ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಮೀಯ ಮಸೀದಿ ಕುರಿತು ಅನಗತ್ಯ ವಿವಾದ: ಶಾಸಕ ತನ್ವೀರ್ ಸೇಠ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 5: ಶ್ರೀರಂಗಪಟ್ಟಣ ಜಾಮೀಯ ಮಸೀದಿ ವಿಚಾರವಾಗಿ ವಿನಾಕಾರಣ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಶಾಸಕ ತನ್ವೀರ್ ಸೇಠ್ ಬೇಸರ ವ್ಯಕ್ತಪಡಿಸಿದರು.

ಜಾಮೀಯ ಮಸೀದಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, " ಮಸೀದಿಯಲ್ಲಿ ಎಲ್ಲಿ ಏನಿತ್ತು? ಎಂಬುದು ನಮ್ಮ ಕೈಯಲ್ಲಿ ಇಲ್ಲ. ಇದು ಪುರಾತತ್ವ ಇಲಾಖೆ ಅಡಿಯಲ್ಲಿದೆ. ಅದನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಅದರ ನೈಜತೆ ಮತ್ತು ಸತ್ಯಾಂಶವನ್ನು ಆರ್ಕ್ಯಾಲಜಿ ಅಫ್ ಇಂಡಿಯಾ ತಿಳಿಸಬೇಕಿದೆ. ಈ ವಿಚಾರವಾಗಿ ಸರಕಾರ ಮಧ್ಯ ಪ್ರವೇಶಿಸಬೇಕು " ಎಂದು ಮನವಿ ಮಾಡಿದರು.

ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಮಂದಿರವಾಗಿ ಪರಿವರ್ತಿಸಬೇಕು ಎಂದ ಗೋ ಮಧುಸೂದನ್ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಮಂದಿರವಾಗಿ ಪರಿವರ್ತಿಸಬೇಕು ಎಂದ ಗೋ ಮಧುಸೂದನ್

"ಜಾಮೀಯ ಮಸೀದಿ ವಿಚಾರವಾಗಿ ಮಂಡ್ಯ ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದೇನೆ. ವಕ್ಫ್‌‌ ಬೋರ್ಡ್ ಮುಖ್ಯಸ್ಥರ ಜತೆಯೂ ಮಾತನಾಡಿದ್ದೇನೆ. ದಿನಾಂಕ ನಿಗದಿ ಮಾಡಿ ಸಭೆ ಮಾಡುವಂತೆ ತಿಳಿಸಿದ್ದೇನೆ. ಆರ್ಕ್ಯಾಲಜಿಕಲ್ ಸರ್ವೆ ಅಫ್‌ ಇಂಡಿಯಾ ನೀಡುವ ಮಾತಿನ ಮೇಲೆ ಅದನ್ನು ನಿರ್ವಹಣೆ ಮಾಡುತ್ತೇವೆ" ಎಂದರು.

Unnecessary controversy over Srirangapatna Jamia Masjid says MLA Tanveer sait

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ಒಂದೆಡೆ ಸಮಿತಿ ವಿಸರ್ಜಿಸಿದ್ದೇವೆ ಅಂತಾರೆ. ಮತ್ತೊಂದೆಡೆ ಪಠ್ಯ ಪರಿಷ್ಕರಣೆ ಮುಗಿದಿದೆ ಎಂದು ನಮ್ಮ ಉದ್ದೇಶ ಈಡೇರಿದೆ ಅಂತಾರೆ. ಇದರಿಂದ ಸರ್ಕಾರದ ಉದ್ದೇಶ ಏನಂತ ಅರ್ಥವಾಗುತ್ತದೆ. ಇದು ರಾಜಕಾರಣಿಗಳು, ಸ್ವಯಂ ಶಿಕ್ಷಣ ತಜ್ಞರು ಮಾಡುವ ತೀರ್ಮಾನವಲ್ಲ. ಪಠ್ಯ ಪರಿಷ್ಕರಣೆಯಲ್ಲಿ ರಾಜಕಾರಣ ಬೇಡ. ಮಕ್ಕಳ ವಯೋಮಿತಿಗೆ ತಕ್ಕಂತೆ ಜ್ಞಾನೋದಯವಾಗುವ ಪಠ್ಯ ಕೊಡಬೇಕು. ಪಠ್ಯ ಪರಿಷ್ಕರಣೆಯಲ್ಲಿ ಸರ್ಕಾರದ ಕೈವಾಡ ಇರಬಾರದು. ಬಸವಣ್ಣ, ಅಂಬೇಡ್ಕರ್‌, ನಾರಾಯಣಗುರು ಇವರಿಗೆಲ್ಲಾ ಅವಮಾನ ಮಾಡುವುದು ಎಷ್ಟು ಸರಿ. ಈ ವರ್ಗಗಳ ಭಾವನೆಗಳನ್ನ ಕೆಣಕಿ ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತೀರಾ? ಸರ್ಕಾರವನ್ನು ನಡೆಸೋದಾದ್ರೆ ನಡೆಸಿ, ಇಲ್ಲವೇ ವಿಸರ್ಜಿಸಿ ಎಂದು ಅಸಮಧಾನ ಹೊರ ಹಾಕಿದರು.

