ಚಾಮರಾಜನಗರ, ವರುಣಾ ಎರಡಲ್ಲೂ ವಿ ಸೋಮಣ್ಣಗೆ ಹಿನ್ನಡೆ
ಮೈಸೂರು, ಮೇ 13: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿಯಿಂದ ಎರಡು ಕಡೆ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ದ ವಿ ಸೋಮಣ್ಣಗೆ ಹಿನ್ನೆಡೆಯಾಗುತ್ತಿದೆ.
ವಿ ಸೋಮಣ್ಣ ಅವರಿಗೆ ಚಾಮರಾಜ ನಗರ ಹಾಗೂ ವರುಣಾ ಎರಡೂ ಕಡೆ ಹಿನ್ನಡೆ ಕಾಣುತ್ತಿದೆ. ವರುಣಾದಲ್ಲಿ ಸಿದ್ದರಾಮಯ್ಯ ಅವರು ಮುನ್ನಡೆ ಸಾಧಿಸಿದರೆ ಚಾಮರಾಜನಗರದಲ್ಲಿ 25,311 ಮತಗಳಿಂದ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕರಾಗಿರುವ ವಿ ಸೋಮಣ್ಣ ಅವರು ಲಿಂಗಾಯತ ಮತಗಳನ್ನು ನಂಬಿಕೊಂಡು ವರುಣಾದಲ್ಲಿ ಸಿದ್ದರಾಮಯ್ಯ ಅವರ ಎದುರು ಮುಂದೆ ನಿಂತಿದ್ದರು. ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಸೋಮಣ್ಣ ಅವರು ಎರಡು ಕಡೆ ಸ್ಫರ್ಧೆ ಮಾಡಿದ್ದರು, ವರುಣಾದಲ್ಲಿ ಸಿದ್ದರಾಮಯ್ಯ ಅವರ ಪರ ಪ್ರಚಾರಕ್ಕೆ ಹೋಗಿದ್ದ ಸೋಮಣ್ಣಗೆ ಕೆಲವೆಡೆ ಪ್ರತಿರೋಧದ ಬಿಸಿ ತಟ್ಟಿದ್ದರೆ, ಚಾಮರಾಜನಗರದಲ್ಲಿ ಬಿಜೆಪಿಯ ಕಾರ್ಯಕರ್ತರೇ ಸೋಮಣ್ಣ ಅವರು ವಿರುದ್ಧ ತಿರುಗಿ ಬಿದ್ದಿದ್ದರು.












Click it and Unblock the Notifications