ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಕೊನೆಗೂ ಮೈಸೂರಿನಲ್ಲಿ ನಟ ಡಾ. ವಿಷ್ಣುವರ್ಧನ್‌ ಅವರ ಸ್ಮಾರಕರವನ್ನು ಲೋಕರ್ಪಣೆ ಮಾಡಿದ್ದು, ಅಭಿಮಾನಿಗಳಲ್ಲಿ ಸಂತಸವನ್ನು ತಂದಿದೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ, 29: 13 ವರ್ಷದ ಹೋರಾಟದ ಫಲವಾಗಿ ಹುಟ್ಟೂರು ಮೈಸೂರಿನಲ್ಲೇ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಿದ್ದು, ಈ ಸ್ಮಾರಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾನುವಾರ (ಜನವರಿ 29) ಲೋಕಾರ್ಪಣೆಗೊಳಿಸಿದರು.

ಮೈಸೂರಿನ ಉದ್ದೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿ 5 ಹೆಕ್ಟೇರ್‌ ಜಾಗದಲ್ಲಿ 11 ಕೋಟಿ ರೂಪಾಯಿ ವೆಚ್ಚದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಇಂದು ಸ್ಮಾರಕವನ್ನು ಉದ್ಘಾಟನೆ ಮಾಡಲಾಗಿದ್ದು, ಸಮಾರಂಭದಲ್ಲಿ ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಎಲ್.ನಾಗೇಂದ್ರ ಭಾಗವಹಿಸಿದ್ದರು.

ಜನಪ್ರಿಯ ಪ್ರವಾಸಿ ತಾಣವಾಗಬೇಕು

ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮೇರು ನಟ ಡಾ.ವಿಷ್ಣುವರ್ಧನ್ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ, ನಾನಾ ಭಾಷೆಗಳಲ್ಲಿ ನಟನೆ ಮಾಡಿರುವ ಬಹುಭಾಷಾ ನಟರಾಗಿದ್ದಾರೆ. ವಿಷ್ಣುವರ್ಧನ್‌ ಅವರ ಸ್ಮಾರಕ ಜನಪ್ರಿಯ ಪ್ರವಾಸಿ ತಾಣವಾಗಬೇಕು ಎಂದು ಆಶಿಸಿದರು. ವಿಷ್ಣುವರ್ಧನ್ ಅವರನ್ನು ಜನ ಸಾಹಸ ಸಿಂಹ ಎಂದು ಕರೆಯುತ್ತಾರೆ. ಅವರ ಮರಣದ ನಂತರ ಸ್ಮಾರಕ ನಿರ್ಮಾಣಕ್ಕೆ ಇಲ್ಲಿ ಜಾಗ ನೀಡಲಾಯಿತು. 11 ಕೋಟಿ ರೂಪಾಯಿ ವೆಚ್ಚದಲ್ಲಿ ವಿಷ್ಣು ಅವರ ಸ್ಮಾರಕ ನಿರ್ಮಾಣವಾಗಿದೆ‌. ವಿಷ್ಣುವರ್ಧನ್ ಅವರ ಕುಟುಂಬ ಬಯಸಿದಂತೆ ಎಲ್ಲವೂ ಆಗಿದೆ.
ಎಲ್ಲರೂ ಸೇರಿ ಸಂತೋಷದಿಂದ ಸ್ಮಾರಕ ಲೋಕಾರ್ಪಣೆ ಮಾಡಿದ್ದೇವೆ ಎಂದು ತಿಳಿಸಿದರು.

Vishnuvardhan Memorial inaugurated by Basavaraj bommai in Mysuru

2020 ಸೆಪ್ಟೆಂಬರ್‌ 15ರಂದು ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಮಾರಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಇದೀಗ ಕಾಮಗಾರಿ‌ ಮುಗಿದು ಸ್ಮಾರಕವನ್ನು ಲೋಕಾರ್ಪಣೆ ಮಾಡಲಾಗಿದೆ. ವಿಷ್ಣುವರ್ಧನ್ ತುಂಬಾ ಪ್ರೀತಿಸುತ್ತಿದ್ದ ಮೈಸೂರಿನಲ್ಲೇ ಸ್ಮಾರಕ ತಲೆ ಎತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ವಿಷ್ಣುವರ್ಧನ್ ವಿದ್ಯಾಭ್ಯಾಸದ ವಿವರ

