• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಬೆಂಗಳೂರು ವಿದ್ಯಾರ್ಥಿಗಳ ಸಾವು

By ಮೈಸೂರು ಪ್ರತಿನಿಧಿ
|

ಮೈಸೂರು, ಡಿಸೆಂಬರ್ 10: ತಿ.ನರಸೀಪುರ ತಲಕಾಡು ಬಳಿಯ ನಿಸರ್ಗಧಾಮಕ್ಕೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಪೈಕಿ ಇಬ್ಬರು ಕಾವೇರಿ ನದಿ ನೀರಿಗಿಳಿದ ವೇಳೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ನೀರಿಗೆ ಹಾರಿದ ನಾಲ್ವರು ನಿಲ್ಲಿಸಿ ಬಿಟ್ಟರಲ್ಲ ಉಸಿರಾಟ!

ಮೃತರನ್ನು ಬೆಂಗಳೂರಿನ ಹೆಬ್ಬಾಳದ ಪರಿಕ್ರಮ ಹ್ಯುಮಾನಿಟಿ ಫೌಂಡೇಶನ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಅಲ್ಫ್ರೆಡ್ ವಿಜಯ್ (16) ಹಾಗೂ ಹೇಮಂತ್ (17) ಎಂದು ಗುರುತಿಸಲಾಗಿದೆ.

45 ವಿದ್ಯಾರ್ಥಿಗಳು, ನಾಲ್ವರು ಉಪನ್ಯಾಸಕರು ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದರು. ಐವರು ವಿದ್ಯಾರ್ಥಿಗಳು ನದಿಯಲ್ಲಿ ಮುಂದೆ ಹೋಗಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಅಲ್ಫ್ರೆಡ್, ಹೇಮಂತ್ ಮುಳುಗಿದರು. ಇವರ ರಕ್ಷಣೆಗೆ ಧಾವಿಸಿದ ಮೂವರು ನೀರಿನ ಸೆಳೆತಕ್ಕೆ ಸಿಲುಕಿದರು. ಅಲ್ಲಿದ್ದ ಅಂಬಿಗರು ಮೂವರನ್ನು ರಕ್ಷಿಸಿದ್ದಾರೆ.

ಇನ್ನಿಬ್ಬರ ನೆರವಿಗೆ ಮುಂದಾಗುವಷ್ಟರಲ್ಲಿ ಅವರು ಅದಾಗಲೇ ಮುಳುಗಿದ್ದರು ಎಂದು ತಿಳಿದುಬಂದಿದೆ.

English summary
Two bengaluru students, who were on a trip to the Nisargadhama near Talakadu in T Narasipura, were drowned in the river Cauvery in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X