ಕರ್ನಾಟಕದಲ್ಲಿ ಬಾರ್, ಕ್ಲಬ್‌ನಲ್ಲಿ ಇನ್ಮುಂದೆ ಸಿಗುತ್ತೆ ಎಣ್ಣೆ
ಬೆಂಗಳೂರು, ಮೇ 8: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಬಾರ್, ಕ್ಲಬ್ ಮತ್ತು ಲಾಡ್ಜ್ ಗಳಲ್ಲೂ ಮದ್ಯವನ್ನು ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
Recommended Video
ಶುಕ್ರವಾರ ವಿಕಾಸಸೌಧದಲ್ಲಿ ಅಬಕಾರಿ ಸಚಿವ ಎಚ್ ನಾಗೇಶ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.
ಬಾರ್ ಕ್ಲಬ್ ಮತ್ತು ಲಾಡ್ಜ್ ಗಳಲ್ಲಿ ಮದ್ಯದ ಪಾರ್ಸಲ್ ಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಿಎಂ ಯಡಿಯೂರಪ್ಪ ಅನುಮತಿ ನೀಡಿದ್ದಾರೆ. ಆದರೆ, ಎಂಆರ್ ಪಿ ಬೆಲೆಗೆ ಮಾತ್ರ ಮಾರಾಟ ಮಾಡಬೇಕು. ಸದ್ಯ ಸ್ಟಾಕ್ ಇರುವವರೆಗೆ ಮಾತ್ರ ಮಾರಾಟ ಮಾಡಲು ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಎಂಆರ್‌ಪಿ ಮೇಲೆ ಮಾರಾಟ ಮಾಡಿದರೆ ಲೈಸೆನ್ಸ್ ರದ್ದು ಮಾಡುವುದು ಖಚಿತ. ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಮಾತ್ರ ಅಂಗಡಿಗಳನ್ನು ತೆರೆಯಬೇಕಾಗುತ್ತದೆ ಎಂದು ನಾಗೇಶ್ ತಿಳಿಸಿದ್ದಾರೆ.

767 ಕೋಟಿ ರೂ. ಆದಾಯ ಬಂದಿದೆ
ಗಡಿಭಾಗದಲ್ಲಿ ಆಧಾರ್ ಪರೀಕ್ಷಿಸಿ ಮದ್ಯ ನೀಡಲು ಸೂಚನೆ ನೀಡಿದ್ದೆ. ಲಾಕ್ ಡೌನ್ ಬಳಿಕ ಮದ್ಯದ ಅಂಗಡಿ ಓಪನ್ ಆದ ಬಳಿಕ ಮೊದಲು ನೂಕುನುಗ್ಗಲು ಉಂಟಾಗಿತ್ತು. ಐದನೇ ದಿನಕ್ಕೆ 122.16 ಕೋಟಿ ತೆರಿಗೆ ಸಂಗ್ರಹ ಆಗಿದೆ. ಸರ್ಕಾರಕ್ಕೆ ಒಟ್ಟು 767 ಕೋಟಿ ರೂ. ಆದಾಯ ಬಂದಿದೆ. ಏಳು ದಿನಕ್ಕೆ ಸಾವಿರ ಕೋಟಿ ರುಪಾಯಿ ಗುರಿ ತಲುಪುವ ಸಾದ್ಯತೆ ಇದೆ ಎಂದರು.

ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇನೆ
ಒಂದೇ ಬಿಲ್ ನಲ್ಲಿ 55 ಸಾವಿರ ರೂ ಮೌಲ್ಯದ ಲಿಕ್ಕರ್ ಮಾರಾಟ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬೆಂಗಳೂರಿನ ಲಿಕ್ಕರ್ ಅಂಗಡಿ ಮೇಲೆ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.

2500 ಕೋಟಿ ರೂ. ಹೆಚ್ಚುವರಿ ಆದಾಯ
ಒಬ್ಬರಿಗೆ 2.3 ಲೀಟರ್ ಮದ್ಯ ಮಾರಲು ಮಾತ್ರ ಅವಕಾಶ ಇದೆ. ಹಾಗಾಗಿ ಅಂಗಡಿಗಳು ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು. ಈವರೆಗೆ 1200 ಕೇಸ್ ದಾಖಲು ಮಾಡಲಾಗಿದೆ. ನಮಗೆ 22,500 ಕೋಟಿ ರೂ. ಟಾರ್ಗೆಟ್ ಇತ್ತು. ಈ ಬಾರಿ ತೆರಿಗೆ ಹೆಚ್ಚಳದಿಂದ 2500 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ ಎಂದು ನಾಗೇಶ್ ತಿಳಿಸಿದರು.

16ಟ್ರೈನ್ ಗಳನ್ನ ನಾವು ಬುಕ್ ಮಾಡಿದ್ದೇವೆ
ವಲಸೆ ಕಾರ್ಮಿಕರಿಗೆ ನಾವು 8 ರಿಂದ 15ನೇ ತಾರೀಖು ನವರೆಗೂ ಟ್ರೈನ್ ಬುಕ್ ಮಾಡಿದ್ದೇವೆ ಎಂದು ಅಬಕಾರಿ ಸಚಿವ ಎಚ್ ನಾಗೇಶ್ ಹೇಳಿದ್ದಾರೆ. ಒಟ್ಟು 16ಟ್ರೈನ್ ಗಳನ್ನ ನಾವು ಬುಕ್ ಮಾಡಿದ್ದೇವೆ. ಇದರಲ್ಲಿ 11ರಾಜ್ಯಗಳಿಗೆ ಕಳಿಸಿಬೇಕು ಆದ್ರೆ ಅದರಲ್ಲಿ 5ರಾಜ್ಯಗಳು ಮಾತ್ತ ಪರ್ಮಿಷನ್ ಕೊಟ್ಟಿವೆ. ಮಿಕ್ಕ 6ರಾಜ್ಯಗಳು ಇನ್ನು ಪರ್ಮಿಷನ್ ಕೊಟ್ಟಿಲ್ಲ. ಹೀಗಾಗಿ ಬಲವಂತವಾಗಿ ಇಟ್ಕೊಂಡಿದ್ದಾರೆ ಅನ್ನೋ ಯಾವ್ದೇ ಅರೋಪಗಳು ಸತ್ಯಕ್ಕೆ ದೂರವಾದ ಮಾತು. ಪರ್ಮಿಷನ್ ಕೊಟ್ಟ ಮೇಲೆ ಅಯಾ ರಾಜ್ಯಗಳಿಗೆ ಕಳುಹಿಸಿಕೊಡ್ತಿವಿ ಎಂದಿದ್ದಾರೆ.












Click it and Unblock the Notifications