾಲ್‌ನಲ್ಲಿ ನವರಾತ್ರಿಯ ಪೂಜಾ ಕೈಂಕರ್ಯಗಳು ಆರಂಭವಾಗುತ್ತವೆ.
ಈ ವೇಳೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸ್ವರ್ಣ ಸಿಂಹಾಸನಾರೂಢರಾಗಿ ಖಾಸಗಿ ದರ್ಬಾರ್ ನಡೆಸುತ್ತಾರೆ. ಈ ವೇಳೆ ಮೈಸೂರು ನಗರದ ದೊಡ್ಡಕೆರೆ ಮೈದಾನದಲ್ಲಿ 'ದಸರಾ ವಸ್ತು ಪ್ರದರ್ಶನ' ಕೂಡ ಆರಂಭವಾಗುತ್ತದೆ.

ನವರಾತ್ರಿಯಂದು ವಿವಿಧ ಮೇಳಗಳು
ನವರಾತ್ರಿಯ ಮೊದಲ ದಿನದಿಂದ ಆರಂಭವಾಗಿ ಮಹಾನವಮಿಯ ಒಂಭತ್ತು ದಿನಗಳ ಕಾಲ ಸಂಗೀತೋತ್ಸವ, ದಸರಾ ಚಲನಚಿತ್ರೋತ್ಸವ, ದಸರಾ ಕಾವ್ಯೋತ್ಸವ, ದಸರಾ ರಂಗೋತ್ಸವ, ದಸರಾ ಕ್ರೀಡೋತ್ಸವ, ಯುವ ದಸರಾ, ಯೋಗ ದಸರಾ, ಗ್ರಾಮೀಣ ದಸರಾ, ಜನಪದ ದಸರಾ, ರೈತ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ದಸರಾ ಗೊಂಬೆ ಪ್ರದರ್ಶನ, ದಸರಾ ವೈಮಾನಿಕ ಪ್ರದರ್ಶನ, ದಸರಾ ಆಹಾರ ಮೇಳ ಹೀಗೆ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.
ಇನ್ನು ನಗರದ ತುಂಬಾ ಸಡಗರ ಸಂಭ್ರಮ ತುಂಬುವುದರೊಂದಿಗೆ ಇಡೀ ನಗರ ಬೆಳಕಿನ ದೀಪದಲ್ಲಿ ಮಿಂದೇಳುತ್ತಿರುತ್ತದೆ. ಅದರ ಜತೆ ಜತೆಗೆ ಮೈಸೂರಿನ ತುಂಬಾ ವಿವಿಧ ದಸರಾ ಉತ್ಸವಗಳ, ಮೇಳಗಳ, ಪ್ರದರ್ಶನಗಳ ಮಹಾ ಸುಗ್ಗಿಯೇ ನಡೆಯುತ್ತಿರುತ್ತದೆ.
ನವರಾತ್ರಿಯ ಸಮಾರೋಪವಾಗಿ ವಿಜಯ ದಶಮಿಯಂದು ರಾಜ್ಯದ ಮುಖ್ಯಮಂತ್ರಿಯಿಂದ ನಂದಿ ಕಂಬ ಪೂಜೆಯೊಡನೆ ಆನೆ ಮೇಲಿನ ಅಂಬಾರಿಯಲ್ಲಿ ಆಸೀನಳಾಗಿರುವ ತಾಯಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಚಾಲನೆಗೊಂಡು ನಡೆಯುವ ಜಂಬೂ ಸವಾರಿಯ ಮಹಾ ಮೆರವಣಿಗೆ ಇಡೀ ನಾಡಿನ ಸಾಂಸ್ಕೃತಿಕ ಮತ್ತು ಸಂಪತ್ತನ್ನು ಅನಾವರಣಗೊಳಿಸಿ ಬಿಡುತ್ತದೆ.

