ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಕೈಬಿಟ್ಟರೂ, ಬಿಜೆಪಿ ಅವರ ಕೈಬಿಡುವುದಿಲ್ಲ!

Recommended Video

      ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಕೈಬಿಟ್ಟರೂ, ಬಿಜೆಪಿ ಅವರ ಕೈಬಿಡುವುದಿಲ್ಲವಂತೆ | Oneindia Kannada

      ಮೈಸೂರು, ಸೆ 10: ಮೈಸೂರು ದಸರಾ ಕಾರ್ಯಕ್ರಮದ ಪೂರ್ವತಯಾರಿ ಸಭೆಯ ನಂತರ, ಸಚಿವ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ.

      ಮೈಸೂರು ಉಸ್ತುವಾರಿ ವಿ.ಸೋಮಣ್ಣ ಮತ್ತು ಸಿ.ಟಿ.ರವಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, " ಸಿದ್ದರಾಮಯ್ಯನವರನ್ನು ಆಹ್ವಾನಿಸಿಯೇ ದಸರಾ ಉತ್ಸವವನ್ನು ಆಚರಿಸ್ತುತೇವೆ" ಎಂದು ಸೋಮಣ್ಣ ಹೇಳಿದರು.

      "ಸಿದ್ದರಾಮಯನವರನ್ನು ದಸರಾಗೆ ಆಹ್ವಾನಿಸುತ್ತೀರಾ' ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಸಿ.ಟಿ.ರವಿ, " ಸಿದ್ದರಾಮಯ್ಯನವರನ್ನು ಖಂಡಿತವಾಗಿಯೂ ನಾವು ಆಹ್ವಾನಿಸುತ್ತೇವೆ. ಒಂದು ವೇಳೆ ಕಾಂಗ್ರೆಸ್ ಅವರ ಕೈಬಿಟ್ಟರೂ, ನಾವು ಅವರ ಕೈಬಿಡುವುದಿಲ್ಲ" ಎಂದು ಹೇಳಿದರು.

      We Will Not Leave Siddaramaiah, Will Invite Him For Mysuru Dasara: CT Ravi Statement

      " ಪ್ರತೀದಿನ ಸಿದ್ದರಾಮಯ್ಯನವರು ನಮ್ಮ ಸಂಪರ್ಕದಲ್ಲಿದ್ದಾರೆ. ಆಹ್ವಾನ ಪತ್ರಿಕೆ ಇನ್ನೂ ಮುದ್ರಣವಾಗಬೇಕಷ್ಟೇ.. ನಾವು ಅವರನ್ನು ಆಹ್ವಾನಿಸಲು ಹೋದಾಗ, ನೀವೂ ನಮ್ಮ ಜೊತೆಗೆ ಬನ್ನಿ" ಎಂದು ವಿ.ಸೋಮಣ್ಣ, ಮಾಧ್ಯಮದವರಿಗೂ ಆಹ್ವಾನ ನೀಡಿದರು.

      ಸಿ.ಟಿ.ರವಿ ಮಾತನಾಡುತ್ತಾ, " ಒಬ್ಬ ವ್ಯಕ್ತಿಯನ್ನು ಬಂಧಿಸಿದಾಗ, ಜಾತಿಯ ವಿಚಾರ ತರುವುದು ತಪ್ಪು. ಬಂಧನ ಎನ್ನುವುದು ಯಾವುದೇ ಸಮುದಾಯದ ವಿರುದ್ದ ಅಲ್ಲ, ವ್ಯಕ್ತಿಯ ವಿರುದ್ದ" ಎಂದು ಪರೋಕ್ಷವಾಗಿ, ಡಿ.ಕೆ.ಶಿವಕುಮಾರ್ ಹೆಸರನ್ನು ಉಲ್ಲೇಖಿಸದೇ ಟಾಂಗ್ ನೀಡಿದ್ದಾರೆ.

      " ನನ್ನ ಆಸ್ತಿ ಒಂದೇ ಸಮನೆ ಹೆಚ್ಚಾದರೆ, ಅಥವಾ, ನನ್ನ ಮನೆಯಲ್ಲಿ ಕೋಟಿ ಕೋಟಿ ಹಣಸಿಕ್ಕರೆ, ನನ್ನನ್ನು ಪ್ರಾಮಾಣಿಕ ಎಂದು ಹೇಳಿಕೊಳ್ಳಲು ಸಾಧ್ಯವೇ" ಎಂದು ಪ್ರಶ್ನಿಸಿರುವ ರವಿ, " ಸಿದ್ದರಾಮಯ್ಯನವರು ಇದನ್ನೆಲ್ಲಾ ಯೋಚಿಸಿ ಹೇಳಿಕೆಯನ್ನು ನೀಡಬೇಕು" ಎನ್ನುವ ಸಲಹೆಯನ್ನು ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+