ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಪಡಿತರ ಅಕ್ಕಿಗೆ ಕನ್ನ; ಅಕ್ರಮ ಸಾಗಾಟ ಬಯಲು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 04: ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಕ್ಕಿಯನ್ನು ಅಕ್ರಮವಾಗಿ ಮಂಡ್ಯ ನಗರಕ್ಕೆ ಲಾರಿ ಮೂಲಕ ಸಾಗಿಸಲು ಯತ್ನಿಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳನ್ನು ಲಾರಿ ಸಮೇತ ವಶಕ್ಕೆ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.

Recommended Video

ಜನರ ಕಷ್ಟ ಕೇಳಲು ಮೆಜೆಸ್ಟಿಕ್ ನಲ್ಲಿ ಕೆಂಪು ಬಸ್ ಹತ್ತಿದ ಸಿದ್ದರಾಮಯ್ಯ, DK ಶಿವಕುಮಾರ್ | DK Shivakumar

ನಗರದ ಮಂಡಿ ಪೊಲೀಸ್ ಠಾಣೆಗೆ ಬಂದ ಖಚಿತ ಮಾಹಿತಿಯಂತೆ, ಲಾರಿಯಲ್ಲಿ ಮೈಸೂರಿನ ಲಷ್ಕರ್ ಮೊಹಲ್ಲಾ ನಿವಾಸಿ ಜಾಬೀರ್ ಎಂಬಾತ ಇತರರೊಂದಿಗೆ ಸೇರಿ ಪಡಿತರ ಚೀಟಿದಾರರಿಗೆ ವಿತರಣೆ ಮಾಡುವ 150 ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಯಥೇಚ್ಛ ಪ್ರಮಾಣದಲ್ಲಿ ದಾಸ್ತಾನು ಮಾಡಿಟ್ಟಿದ್ದ ಎಂಬುದೂ ತಿಳಿದುಬಂದಿದೆ.

ಅನ್ನಭಾಗ್ಯಕ್ಕೆ ಅನುದಾನ ಕಡಿತ; ಏಪ್ರಿಲ್‌ನಿಂದ 5 ಕೆ.ಜಿ. ಅಕ್ಕಿ ಮಾತ್ರಅನ್ನಭಾಗ್ಯಕ್ಕೆ ಅನುದಾನ ಕಡಿತ; ಏಪ್ರಿಲ್‌ನಿಂದ 5 ಕೆ.ಜಿ. ಅಕ್ಕಿ ಮಾತ್ರ

ಅಕ್ಕಿಮೂಟೆಗಳನ್ನು ದಾಸ್ತಾನು ಮಾಡಲು ಅನುಮತಿ ಪಡೆದಿರುವ ಏಜೆನ್ಸಿ ಅಥವಾ ಉಗ್ರಾಣದ ಸರ್ಕಾರಿ ನೌಕರರು ಅಥವಾ ಮಧ್ಯವರ್ತಿಗಳು ಕೂಡ ಈ ಅಕ್ರಮ ಸಾಗಾಟದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಸ್ವಂತ ಲಾಭಕ್ಕಾಗಿ ಅಕ್ಕಿ ಮೂಟೆಗಳನ್ನು ಲಾರಿಗೆ ತುಂಬಿಸಿಕೊಂಡು ಕೆ.ಎಸ್.ಆರ್.ರಸ್ತೆ ಮೂಲಕ ಅಕ್ರಮವಾಗಿ ಮಂಡ್ಯ ನಗರಕ್ಕೆ ಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದು, ಲಾರಿಯಲ್ಲಿನ ಒಟ್ಟು 15,060 ಕೆ.ಜಿ. ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

Police Arrested Two For Transporting Rice Illegally In Mysuru

ಸಾಗಣೆ ಮಾಡುತ್ತಿದ್ದ ಲಷ್ಕರ್ ಮೊಹಲ್ಲಾ ನಿವಾಸಿ ಜಾಬೀರ್ ಷರೀಫ್ ಮತ್ತು ಮೈಸೂರು ತಿಲಕ್ ನಗರ ನಿವಾಸಿ ರಾಜು ಬಿನ್ ಲೇಟ್ ಮಾದಪ್ಪ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

English summary
Police have arrested two and seized lorry in relation to illegal rice transport in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X