ಈ ಜಂಬೂಸವಾರಿಯಲ್ಲಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಚಿನ್ನದ ಅಂಬಾರಿಯಲ್ಲಿ ವೀರಾಜಳಾದ ಚಾಮುಂಡೇಶ್ವರಿಯನ್ನು ಹೊತ್ತು ಕೊನೆಯಲ್ಲಿ ನಡೆದರೆ ಮುಂದೆ ನಿಶಾನೆ, ನೌಫಥ್ ಆನೆಗಳು ಸೇರಿದಂತೆ ಇಡೀ ಗಜಪಡೆ ಸಾಥ್ ನೀಡುತ್ತವೆ.
ಜಂಬೂಸವಾರಿಗೆ ಕಲಾ ತಂಡಗಳ ಸಾಥ್
ಇದರ ಜೊತೆಯಲ್ಲಿ ಮೊದಲಿಗೆ ನಂದೀಧ್ವಜ ಕುಣಿತ, ನಾದಸ್ವರ ವಾದನ, ಪ್ಯಾಲೇಸ್ ಬ್ಯಾಂಡ್, ಪೊಲೀಸ್ ಬ್ಯಾಂಡ್, ಆನೆ ಸಾರೋಟು, ಕುದುರೆ ಸಾರೋಟು, ಪಿರಂಗಿಗಳು, ಬೆಳ್ಳಿ ರಥ, ವಿವಿಧ ಪಲ್ಲಕ್ಕಿಗಳು, ಭಜನೆ ಮೇಳ, ಕರಗ, ವೀರಭದ್ರನ ಕುಣಿತ, ಕೀಲು ಕುದುರೆ, ಮಲ್ಲಗಂಬ, ವೇಷಗಾರರು, ಅಲಾವಿ ಕುಣಿತ, ವೀರಗಾಸೆ, ಝೂಂಜ್ ಪಥಕ್, ಗೊರವರ ಕುಣಿತ,
ಜಗ್ಗಲಗೆ ಮೇಳ, ಹೆಜ್ಜೆ ಮೇಳ, ಗಾರುಡಿಗೊಂಬೆ, ಟಿಬೇಟಿಯನ್ ನೃತ್ಯ, ಚಿಟ್ ಮೇಳ, ಕೋಲಾಟ, ಮಲೆನಾಡು ಸುಗ್ಗಿಕುಣಿತ, ಕೊಡವ ಕುಣಿತ, ಪೂಜಾ ಕುಣಿತ, ಕಂಸಾಳೆ, ತಮಟೆ ವಾದನ, ಮರಗಾಲು ಕುಣಿತ, ಸೋಮನಕುಣಿತ, ಚಂಡೆ ಮೇಳ, ಹಾಲಕ್ಕಿ ಸುಗ್ಗಿ ಕುಣಿತ, ನಗಾರಿ ಮೇಳ, ಪಟಾ ಕುಣಿತ, ಕೊಂಬು ಕಹಳೆ, ಕರಡಿ ಮಜಲು, ಪಾಳೇಗಾರನ ವೇಷಧಾರಿಗಳು ಗಮನ ಸೆಳೆಯುತ್ತಾರೆ.
ಇಷ್ಟೇ ಅಲ್ಲದೆ ದೊಣ್ಣೆವರಸೆ, ಕಂಗಿಲು ಕುಣಿತ, ಯಕ್ಷಗಾನ ವೇಷಧಾರಿಗಳು, ಜಡೆಕೋಲಾಟ, ಧ್ವಜ ಕುಣಿತ, ಚಿಟಿಕಿ ಭಜನೆ, ಒನಕೆ ನೃತ್ಯ, ಭೂತ ನೃತ್ಯ ಇವುಗಳೆಲ್ಲದರ ಮಹಾ ಸಂಗಮವಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯನ್ನೂ ಪ್ರತಿನಿಧಿಸುವ ವೈವಿಧ್ಯಮಯ ಸ್ತಬ್ದಚಿತ್ರಗಳೊಡನೆ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿ ಸಾಗುವ ಜಂಬೂಸವಾರಿಯ ಮಹಾ ಮೆರವಣಿಗೆ ನೆರೆದ ಲಕ್ಷಾಂತರ ಜನರ ಕಣ್ಮನ ಸೆಳೆಯುತ್ತದೆ.
ಪಂಜಿನ ಕವಾಯಿತಿನೊಂದಿಗೆ ದಸರಾಕ್ಕೆ ವಿದಾಯ
ಇನ್ನು ಅಂದು ವಿಜಯದಶಮಿಯ ಜಂಬೂಸವಾರಿಯ ನಂತರ ರಾತ್ರಿ ಪೊಲೀಸ್ ದಳದಿಂದ ನಡೆಯುವ ರೋಚಕ ಟಾರ್ಚ್‌ಲೈಟ್ ಪೆರೇಡ್ (ಪಂಜಿನ ಕವಾಯಿತು) ಇತಿಹಾಸದ ಕಥೆ ಹೇಳುತ್ತದೆ. ಹಿಂದೆ ಮಹಾರಾಜರು ಸೈನಿಕರಿಂದ ಧ್ವಜ ವಂದನೆ ಸ್ವೀಕರಿಸುತ್ತಿದ್ದ ಮಾದರಿಯಲ್ಲೇ ಈಗ ಟಾರ್ಚ್‌ಲೈಟ್ ಪೆರೇಡ್ ನಡೆಯುತ್ತದೆ. ಅದರಂತೆ ರಾಜರ ಬದಲಾಗಿ ಇಂದು ರಾಜ್ಯದ ರಾಜ್ಯಪಾಲರು ಧ್ವಜವಂದನೆ ಗೌರವ ಸ್ವೀಕರಿಸುತ್ತಾರೆ.
ಟಾರ್ಚ್‌ಲೈಟ್ ಪೆರೇಡ್‌ನ ಚಿತ್ತಾಕರ್ಷಕ ಸಾಹಸಮಯ ದೃಶ್ಯಗಳ ಜೊತೆಗೆ ನೃತ್ಯಗಳು, ಲೇಸರ್ ಪ್ರದರ್ಶನ, ಅಶ್ವಾರೋಹಿಗಳ ಸಾಹಸ ಕಸರತ್ತು, ಹೊನಲು ಬೆಳಕಿನ ಮಾಯಾಲೋಕ, ಬಣ್ಣ ಬಣ್ಣದ ಬಾಣ ಬಿರುಸುಗಳ ಎಲ್ಲವೂ ದಸರಾಕ್ಕೆ ಮೆರಗು ನೀಡುತ್ತವೆ. ಒಟ್ಟಾರೆ ದಸರಾ ಸಾಂಸ್ಕೃತಿಕ ಸುಗ್ಗಿಯಾಗಿ ಗಮನ ಸೆಳೆಯುತ್ತದೆ.
-
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್












Click it and Unblock the Notifications