ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಪರೀಕ್ಷೆ ಬರೆಯುವ ಮುನ್ನ ವಿದ್ಯಾರ್ಥಿಗಳು ಕಂಡಿದ್ದು ಹೀಗೆ

ಬೆಳಿಗ್ಗೆ 10.15ರಿಂದ ಆರಂಭವಾದ ಪರೀಕ್ಷೆಗೆ ಮೊದಲ ದಿನವಾದ್ದರಿಂದ ಎಲ್ಲ ಪರೀಕ್ಷಾರ್ಥಿಗಳು ಒಂದು ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಗುರುವಾರ ಜೀವಶಾಸ್ತ್ರ ಮತ್ತು ಇತಿಹಾಸ ವಿಷಯಗಳ ಪರೀಕ್ಷೆ ನಡೆಯುತ್ತಿದೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 9: ಎಲ್ಲರ ಮುಖದಲ್ಲೂ ಏನೋ ಕಳವಳ. ಆದರೂ ಕೊನೆಗೊಮ್ಮೆ ನೋಡಿಕೊಂಡು ಬಿಡೋಣ ಎಂದು ಎಲ್ಲರೂ ತಮ್ಮ ಪುಸ್ತಕಗಳನ್ನು ತೆರೆದಿಟ್ಟುಕೊಂಡಿದ್ದರು. ಸ್ನೇಹಿತರ ಜೊತೆ ಅಲ್ಲಿಯೇ ಈ ಪ್ರಶ್ನೆ ಬೀಳಬಹುದಾ? ಇದರ ಉತ್ತರವನ್ನೇನು ಎಂಬಿತ್ಯಾದಿ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಕೆಲವರು ಕಣ್ಮುಚ್ಚಿ ಅಲ್ಲೇ ಮನನ ಮಾಡುತ್ತಿದ್ದರು. ಇಂಥಹ ದೃಶ್ಯಗಳು ಕಂಡು ಬಂದಿದ್ದು ಪಿಯುಸಿ ಪರೀಕ್ಷಾ ಕೇಂದ್ರಗಳಲ್ಲಿ.

ಬೆಳಿಗ್ಗೆ 10.15ರಿಂದ ಆರಂಭವಾದ ಪರೀಕ್ಷೆಗೆ ಮೊದಲ ದಿನವಾದ್ದರಿಂದ ಎಲ್ಲ ಪರೀಕ್ಷಾರ್ಥಿಗಳು ಒಂದು ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಕೆಲವರು ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿದೆ ಎಂಬುದನ್ನು ಪರಿಶೀಲಿಸಿದರು. ಗುರುವಾರ ಜೀವಶಾಸ್ತ್ರ ಮತ್ತು ಇತಿಹಾಸ ವಿಷಯಗಳ ಪರೀಕ್ಷೆ ನಡೆಯುತ್ತಿದೆ.[ಪರೀಕ್ಷೆಗೆ ತೆರಳುವ ಮುನ್ನ ಈ 15 ಅಂಶಗಳನ್ನು ಮರೆಯದಿರಿ]

ಎಷ್ಟು ವಿದ್ಯಾರ್ಥಿಗಳು?

ಎಷ್ಟು ವಿದ್ಯಾರ್ಥಿಗಳು?

36,891 ವಿದ್ಯಾರ್ಥಿಗಳ ಪೈಕಿ, 30,115 ಹೊಸಬರಾದರೆ 5,216 ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯುತ್ತಿದ್ದಾರೆ. ಇನ್ನು 1560 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ವಿಭಾಗವಾರು

ವಿಭಾಗವಾರು

ವಿಜ್ಞಾನ ವಿಭಾಗದಲ್ಲಿ 11,905 ವಿದ್ಯಾರ್ಥಿಗಳು. ಕಲಾ ವಿಭಾಗದಲ್ಲಿ 12,833 ವಿದ್ಯಾರ್ಥಿಗಳು. ವಾಣಿಜ್ಯ ವಿಭಾಗದಲ್ಲಿ 12,153 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಸೂಕ್ತ ಭದ್ರತೆ

ಸೂಕ್ತ ಭದ್ರತೆ

ಸೂಕ್ತ ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೊಠಡಿಗೆ ತರಲಾಯಿತು. ಇನ್ನು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿದೆ. ನಕಲು ತಡೆಯಲು ವ್ಯಾಪಕ ಕ್ರಮ ಕೈಗೊಳ್ಳಲಾಗಿದ್ದು, 18 ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ ಕ್ಯಾಮರಾಗಳ ಮೂಲಕ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ.

ಪೆನ್ನು ಹೂ ವಿತರಣೆ

ಪೆನ್ನು ಹೂ ವಿತರಣೆ

ಏತನ್ಮಧ್ಯೆ ಸದ್ವಿದ್ಯಾ ಶಾಲೆಯ ಬಳಿ ಪಾಲಿಕೆಯ ಸದಸ್ಯ ಪ್ರಶಾಂತ ಗೌಡ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಲೇಖನಿ ಹಾಗೂ ಹೂ ನೀಡಿ ಪರೀಕ್ಷೆಯನ್ನು ಯಾವುದೇ ಗೊಂದಲಗಳಿಲ್ಲದೇ ನಿರಾತಂಕವಾಗಿ ಎದುರಿಸಲು ತಿಳಿಸಿದರು.

ಗೈರು ಹಾಜರಿ

ಗೈರು ಹಾಜರಿ

ಮೈಸೂರು ಜಿಲ್ಲೆಯ 50 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಅನಾರೋಗ್ಯ ಹಾಗೂ ಇನ್ನಿತರ ಕಾರಣಗಳಿಂದ ಪರೀಕ್ಷೆಗೆ ಹಾಜರಾಗದವರ ಕುರಿತು ಮಧ್ಯಾಹ್ನದ ಬಳಿಕ ಹೆಚ್ಚಿನ ವಿವರ ತಿಳಿದುಬರಲಿದೆ.

English summary
These are the things observed in the area of exam hall in Mysuru. Biology and History exams are scheduled for second PUC students on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X