• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಪ್ಲಸ್ ಹಾಗೂ ಮೈನಸ್ ಗಳೇನು?

|

ಮೈಸೂರು, ಏಪ್ರಿಲ್ 13 : ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ.

ಆದರೆ ದೋಸ್ತಿ ನಾಯಕರು ಉರುಳಿಸುವ ದಾಳದ ಮೇಲೆ ಫಲಿತಾಂಶ ಈ ಬಾರಿ ನಿರ್ಧಾರವಾಗಲಿದೆ ಎನ್ನಬಹುದು. ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮತ್ತೊಮ್ಮೆ ಆಯ್ಕೆ ಬಯಸಿದರೆ , ಈ ಹಿಂದೆ ಬಿಜೆಪಿ ಕ್ಷೇತ್ರದಿಂದಲೇ ಗೆದ್ದಿದ್ದ ವಿಜಯಶಂಕರ್ ಸಿಂಹರ ಅವರ ಎದುರಾಳಿ.

ಬಿಜೆಪಿ ಹಿಂದುಳಿದ ವರ್ಗದವರಿಗೆ ಲೋಕಸಭಾ ಟಿಕೆಟ್ ಕೊಟ್ಟಿಲ್ಲ:ವಿಜಯ್ ಶಂಕರ್

ಕ್ಷೇತ್ರದಲ್ಲಿ ಒಕ್ಕಲಿಗರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ಕುರುಬ ಸಮಾಜದವರು. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿದ್ದರಾಮಯ್ಯನವರು ಪರಸ್ಪರ ರಾಜಕೀಯ ಎದುರಾಳಿಗಳಾದ ನಂತರ ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರು ಹಾಗೂ ಕುರುಬ ಸಮಾಜದ ಮತಗಳು ತಮ್ಮ ನಾಯಕರ ಪರ ಹೆಚ್ಚಿನ ಪ್ರಮಾಣದಲ್ಲಿ ಕ್ರೋಢೀಕರಣಗೊಂಡಿದೆ.

ಕಾಂಗ್ರೆಸ್ ಪರ ಪ್ರಚಾರಕ್ಕೆ ಜೆಡಿಎಸ್ ಒಲ್ಲದ ಮನಸ್ಸಿನಿಂದ ಇಳಿದಿದೆ

ಕಾಂಗ್ರೆಸ್ ಪರ ಪ್ರಚಾರಕ್ಕೆ ಜೆಡಿಎಸ್ ಒಲ್ಲದ ಮನಸ್ಸಿನಿಂದ ಇಳಿದಿದೆ

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಗಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಜೆಡಿಎಸ್ ಒಲ್ಲದ ಮನಸ್ಸಿನಿಂದಲೇ ಇಳಿದಿದೆ. ಜೆಡಿಎಸ್ ಒಂದು ವಾರ ಸಮೀಪಿಸಿದಂತೆ ತನ್ನ ಪ್ರಚಾರ ನಡೆಸಲು ಆರಂಭಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ದೇವೇಗೌಡ ಪ್ರಚಾರದಿಂದಲೇ ದೂರ ಉಳಿದರು.

ಜೆಡಿಎಸ್ ಮುಖಂಡರಿಂದ ಕಾಂಗ್ರೆಸ್ ಕಾಲೆಳೆಯುವ ಎಚ್ಚರಿಕೆ ನೀಡಿದ್ದರು

ಜೆಡಿಎಸ್ ಮುಖಂಡರಿಂದ ಕಾಂಗ್ರೆಸ್ ಕಾಲೆಳೆಯುವ ಎಚ್ಚರಿಕೆ ನೀಡಿದ್ದರು

ಮಂಡ್ಯದಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಕೈಕೊಟ್ಟರೆ, ಮೈಸೂರಿನಲ್ಲಿ ನಾವು ಕಾಂಗ್ರೆಸ್ ಕಾಲೆಳೆಯುತ್ತೇವೆ ಎಂದು ಜೆಡಿಎಸ್ ಮುಖಂಡರು ನೇರವಾಗಿ ಎಚ್ಚರಿಕೆ ಸಹ ನೀಡಿದ್ದರು.

ಮೈತ್ರಿ ಪಕ್ಷದ ಸಮನ್ವಯ ಕೊರತೆಯಿಂದಾಗಿ ಬಿಜೆಪಿಗೆ ಇದು ಪ್ಲಸ್ ಪಾಯಿಂಟ್ , ವಿಜಯಶಂಕರ್ ಗೆ ಇದು ಮೈನಸ್ ಪಾಯಿಂಟ್ ಎಂದರೆ ತಪ್ಪಾಗಲಿಕ್ಕಿಲ್ಲ. ಅಷ್ಟೇ ಅಲ್ಲ ಪ್ರತಾಪ್ ಸಿಂಹ ಒಕ್ಕಲಿಗ ಸಮಾಜದವರು.

