ಲೋಕಸಮರ:ಪ್ರತಾಪ್ ಸಿಂಹ ಪ್ಲಸ್-ಮೈನಸ್ ಪಾಯಿಂಟ್ ಗಳೇನು?

Recommended Video

      Lok Sabha Elections 2019 : ಪ್ರತಾಪಸಿಂಹ ಸೋತು ಪಂಜರ ಸೇರ್ತಾರಾ? ಅಥವಾ ಗೆದ್ದು ಬೀಗ್ತಾರಾ?

      ಮೈಸೂರು, ಏಪ್ರಿಲ್ 12: ಲೋಕಸಭಾ ಚುನಾವಣೆಗೆ ಬಾಕಿ ಉಳಿದಿರುವುದು 6 ದಿನ.ಈ ಬಾರಿಯ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಪ್ರತಾಪ್ ಸಿಂಹ ಸ್ಪರ್ಧಿಸುತ್ತಿದ್ದು, ಎದುರಿಗೆ ಸಮಸ್ಯೆಗಳ ಸರಮಾಲೆಯೇ ಇದೆ.

      2014ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಅಷ್ಟಾಗಿ ಮುಖ ಪರಿಚಯವಿಲ್ಲದ ಸಂಸದ ಪ್ರತಾಪ್ ಸಿಂಹ, ಪತ್ರಕರ್ತ ಅಂಕಣಕಾರರು ಕೂಡ ಹೌದು. ರಾಜಕೀಯವನ್ನು ಚೆನ್ನಾಗಿ ಬಲ್ಲ ಹಿರಿಯ ಅನುಭವಿ ವಿಶ್ವನಾಥ್ ಎದುರು ಸಿಂಹ ಘರ್ಜಸಿವುದಿಲ್ಲವೆಂದು ಹಲವರು ಮಾತನಾಡಿಕೊಂಡಿದ್ದರು.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಆದರೆ ಚುನಾವಣಾ ಫಲಿತಾಂಶ ಬಂದಾಗ ಮೋದಿ ಅಲೆ ಮೊದಲ ಬಾರಿಗೆ ಪ್ರತಾಪ್ ಸಿಂಹರನ್ನು ಸಂಸತ್ ಪ್ರವೇಶಿಸುವಂತೆ ಮಾಡಿತು. ಇದೀಗ ಮತ್ತೊಂದು ಚುನಾವಣೆ ಎದುರಾಗಿದ್ದು ಪ್ರತಾಪ್ ಸಿಂಹ ಕಮಲ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದಾರೆ. ಈ ಬಾರಿಯ ಮೋದಿ ಅಲೆಯೊಂದಿಗೆ ತಾವು ಮಾಡಿರುವ ಅಭಿವೃದ್ಧಿ ಕಾರ್ಯ ಗೆಲ್ಲಿಸುತ್ತದೆ ಎಂದು ಅವರು ಹೇಳುತ್ತಿದ್ದಾರೆ.

      ಪಾಸ್ ಪೋರ್ಟ್ ಸೇವಾ ಕೇಂದ್ರ , ರೈಲ್ವೆ ಹೆದ್ದಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಡುತ್ತಿದ್ದಾರೆ. ಆದರೆ ಪರಿಸ್ಥಿತಿ ಹಿಂದಿನಷ್ಟು ಸುಲಭವಲ್ಲ ಎನ್ನುವ ಮಾತು ಪಕ್ಷದೊಳಗಿನಿಂದಲೇ ಕೇಳಿ ಬರುತ್ತಿದೆ.

      ರಾಜಕೀಯ ವಿಶ್ಲೇಷಕರ ಪ್ರಕಾರ ಕ್ಷೇತ್ರದಲ್ಲಿ ಸಾಕಷ್ಟು ನಾಯಕರ ಮೇಲಾಟ ನಡೆದಿದೆ. ಮೇಲ್ನೋಟಕ್ಕೆ ಮೋದಿ ಅಲೆ ಅಭಿವೃದ್ಧಿ ಎಂದರೂ ಪ್ರತಾಪ್ ಸಿಂಹ ನೂರೆಂಟು ಸವಾಲುಗಳನ್ನು ಎದುರಿಸಬೇಕಾಗಿದೆ. ಹಿಂದೆ ಗೆದ್ದಿರುವುದು ಕೇವಲ 31 ಸಾವಿರ ಮತಗಳ ಅಂತರದಿಂದ. 5,03,908 ಬಿಜೆಪಿ ಮತಗಳನ್ನು ಪಡೆದರೆ ಕಾಂಗ್ರೆಸ್ 4,72,300 ಹಾಗೂ ಜೆಡಿಎಸ್ 1,38,587 ಮತಗಳನ್ನು ಗಳಿಸಿತ್ತು.

