ಅಪರಾಧ ತಡೆಗೆ ಮೈಸೂರು ಪೊಲೀಸರ ವಿನೂತನ ಯೋಜನೆ

ಮೈಸೂರು, ಫೆಬ್ರವರಿ 7: ವಿನೂತನ ಪ್ರಯೋಗಗಳಿಗೆ ಹೆಸರಾಗಿರುವ ಮೈಸೂರು ಖಾಕಿ ಪಡೆಯ ಪ್ರತಿ ಕಾಯಕವೂ ಸ್ಮರಿಸುವಂತಹದ್ದು. ಇತ್ತೀಚೆಗೆ ಹೆಲ್ಮೆಟ್ ವಿಚಾರವಾಗಿ ಜಾಗೃತಿ ಮೂಡಿಸಿದ್ದನ್ನು ನೆನೆಯಬಹುದು. ಇದಕ್ಕೆ ಪೂರಕವೆಂಬಂತೆ ಮತ್ತೊಂದು ನೂತನ ಪ್ರಯತ್ನಕ್ಕೆ ಮೈಸೂರು ಪೊಲೀಸರು ಸಜ್ಜಾಗಿದ್ದಾರೆ.

ಸಾರ್ವಜನಿಕರಿಗೆ ಸಂಚಾರ ನಿಯಮ ಹಾಗೂ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು, ಪರಿಣಾಮಕಾರಿಯಾಗಿ ಸಂದೇಶಗಳು ಜನರ ಮುಟ್ಟುವಂತೆ ಮಾಡಲು ಮೈಸೂರು ನಗರ ಪೊಲೀಸರು ವಿನೂತನ ಪ್ರಯೋಗಕ್ಕೆ ಕೈಹಾಕಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆನೆ ಚಿತ್ರವುಳ್ಳ ಮ್ಯಾಸ್ಕಾಟ್ ಅನ್ನು ಬಳಸಲು ನಿರ್ಧರಿಸಿದ್ದಾರೆ.

ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರರಾವ್ ಅವರು ಆಸಕ್ತಿ ವಹಿಸಿ ಆನೆ ಚಿತ್ರವುಳ್ಳ ಮ್ಯಾಸ್ಕಾಟ್ ಅನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ.

ಏನಿದು ಮ್ಯಾಸ್ಕಾಟ್ ?

ಏನಿದು ಮ್ಯಾಸ್ಕಾಟ್ ?

ಈಗಾಗಲೇ ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣ ಹಾಗೂ ಕ್ಯಾರಿಕೇಚರ್ ಮೂಲಕ ರೂಪಿಸಿದ್ದ ಮೀಸೆ ತಿಮ್ಮಯ್ಯ ನಮಗೆಲ್ಲಾ ತಿಳಿದಿದೆ. ಅದರದ್ದೇ ತದ್ರೂಪಿ ಮ್ಯಾಸ್ಕಾಟ್.

ಪೊಲೀಸರು ಹಾಗೂ ಸಾರ್ವಜನಿಕರಿಗೆ ಅಪರಾಧ ಹಾಗೂ ಸಂಚಾರ ನಿಯಮಗಳ ಬಗ್ಗೆ ಹೇಳುವ ಸಂದೇಶವನ್ನು ಇನ್ನು ಮುಂದೆ ಆನೆ ಚಿತ್ರವುಳ್ಳ ಮ್ಯಾಸ್ಕಾಟ್ ಹೇಳುತ್ತದೆ. ಆ ಮೂಲಕ ಜನರ ಜಾಗೃತಿ ಸಂದೇಶಗಳು ಮನಮುಟ್ಟುವಂತೆ ಮಾಡುವುದಕ್ಕೆ ಪೊಲೀಸ್ ಇಲಾಖೆ ತಂತ್ರಗಾರಿಕೆ ಅನುಸರಿಸುತ್ತಿದೆ.

