ತವರಲ್ಲಿ ಕೇಳಲಿಲ್ಲ ಮುಂದಿನ ಸಿಎಂ ಎಂಬ ಘೋಷಣೆ!

ಮೈಸೂರು, ಜೂನ್ 30; 'ರಾಜಕೀಯ ಹುಲಿ', 'ರಾಜ್ಯದ ಹುಲಿ', 'ಮೈಸೂರು ಹುಲಿ' ಹೀಗೆ ಘೋಷಣೆಗಳ ಜೊತೆ ಅಭಿಮಾನಿಗಳು, ಕಾರ್ಯಕರ್ತರು ಸಿದ್ದರಾಮಯ್ಯರನ್ನು ತವರು ಜಿಲ್ಲೆ ಮೈಸೂರಿನಲ್ಲಿ ಸ್ವಾಗತಿಸಿದರು. ಆದರೆ ಮುಂದಿನ ಸಿಎಂ ಎಂಬ ಘೋಷಣೆ ಕೇಳಲಿಲ್ಲ.

ಬುಧವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿಗೆ ಭೇಟಿ ನೀಡಿದ್ದಾರೆ. ಎರಡು ತಿಂಗಳ ಬಳಿಕ ನಗರಕ್ಕೆ ಬಂದ ಸಿದ್ದರಾಮಯ್ಯರನ್ನು ಕೊಲಂಬಿಯಾ ಸರ್ಕಲ್‌ ಬಳಿ ಕಾರ್ಯರ್ತರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಹಲವಾರು ಘೋಷಣೆಗಳು ಕೇಳಿ ಬಂದವು. ಆದರೆ ಮುಂದಿನ ಸಿಎಂ ಎಂಬ ಘೋಷಣೆ ಕೇಳಿಬರಲಿಲ್ಲ. ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ನಡೆದಿದೆ.

Warm Welcome To Siddaramaiah In Mysuru

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬೆಂಬಲಿಗರ ನಡುವೆ ಮಾತಿನ ಸಮರ ಜೋರಾಗಿದೆ. ಈ ವಿಚಾರದಲ್ಲಿ ಹೈಕಮಾಂಡ್ ಸಹ ಮಧ್ಯ ಪ್ರವೇಶ ಮಾಡಿದ್ದು, ಮುಖ್ಯಮಂತ್ರಿ ವಿಚಾರ ಮಾತನಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸೋಮವಾರ ಹೈಕಮಾಂಡ್ ಸೂಚನೆ ನೀಡಿದ ಬಳಿಕ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಚರ್ಚೆಗೆ ಪೂರ್ಣವಿರಾಮ ಬಿದ್ದಿದೆ. ಆದರೆ ಬಿಜೆಪಿ ಕಾಂಗ್ರೆಸ್ ನಾಯಕರನ್ನು ಮುಂದಿನ ಸಿಎಂ ಯಾರು ಎಂದು ಕೇಳುತ್ತಾ ಕೆಣಕುತ್ತಿದೆ.

ಸಿದ್ದರಾಮಯ್ಯ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಂದಿನ ಸಿಎಂ ಕೂಗು ಕೇಳಿಸಬಹುದು ಎಂಬ ನಿರೀಕ್ಷೆ ಇತ್ತು. ಹೈಕಮಾಂಡ್ ಸೂಚನೆಯನ್ನು ಕಾರ್ಯಕರ್ತರು ಪಾಲಿಸಿದ್ದು, ಸಿದ್ದರಾಮಯ್ಯ ಸಹ ನಿಟ್ಟುಸಿರು ಬಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+