       ಸಿಂಹ ಪಂಜರದೊಳಗೆ ಸೇರಬೇಕಾಗುತ್ತದೆ

      ಸಿಂಹ ಪಂಜರದೊಳಗೆ ಸೇರಬೇಕಾಗುತ್ತದೆ

      ಈ ಬಾರಿ ಕಠಿಣ ಸವಾಲು ಮೈತ್ರಿ ಅಭ್ಯರ್ಥಿಯ ಎದುರು ಸ್ಪರ್ಧಿಸುವುದೇ ಆಗಿದೆ. ಸಾಮಾನ್ಯವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ಪರ್ಧೆಯಿಂದಾಗಿ ಅಲ್ಪಸಂಖ್ಯಾತರ, ದಲಿತರ, ಅಹಿಂದ ಮತಗಳು ಹಾಗೂ ಎರಡು ಪಕ್ಷಗಳ ಸಾಂಪ್ರದಾಯಿಕ ಮತಗಳ ಕ್ರೋಢೀಕರಣವಾದರೆ ಸಿಂಹ ಪಂಜರದೊಳಗೆ ಸೇರಬೇಕಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

       ಇವೆಲ್ಲವೂ ಪ್ರಯೋಜನವಾಗಬಹುದು

      ಇವೆಲ್ಲವೂ ಪ್ರಯೋಜನವಾಗಬಹುದು

      ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮೈತ್ರಿ ಬಗ್ಗೆ ಪರಸ್ಪರ ಅನುಮಾನ ವ್ಯಕ್ತಪಡಿಸುತ್ತಿರುವುದು, ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು ಸುಮಲತಾ ಅವರಿಗೆ ಬಹಿರಂಗವಾಗಿ ಬೆಂಬಲ ಕೊಡುತ್ತಿರುವುದು, ಹಾಸನದಲ್ಲಿ ಜೆಡಿಎಸ್ ಪರ ಕೆಲಸ ಮಾಡಲು ಕಾಂಗ್ರೆಸ್ ನಿರಾಕರಿಸುತ್ತಿರುವುದು ಇವೆಲ್ಲವೂ ತಮಗೆ ಪ್ರಯೋಜನವಾಗಬಹುದು ಎನ್ನುವ ವಿಶ್ವಾಸದಲ್ಲಿದ್ದಾರೆ ಸಂಸದ ಪ್ರತಾಪ್ ಸಿಂಹ.

       ಅಸಮಾಧಾನ ಹೊರಹಾಕಿದ ಕಾರ್ಯಕರ್ತರು

      ಅಸಮಾಧಾನ ಹೊರಹಾಕಿದ ಕಾರ್ಯಕರ್ತರು

      ಸಂಸದರು ತಮ್ಮ ಕೈಗೆ ಸಿಗುವುದಿಲ್ಲ, ದೂರವಾಣಿ ಕರೆಗಳನ್ನು ಮಾಡಿದರೆ ಅದನ್ನು ಉತ್ತರಿಸದೆ ಫೇಸ್ ಬುಕ್ , ಟ್ವಿಟ್ಟರ್ ನಲ್ಲಿಯೇ ಯಾವಾಗಲೂ ಇರುತ್ತಾರೆ ಎನ್ನುವ ಅಸಮಾಧಾನ ಕೆಲವು ಬಿಜೆಪಿ ಕಾರ್ಯಕರ್ತರಲ್ಲಿದೆ. ತಮ್ಮ ಸಮಸ್ಯೆಗಳನ್ನು ಯಾರಿಗೂ ಹೇಳಿಕೊಳ್ಳಲಾಗುತ್ತಿಲ್ಲ ಎಂದು ಕಾರ್ಯಕರ್ತರು ಶಾಸಕರೊಂದಿಗೆ ಹಾಗೂ ಬಿಜೆಪಿ ನಾಯಕರೊಂದಿಗೆ ಅದೆಷ್ಟೋ ಬಾರಿ ಬಹಿರಂಗವಾಗಿ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

       ಅವರ ಮುಂದಿರುವ ದೊಡ್ಡ ಸವಾಲು

      ಅವರ ಮುಂದಿರುವ ದೊಡ್ಡ ಸವಾಲು

      ಇದನ್ನು ಪ್ರತಾಪ್ ಸಿಂಹ ಹೇಗೆ ಸರಿಪಡಿಸಿಕೊಳ್ಳಲಿದ್ದಾರೆ ಎನ್ನುವುದೇ ಅವರ ಮುಂದಿರುವ ದೊಡ್ಡ ಸವಾಲು. ಇತ್ತೀಚೆಗೆ ಕೊಡಗಿನ ಹಿರಿಯ ಬಿಜೆಪಿ ಮುಖಂಡ ದೇವಯ್ಯ ಅವರನ್ನು ಎದುರು ಹಾಕಿಕೊಂಡು ಅವರಿಗೆ ಫೇಸ್ ಬುಕ್ ನಲ್ಲಿ ತರಾಟೆಗೆ ತೆಗೆದುಕೊಂಡಿರುವುದು,ಕೊಡಗಿನ ಶಾಸಕರೊಬ್ಬರ ಜತೆ ಅಷ್ಟಕ್ಕಷ್ಟೇ ಸಂಬಂಧ ಸೇರಿದಂತೆ ಮುಂತಾದ ಮಿತಿಗಳಿದ್ದರೂ ಅವುಗಳೆಲ್ಲವನ್ನೂ ಮೀರಿ ಮೋದಿ ಅಲೆ ನಿಲ್ಲುತ್ತದೆ ಹಾಗೂ ಒಕ್ಕಲಿಗರ ಮತಗಳು ಬರುತ್ತದೆ ಎಂಬ ವಿಶ್ವಾಸ ಬಿಜೆಪಿಯದ್ದು. ಇದೆಲ್ಲದಕ್ಕೂ ಉತ್ತರ ಚುನಾವಣೆಯ ದಿನವೆಂಬುದು ಜನರ ನುಡಿ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+