ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧುವನದಲ್ಲಿ ಒಡೆಯರ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

|
Google Oneindia Kannada News

ಮೈಸೂರು, ಡಿ. 11 : ಚಿರನಿದ್ರೆಗೆ ಜಾರಿದ ಯದುವಂಶದ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಂತ್ಯಕ್ರಿಯೆ ಬುಧವಾರ ಸಂಜೆ ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಮಧುವನದಲ್ಲಿ ಸಕಲ ಸರ್ಕಾರಿ ಗೌರವ ಮತ್ತು ರಾಜ ಪೌರೋಹಿತ್ಯದ ವಿಧಿ ವಿಧಾನಗಳೊಂದಿಗೆ ನೆರವೇರಲಿವೆ. ಮಧ್ಯಾಹ್ನ 1.30ರಿಂದ ಅಂತ್ಯಕ್ರಿಯೆಯ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ.

ಅಂಭಾವಿಲಾಸ ಅರಮನೆಯ ಕಲ್ಯಾಣ ಮಂಟಪದಲ್ಲಿ ಶ್ರೀಕಂಠದತ್ತ ಒಡೆಯರ್ ಮೃತದೇಹವನ್ನು ಇಡಲಾಗಿದ್ದು, ಬುಧವಾರ ಮುಂಜಾನೆ 3 ಗಂಟೆಯಿಂದಲೇ ಗಣ್ಯರು ಮತ್ತು ಸಾರ್ವಜನಕರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮಧುವನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು, ಒಡೆಯರ್ ಅಕ್ಕನ ಮಗನಾದ ಕಾಂತರಾಜೇ ಅರಸ್ ಚಿತೆಗೆ ಅಗ್ನಿ ಸ್ಪರ್ಶ ಮಾಡಲಿದ್ದಾರೆ.(ಒಡೆಯರ್ ಅಂತಿಮ ದರ್ಶನಕ್ಕೆ ಜನಸಾಗರ)

Madhuvana

ಶ್ರೀ ವೈಷ್ಣವ ಸಂಪ್ರದಾಯದಂತೆ ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ರಾಜಮನೆತನಕ್ಕೆ ಸೇರಿದ ಮಧುವನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಸುಮಾರು 10 ಎಕರೆ ಪ್ರದೇಶದಲ್ಲಿರುವ ಮಧುವನವನ್ನು ಖಾಸಾ ವೃಂದಾವನ ಎಂದು ಕರೆಯಲಾಗುತ್ತದೆ. ಹಿಂದೆ ಈ ಜಾಗದಲ್ಲಿ ಅರಸರಿಗೆ ಬೇಕಾದ ಹಣ್ಣು ಹಂಪಲುಗಳನ್ನು ಬೆಳೆಯಲಾಗುತ್ತಿತ್ತು ಎಂಬ ನಂಬಿಕೆಯೂ ಇದೆ. (ಶ್ರೀಕಂಠದತ್ತ ಒಡೆಯರ್ ವಿಧಿವಶ)

ಮೈಸೂರು ಸಂಸ್ಥಾನದ ಅರಸರು ಅಸ್ತಂಗತವಾದಾಗ ಜಾರಿದಾಗ ಈ ಸ್ಥಳದಲ್ಲಿ ಅಂತ್ಯ ಸಂಸ್ಕಾರ ನಡೆಸುತ್ತಾ ಬರಲಾಗಿದ್ದು, 25 ಅರಸರು ಮತ್ತು ಅವರ ಪತ್ನಿಯರ ಅಂತ್ಯ ಕ್ರಿಯೆಯನ್ನ ಇದೇ ಸ್ಥಳದಲ್ಲಿ ನಡೆಸಲಾಗಿದೆ. ಮಧವನದ ಪಕ್ಕದಲ್ಲಿ ವೀರಭದ್ರೇಶ್ವರ, ಶಿವ, ಕಾಶಿ ವಿಶ್ವನಾಥ್ ದೇವಾಲಯಗಳಿದ್ದು, ಪ್ರತಿನಿತ್ಯ ಇಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. (ಒಡೆಯರ್ ಅವರಿಗೆ ಚಿತ್ರ ನಮನ)

English summary
Srikantadatta Narasimharaja Wadiyar cremation ceremony will be held at Madhuvana, the graveyard of the Mysore Royal Family, off National Highway 212 (Mysore-Nanjangud road) in Mysore on Wednesday, December 11 evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X