ಅಸಮರ್ಪಕ ಮಾಹಿತಿ:ಪ್ರತಾಪ್ ಸಿಂಹ, ವಿಜಯ್ ಶಂಕರ್ ಸೇರಿದಂತೆ 6 ಮಂದಿಗೆ ನೋಟಿಸ್ ಜಾರಿ

ಕ್ಷೇತ್ರದಲ್ಲಿ ಹೆಚ್ಚುಮಂದಿ ಕಾಂಗ್ರೆಸ್‌ ಶಾಸಕರಿದ್ದರು

ಕ್ಷೇತ್ರದಲ್ಲಿ ಹೆಚ್ಚುಮಂದಿ ಕಾಂಗ್ರೆಸ್‌ ಶಾಸಕರಿದ್ದರು

ಇನ್ನು ಒಲ್ಲದ ಮನಸ್ಸಿನಿಂದಲೇ ಜೆಡಿಎಸ್ ಪರ ನಾಯಕರು ಪ್ರಚಾರ ನಡೆಸುತ್ತಿದ್ದಾರೆ ಎಂಬ ಮಾತುಗಳು ಅನೇಕ ಕಡೆ ಕೇಳಿ ಬರುತ್ತಿದೆ. ಅಲ್ಲದೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಅಷ್ಟೇ ಅಲ್ಲದೇ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಆಗ ಪ್ರತಿ ಪಕ್ಷದಲ್ಲಿದ್ದ ಜೆಡಿಎಸ್ ತನ್ನ ಅಭ್ಯರ್ಥಿ ಕಣದಲ್ಲಿದ್ದರೂ ಕಾಂಗ್ರೆಸ್ ನಿಂದ ಕಣದಲ್ಲಿದ್ದ ವಿಶ್ವನಾಥ್ ಅವರನ್ನು ಸೋಲಿಸಬೇಕೆಂಬ ಏಕೈಕ ಉದ್ದೇಶದಿಂದ ಬಿಜೆಪಿಯನ್ನು ಒಳಗೊಳಗೇ ಬೆಂಬಲಿಸಿ ತನ್ನ ಗುರಿ ಸಾಧಿಸಿತು. ಇನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾದ ಏಕೈಕ ಶಾಸಕರು ಮಾತ್ರವೇ ಸದ್ಯ ಇಲ್ಲಿ ಅಧಿಕಾರದಲ್ಲಿದ್ದಾರೆ. ಅದರೊಟ್ಟಿಗೆ ಇವರು ಕಾಂಗ್ರೆಸ್ ಹೊಸಬರೇ ಎಂದು ಹೇಳಿದರೆ ತಪ್ಪಾಗಲು ಸಾಧ್ಯವಿಲ್ಲ.

ಬಿಜೆಪಿ ಹಿಂದುಳಿದ ವರ್ಗದವರಿಗೆ ಲೋಕಸಭಾ ಟಿಕೆಟ್ ಕೊಟ್ಟಿಲ್ಲ:ವಿಜಯ್ ಶಂಕರ್

ದೋಸ್ತಿ ಜೊತೆಗೆ ಒಬಿಸಿ ಮತಗಳು ಸೇರಿದರೆ ಗೆಲುವುದು ಗ್ಯಾರಂಟಿ

ದೋಸ್ತಿ ಜೊತೆಗೆ ಒಬಿಸಿ ಮತಗಳು ಸೇರಿದರೆ ಗೆಲುವುದು ಗ್ಯಾರಂಟಿ

ದೋಸ್ತಿ ಜೊತೆಗೆ ಒಬಿಸಿ ಮತಗಳು ಸೇರಿದರೆ ವಿಜಯಶಂಕರ್‌ ಗೆಲುವಿನ ದಡ ಸೇರಲಿದ್ದಾರೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ಹೆಚ್ಚಿದೆ. ಸಿಎಂ ಸಿದ್ದರಾಮಯ್ಯ ಅವರ ನಾಯಕತ್ವದ ಬಗ್ಗೆಯೂ ಅಲ್ಲಗಳೆಯುವ ಮಾತಿಲ್ಲ. ಹಾಗೆಯೇ ಸಿ. ಹೆಚ್ ವಿಜಯ್ ಶಂಕರ್ ಮೊದಲಿನಿಂದಲೂ ಓರ್ವ ಸರಳ ಸಜ್ಜನಿಕೆಯ ಸಮಾಧಾನದ ರಾಜಕಾರಣಿ ಎಂದು ಇಲ್ಲಿನವರಿಗೆ ತಿಳಿದಿದೆ. ಅಲ್ಲದೆ ಈ ಬಾರಿ ಕಾಂಗ್ರೆಸ್ ನೊಂದಿಹೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿರುವುದು ಕೂಡ ವಿಜಯಶಂಕರ್ ಗೆ ಮತಗಳ ತನ್ನ ಬತ್ತಳಿಕೆಗೆ ಪಡೆದುಕೊಳ್ಳಲು ಪ್ಲಸ್ ಪಾಯಿಂಟ್ ಎಂದು ಹೇಳಿದರೆ ತಪ್ಪಾಗಲು ಸಾಧ್ಯವೇ ಇಲ್ಲ.

ವಿಜಯ್ ಶಂಕರ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ನಾಯಕರು ಬರಲಿಲ್ಲವೇಕೆ?

English summary
Lok Sabha Elections 2019: C H Vijayshankar is contesting from Mysore-Kodagu Lok Sabha constituency as the JDS – Congress candidate. Here are giving their plus-minus points.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X