ಜ್ಞಾನವಾಪಿ: ಆರ್‌ಎಸ್‌ಎಸ್ ಮುಖ್ಯಸ್ಥರನ್ನು ತರಾಟೆ ತೆಗೆದುಕೊಂಡ ಓವೈಸಿಜ್ಞಾನವಾಪಿ: ಆರ್‌ಎಸ್‌ಎಸ್ ಮುಖ್ಯಸ್ಥರನ್ನು ತರಾಟೆ ತೆಗೆದುಕೊಂಡ ಓವೈಸಿ

ಯೋಗ ದಿನಾಚರಣೆಗೆ ಪ್ರಧಾನಿ ಮೋದಿ ಆಗಮನ ವಿಚಾರದ ಬಗ್ಗೆ ಮಾತನಾಡಿದ ಅವರು, ಯೋಗ ಯಾರ, ಯಾವ ಪಕ್ಷಕ್ಕೆ ಸೇರಿಲ್ಲ. ಮೈಸೂರು ಕೂಡ ಯಾರ ಸ್ವತ್ತಲ್ಲ. ಇತಿಹಾಸದ ಪುಟದಲ್ಲಿ ಹೆಸರು ಸೇರಬೇಕಾದರೆ, ನಿಮ್ಮ ಕೊಡುಗೆ ಏನು ಅಂತ ಹೇಳಬೇಕು. ಆದ್ರೆ ಏನು ಅಭಿವೃದ್ದಿ ಮಾಡದೆ ಹೇಗೆ ಇತಿಹಾಸದ ಪುಟ ಸೇರ್ತಾರೆ. ನನಗೆ ಆರೋಗ್ಯದ ಕಾರಣದಿಂದ ಬಗ್ಗೋಕೆ ಆಗಲ್ಲ ಅಂತ ನನ್ನ ಯೋಗ ಸಮಿತಿಗೆ ಸೇರಿಸಿಕೊಂಡಿಲ್ಲ ಎಂದರು.

Unnecessary controversy over Srirangapatna Jamia Masjid says MLA Tanveer sait

Recommended Video

Joe Root ಹೀಗೇ ಆಡ್ತಿದ್ರೆ ಸಚಿನ್ ದಾಖಲೆ‌ ಧೂಳೀಪಟವಾಗೋದು ಗ್ಯಾರೆಂಟಿ | #Cricket | OneIndia Kannada

ಜೆಡಿಎಸ್‌ನಿಂದ ಎನ್‌ಆರ್ ಕ್ಷೇತ್ರ ಟಾರ್ಗೆಟ್ ಎಂಬ ಚರ್ಚೆ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಚುನಾವಣೆ ಅಂದ್ರೆ ಪೈಪೋಟಿ, ಟಾರ್ಗೆಟ್. ಪ್ರತಿ ಬಾರಿಯೂ ಎನ್‌ಆರ್ ಕ್ಷೇತ್ರ ಟಾರ್ಗೆಟ್ ಮಾಡಲಾಗುತ್ತದೆ. ರಾಜಕಾರಣ ನಿಂತ ನೀರಲ್ಲ, ಇಲ್ಲಿರೋರು ಅಲ್ಲಿರ್ತಾರೆ, ಅಲ್ಲಿದ್ದೋರು ಇಲ್ಲಿಗೆ ಬರ್ತಾರೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯಲ್ಲ. ಕಾಂಗ್ರೆಸ್ ನನಗೆ ಕೊಟ್ಟಿರುವ ಕೊಡುಗೆಗಾಗಿ ಋಣ ತೀರಿಸಬೇಕಿದೆ. ರಾಜಕಾರಣದಲ್ಲಿ ಇದ್ರೆ ಕಾಂಗ್ರೆಸ್‌ನಲ್ಲಿ ಮಾತ್ರ. ನಮ್ಮ ತಂದೆ ನನಗೆ ಹೇಳಿದ್ರು ಕಾಂಗ್ರೆಸ್ಸಿಗನಾಗಿ ಸಾಯಬೇಕು ಅಂತ ಹೇಳಿದರು.

(ಒನ್ಇಂಡಿಯಾ ಸುದ್ದಿ)

English summary
Congress leader Tanveer Sait says controversy regarding Srirangapatna Jamia Masjid evoking unnecessary confusion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X