ಮೈಸೂರು ಜಿಲ್ಲೆಗೆ ಎರಡು ಅಬಕಾರಿ ಜಿಲ್ಲಾಧಿಕಾರಿಗಳ ಹುದ್ದೆ ಸೃಷ್ಟಿ

ಮೈಸೂರು, ಮೇ 09 ; ರಾಜ್ಯ ಸರ್ಕಾರ ಅಬಕಾರಿ ಇಲಾಖೆಯನ್ನು ಪುನರ್ವಿಂಗಡಣೆ ಮಾಡಿ ಆದೇಶ ಹೊರಡಿಸಿದೆ. ಅದರಂತೆ ಬೆಂಗಳೂರು ನಗರ ಜಿಲ್ಲೆಯ ವಿಭಾಗೀಯ ಕಚೇರಿ, ಮೈಸೂರು ಹಾಗೂ ಬೆಳಗಾವಿ ಜಿಲ್ಲಾ ಕಚೇರಿಗಳನ್ನು ಮರುವಿನ್ಯಾಸಗೊಳಿಸಿ ಉನ್ನತೀಕರಿಸಲಾಗಿದೆ.

ಈ ಕಾರಣಕ್ಕಾಗಿ ಇಲ್ಲಿ ಹುದ್ದೆಗಳನ್ನೂ ಹೆಚ್ಚು ಮಾಡಲಾಗಿದೆ. ಮೈಸೂರು ಜಿಲ್ಲೆಗೆ ಕೇರಳ ರಾಜ್ಯದ ಗಡಿಭಾಗಗಳು ಹೊಂದಿಕೊಂಡಿವೆ. ಮೈಸೂರು ಜಿಲ್ಲೆಯಲ್ಲಿ ಜಾರಿ ಮತ್ತು ತನಿಖೆ ಕಾರ್ಯವನ್ನು ಸಮಪರ್ಕವಾಗಿ ನಿರ್ವಹಿಸಲು ಮೈಸೂರು ತಾಲ್ಲೂಕನ್ನು ಮೈಸೂರು ನಗರ ಜಿಲ್ಲೆ ಎಂದು ವಿಂಗಡಿಸಲಾಗಿದೆ. ಮೈಸೂರು ತಾಲ್ಲೂಕನ್ನು ಹೊರತುಪಡಿಸಿ, ಉಳಿದ ಮೂರು ತಾಲ್ಲೂಕುಗಳನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಎಂದು ಮರು ನವೀಕರಿಸಲಾಗಿದೆ.

Two Excise Officials Designation Created For Mysuru District

ಕರ್ನಾಟಕದಲ್ಲಿ ಬಾರ್, ಕ್ಲಬ್‌ನಲ್ಲಿ ಇನ್ಮುಂದೆ ಸಿಗುತ್ತೆ ಎಣ್ಣೆ
ಈ ಹಿಂದೆ ಮೈಸೂರು ಜಿಲ್ಲೆಗೆ ಮಂಜೂರಾಗಿರುವ ಅಬಕಾರಿ ಉಪ ಆಯುಕ್ತರ ಹುದ್ದೆಯನ್ನು ಅಬಕಾರಿ ಉಪ ಆಯುಕ್ತರು, ಮೈಸೂರು ನಗರ ಜಿಲ್ಲೆ ಎಂದು ಪುನರ್‌ ಪದನಾಮಕರಣ ಮಾಡಲಾಗಿದೆ. ಹೊಸದಾಗಿ ಸೃಷ್ಟಿ ಮಾಡಲಾದ ಮೈಸೂರು ಗ್ರಾಮಾಂತರ ಜಿಲ್ಲೆಗೆ ಅಬಕಾರಿ ಉಪ ಆಯುಕ್ತರ ಕಚೇರಿಯನ್ನು ಸೃಷ್ಟಿಸಲಾಗಿದೆ. ಈ ಎರಡೂ ಕಚೇರಿಗಳನ್ನು ಮೈಸೂರನ್ನೇ ಕೇಂದ್ರ ಸ್ಥಾನವನ್ನಾಗಿಸಲು ಕೂಡ ಸರ್ಕಾರ ಆದೇಶ ಮಾಡಿದೆ.

ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ ಮೈಸೂರು ಉಪ ವಿಭಾಗ ಹಾಗೂ ಹುಣಸೂರು ಉಪ ವಿಭಾಗವೆಂದು ಎರಡು ಉಪ ವಿಭಾಗಗಳಿವೆ. ಹಾಲಿ ಇರುವ ಮೈಸೂರು ಉಪ ವಿಭಾಗವನ್ನು ಮೈಸೂರು ನಗರ ಜಿಲ್ಲೆಗೆ ನಿಗದಿ ಮಾಡಲಾಗಿದೆ. ಹೊಸದಾಗಿ ಸೃಷ್ಟಿಯಾಗಿರುವ ಗ್ರಾಮಾಂತರ ಜಿಲ್ಲೆ ವ್ಯಾಪ್ತಿಗೆ ಹುಣಸೂರು ಉಪವಿಭಾಗದ ಜೊತೆಗೆ ಹೊಸದಾಗಿ ನಂಜನಗೂಡು ಉಪ ವಿಭಾಗವನ್ನು ಸೃಷ್ಟಿ ಮಾಡಲಾಗಿದೆ. ಇನ್ನು ಮುಂದಕ್ಕೆ ಮೈಸೂರು ನಗರ ಹಾಗೂ ಗ್ರಾಮಾಂತರ ಎಂಬ ಎರಡು ಅಬಕಾರಿ ಜಿಲ್ಲಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+