ಮೀಸೆ ತಿಮ್ಮಯ್ಯನಂತೆ ಕಾಯಕ

ಮೀಸೆ ತಿಮ್ಮಯ್ಯನಂತೆ ಕಾಯಕ

ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರು ನಗರ ಪೊಲೀಸರು ಮೀಸೆ ತಿಮ್ಮಯ್ಯ ಅವರ ಚಿತ್ರ ಬಳಸಿ ಮ್ಯಾಸ್ಕಾಟ್ ಸಿದ್ಧಪಡಿಸಿತ್ತು. ಆದರೆ ಕಳೆದ ವರ್ಷದಿಂದ ಈ ಮ್ಯಾಸ್ಕಾಟ್ ಬಳಕೆ ನಿಲ್ಲಿಸಲಾಗಿದೆ. ಇದೀಗ ಇದೇ ತೆರನಾದ ಯೋಜನೆಯನ್ನು ಮೈಸೂರಿನಲ್ಲಿ ಆನೆ ಚಿತ್ರ ಬಳಸಿ ಸಾರ್ವಜನಿಕರನ್ನು ಜಾಗೃತರನ್ನಾಗಿಸಲು ತಯಾರಿ ನಡೆಸಿದೆ.

ಈ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ್ ರಾವ್, ಈಗಾಗಲೇ ಆನೆ ಚಿತ್ರ ಹೊಂದಿರುವ ಮ್ಯಾಸ್ಕಾಟ್ ಅನ್ನು ಸಿದ್ಧಪಡಿಸಲಾಗಿದೆ. ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ನೀಡುವ ಸಂದೇಶಗಳು ಪರಿಣಾಮಕಾರಿಯಾಗಿ ಮನಮುಟ್ಟಲು ಈ ಮ್ಯಾಸ್ಕಾಟ್ ಸಹಕಾರಿಯಾಗಲಿದೆ ಎಂದರು.

ಆನೆ ಚಿತ್ರ ಬಳಕೆಗೆ ಹಿಂದಿದೆ ಕಾರಣ

ಆನೆ ಚಿತ್ರ ಬಳಕೆಗೆ ಹಿಂದಿದೆ ಕಾರಣ

ರಾಜರ ಆಳ್ವಿಕೆ ಕಾಲದಿಂದಲೂ ಮೈಸೂರಿಗೂ ಆನೆಗೂ ಅವಿನಾಭಾವ ಸಂಬಂಧವಿದೆ. ದಸರಾ ಮೆರವಣಿಗೆಯಲ್ಲಿ ಆನೆಗಳು ಪಾಲ್ಗೊಳ್ಳುತ್ತದೆ. ಅರಸರು ಈ ಹಿಂದೆ ಆನೆಗಳನ್ನು ಸಹ ಸಾಕಿದ್ದರು. ಅಲ್ಲದೇ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಆನೆಯನ್ನು ಇಷ್ಟ ಪಡುತ್ತಾರೆ. ಈ ಹಿನ್ನೆಲೆಯಲ್ಲಿ ಮ್ಯಾಸ್ಕಾಟ್ ಆನೆಯ ಚಿತ್ರವನ್ನು ಬಳಸಲಾಗಿದೆ.ವಾಹನ ಸವಾರರಿಗೆ ಸಂಚಾರ ನಿಯಮಗಳನ್ನು ಮ್ಯಾಸ್ಕಾಟ್ ಮೂಲಕ ತಲುಪಿಸಲು ಸಹಕಾರಿಯಾಗಲಿದೆ ಎಂದು ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದರು.

ಪೊಲೀಸ್ ಇಲಾಖೆಗೆ ಮತ್ತೊಂದು ಗರಿ

ಪೊಲೀಸ್ ಇಲಾಖೆಗೆ ಮತ್ತೊಂದು ಗರಿ

ಈ ಮ್ಯಾಸ್ಕಾಟ್ ಸಿದ್ಧಪಡಿಸಲು 5. ಲಕ್ಷ ರೂ ವೆಚ್ಚ ಮಾಡಲಾಗಿದೆ. ಗಾಳಿ ತುಂಬಿದ ಬಲೂನ್ ಮೂಲಕವೂ ಸಹ ಮ್ಯಾಸ್ಕಾಟ್ ನ್ನು ಪ್ರದರ್ಶಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ಮ್ಯಾಸ್ಕಾಟ್ ಅನ್ನು ಸರಳ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು. ಒಟ್ಟಾರೆ ಈ ಯೋಜನೆಯಿಂದ ಮೈಸೂರು ಪೊಲೀಸ್ ಇಲಾಖೆಗೆ ಮತ್ತೊಂದು ಗರಿ ಮೂಡಿದಂತಾಗುವುದರಲ್ಲಿ ಅನುಮಾನವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+