ಸಾಹಸಸಿಂಹ ಡಾ.ವಿಷ್ಣುವರ್ಧನ್ ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣವನ್ನು ಮೈಸೂರಿನಲ್ಲೇ ಮುಗಿಸಿದ್ದರು. ಇಲ್ಲಿನ ಚಾಮುಂಡಿಪುರಂನಲ್ಲೇ ವಾಸವಿದ್ದರು. ತಮ್ಮ ಚಿತ್ರದ ಶೂಟಿಂಗ್ ಅನ್ನು ಮೈಸೂರಿನಲ್ಲಿ ಇಟ್ಟುಕೊಂಡರೆ ಸಂಭ್ರಮಿಸುತ್ತಿದ್ದರು. ಹಾಗೆಯೇ ಚಾಮುಂಡಿಬೆಟ್ಟ ಅಂದರೆ ವಿಷ್ಣುವರ್ಧನ್ ಅವರಿಗೆ ನೆಚ್ಚಿನ ತಾಣವಾಗಿತ್ತು. ದೈಹಿಕ ಕಸರತ್ತಿಗೆ ವಿಷ್ಣುವರ್ಧನ್ ತಂದೆ ಚಾಮುಂಡಿಬೆಟ್ಟವನ್ನು ಹತ್ತಿ ಇಳಿಯುತ್ತಿದ್ದರು. ಇಂತಹ ವಿಷ್ಣುವರ್ಧನ್ ನೆಚ್ಚಿನ ಊರಿನಲ್ಲೇ ಸ್ಮಾರಕ ನಿರ್ಮಾಣ ಆಗಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ವಿಷ್ಣು ನೆನಪುಗಳ ಸಂಗ್ರಹ

ಇದೊಂದು ಸ್ಮಾರಕವಾಗಿ ಉಳಿಯದೇ ಕಲೆ ಹಾಗೂ ಕನ್ನಡಿಗರ ಅಸ್ಮಿತೆಯಾಗಬೇಕೆಂಬ ಉದ್ದೇಶದಿಂದ ವಸ್ತುಸಂಗ್ರಹಾಲಯ, ಅಭಿನಯ ತರಬೇತಿ ಶಾಲೆ, ನಾಟಕೋತ್ಸವ, ಚಿತ್ರೋತ್ಸವಗಳನ್ನು ನಡೆಸುವಂತಹ ವೇದಿಕೆಗಳು ಇರಲಿವೆ. ವಿಷ್ಣುವರ್ಧನ್ ಅವರ 600ಕ್ಕೂ ಹೆಚ್ಚು ಅಪರೂಪದ ಫೋಟೋಗಳು, ಅವರು ಬಳಸುತ್ತಿದ್ದ ವಸ್ತುಗಳು, ವಿಭೂತಿ, ಬಟ್ಟೆ, ಬಂದ ಪ್ರಶಸ್ತಿಗಳನ್ನು ಮ್ಯೂಸಿಯಂನಲ್ಲಿ ಕಾಣಬಹುದಾಗಿದೆ. ಇಲ್ಲಿ 200 ಮಂದಿ ಕುಳಿತುಕೊಳ್ಳುವ ಸಭಾಂಗಣ ಇದ್ದು, ಚಿತ್ರೋತ್ಸವ ಹಾಗೂ ನಾಟಕೋತ್ಸವವನ್ನೂ ನಡೆಸಬಹುದಾಗಿದೆ. ಹಾಗೆಯೇ ಕೊಠಡಿಗಳು ಕೂಡ ಇದ್ದು, ನಾಟಕ, ಸಿನಿಮಾ ಶಿಬಿರಗಳನ್ನು ನಡೆಸಬಹುದು.

Vishnuvardhan Memorial inaugurated by Basavaraj bommai in Mysuru

ವಿಷ್ಣುವರ್ಧನ್ ಪ್ರತಿಮೆಯ ಎತ್ತರ ಎಷ್ಟು?

ಡಾ. ವಿಷ್ಣುವರ್ಧನ್ ಅವರ ನೆನಪು ಚಿರಸ್ಥಾಯಿಯಾಗಿ ಉಳಿಯಬೇಕೆಂಬ ಉದ್ದೇಶದಿಂದ 7 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಮೈಸೂರಿನ ಹೆಸರಾಂತ ಶಿಲ್ಪಕಲಾವಿದ ಅರುಣ್ ಯೋಗಿರಾಜ್ ಪ್ರತಿಮೆ ನಿರ್ಮಾಣ‌ ಮಾಡಿದ್ದಾರೆ.

English summary
Vishnuvardhan Memorial inaugurated by Chief minister Basavaraj bommai in Mysuru, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X