ಯುವ ದಸರಾದಲ್ಲಿ ಕನ್ನಡ ಹಾಡು, ಗಾಯಕ ನಕಾಶ್ ಸಂಗೀತ
ಮೈಸೂರು, ಸೆಪ್ಟೆಂಬರ್ 24: ಅನಿಸುತಿದೆ ಯಾಕೋ ಇಂದು, ನೀನೇನೇ ನನ್ನವಳೆಂದು... ಈ ಸೂಪರ್ ಹಿಟ್ ಹಾಡು ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿರುವುದರಿಂದ ಅದನ್ನು ಕೇಳುತ್ತಿದ್ದಂತೆ ಪ್ರೇಕ್ಷಕರು ಓಹೋ ಎಂಬ ಉದ್ಗಾರ ಕೇಳಿಬಂತು.
ಯುವ ದಸರಾ ಎರಡನೇ ದಿನದ ಸಮಾರಂಭದಲ್ಲಿ ಮೂಡಬಿದರೆಯವರಾದ ಗಾಯಕ ಹಾಗೂ ಸಂಗೀತಗಾರ ನಕಾಶ್ ಅಜೀಜ್ ತಂಡದವರು ಕಾರ್ಯಕ್ರಮ ನಡೆಸಿಕೊಟ್ಟರು. ಅವರು ವೇದಿಕೆಗೆ ಬಂದು ಮೊದಲು ಹಳೆಯ ಹಿಂದಿ ಜನಪ್ರಿಯ ಗೀತೆ ತುಂ ಜೋ ಮಿಲ್ ಗಯೇ ಹೋ...' ಹಾಡುವ ಮೂಲಕ ಪ್ರೇಕ್ಷಕರ ಬಗ್ಗೆ ತಮ್ಮ ಪ್ರೀತಿಯನ್ನು ತೋರಿಸಿಕೊಂಡರು. ಆ ನಂತರ ದಿಲ್ ಸೇ ರೇ ದಿಲ್ ಸೆ ರೇ...', ಪಾನಾ ಹೀ ಹೇ ನಾ ಖೋನಾ ಹೀ ಹೇ...' ಹಾಡಿದರು.
In Pics : ಶೋಭನಾ ನಾಟ್ಯಕ್ಕೆ ಮನಸೋತ ಮೈಸೂರಿಗರು

ಗಾಯಕ ಸೋನು ನಿಗಮ್ ರ ಅಭಿಮಾನಿ ಎಂದು ಹೇಳಿಕೊಂಡ ನಕಾಶ್ ಅನಿಸುತಿದೆ ಯಾಕೋ ಇಂದು...' ಹಾಡುವ ಮೂಲಕ ಮುಂದೆ ಕನ್ನಡ ಹಾಡು ಹಾಡುತ್ತೇನೆ ಎಂದು ಖಾತ್ರಿ ಪಡಿಸಿದರು. ಇತ್ತೀಚೆಗೆ ಅವರು ಫ್ಯಾನ್, ಟ್ಯೂಬ್ ಲೈಟ್ ಹಿಂದಿ ಚಿತ್ರಗಳಿಗೆ ಹಾಡಿದ ಗೀತೆಗಳನ್ನೂ ಪ್ರಸ್ತುತಪಡಿಸಿದರು. ಆದರೂ ಇದ್ದ ಕೆಲವೇ ಪ್ರೇಕ್ಷಕರ ಸಂಭ್ರಮದ ಕೂಗಿನ ನಡುವೆ ಅದು ಯಾರಿಗೂ ಕೇಳಲೇ ಇಲ್ಲ.

ಆರಂಭದಲ್ಲಿ ಪ್ರೇಕ್ಷಕರ ಕೊರತೆ ಇದ್ದಾಗಲೂ ಕಾಲೇಜು ವಿಭಾಗದ ಕಾರ್ಯಕ್ರಮ ಮುಂದುವರಿದಿತ್ತು. ಪಿರಿಯಾಪಟ್ಟಣ, ಹುಣಸೂರು, ತಿ.ನರಸೀಪುರ ಹಾಗೂ ಮೈಸೂರಿನ ಕಾಲೇಜು ತಂಡಗಳ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. ಆರ್ಕೆಸ್ಟ್ರಾ ವಿಭಾಗದಲ್ಲಿ ಶ್ರೀನಿವಾಸ್ ಮತ್ತು ತಂಡದವರು ಹಮ್ಮಾ...ಹಮ್ಮಾ...', ಈ ತನುವು ನಿನ್ನದೇ ನಿನ್ನಾಣೆ...' ಹಾಡುಗಳನ್ನು ಹಾಡಿ ರಂಜಿಸಿದರೂ ಯುವಕರಲ್ಲಿ ಸಂಭ್ರಮ ಕಾಣಲಿಲ್ಲ.












Click it and Unblock the Notifications