ಪ್ರವಾಸಿಗರಿಗೆ ಇನ್ನೂ ತೆರೆಯದ ಬೈಲುಕೊಪ್ಪೆಯ ಗೋಲ್ಡನ್ ಟೆಂಪಲ್
ಮೈಸೂರು, ಫೆಬ್ರವರಿ 9: ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಕಾಣಿಸಿಕೊಂಡ ಕೋವಿಡ್-19 ಎಂಬ ಮಹಾಮಾರಿ ಸಾಂಕ್ರಮಿಕದ ಕಾರಣದಿಂದ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು.
ನಂತರ ಕೋವಿಡ್ ಸೋಂಕು ಲಕ್ಷಣಗಳು ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಯಮಾವಳಿಯನ್ನು ಸಡಿಲಗೊಳಿಸಿ ಸಾರ್ವಜನಿಕರ ಮುಕ್ತ ಓಡಾಟಕ್ಕೆ ಅನುವು ಮಾಡಿ ಕೊಡಲಾಯಿತಲ್ಲದೆ ಸರ್ಕಾರೀ ಕಚೇರಿಗಳು, ರೈಲು, ವಿಮಾನ, ಬಸ್ಸುಗಳನ್ನು ಎಂದಿನಂತೆ ಓಡಿಸಲು ಅವಕಾಶ ಮಾಡಿಕೊಡಲಾಯಿತು.
ಆದರೆ ಕಳೆದ ಮಾರ್ಚ್ ತಿಂಗಳಿನಲ್ಲಿ ಬಾಗಿಲು ಮುಚ್ಚಿದ ಬೈಲುಕೊಪ್ಪೆಯ ಗೋಲ್ಡನ್ ಟೆಂಪಲ್ ಇನ್ನೂ ಕೂಡ ಪ್ರವಾಸಿಗರಿಗೆ ತೆರೆಯಲ್ಪಟ್ಟಿಲ್ಲ. ಪ್ರವಾಸಿ ಜಿಲ್ಲೆ ಕೊಡಗಿನ ಮಗ್ಗುಲಲ್ಲೇ ಇರುವ ಈ ಪ್ರವಾಸಿ ತಾಣಕ್ಕೆ ನಿತ್ಯವೂ ನೂರಾರು ಪ್ರವಾಸಿಗರು ಭೇಟಿ ನೀಡಿ ಸಪ್ಪೆ ಮೊಗದೊಂದಿಗೆ ವಾಪಸ್ಸು ಹೋಗುತ್ತಿದ್ದಾರೆ.

ಕೊಡಗಿನಲ್ಲೂ ಕೂಡ ಜಿಲ್ಲಾಡಳಿತ ಕೋವಿಡ್ ಲಾಕ್ ಡೌನ್ ಘೋಷಿಸಿದ್ದು, ಕಳೆದ ಅಕ್ಟೋಬರ್ ನಿಂದ ಪ್ರವಾಸಿ ತಾಣಗಳು ಸಾರ್ವಜನಿಕರಿಗೆ ಷರತ್ತಿನೊಂದಿಗೆ ತೆರೆಯಲ್ಪಟ್ಟಿವೆ. ಬಿಕೋ ಎನ್ನುತಿದ್ದ ಹೋಟೆಲ್, ಲಾಡ್ಜ್, ಹೋಂ ಸ್ಟೇ ಗಳು ಈಗ ಒಂದಷ್ಟು ವ್ಯಾಪಾರ ಪಡೆಯುತ್ತಿವೆ.
ಒನ್ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಬೆಂಗಳೂರಿನ ಪ್ರವಾಸಿ ಶ್ರೀಮತಿ ಪ್ರತಿಭಾ ಅವರು, ನಾವು ಕುಟುಂಬಸ್ಥರೆಲ್ಲರೂ ಮೊನ್ನೆ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದೆವು. ವಾಪಾಸ್ ಹೋಗುವಾಗ ಗೋಲ್ಡನ್ ಟೆಂಪಲ್ ನೋಡೋಣ ಎಂದು ಹೋದರೆ ಬೀಗ ಹಾಕಿದೆ, ಇದರಿಂದ ಎಲ್ಲರಿಗೂ ನಿರಾಸೆ ಆಗಿದೆ ಎಂದರು.

ಮತ್ತೊಬ್ಬ ಪ್ರವಾಸಿ ಮಂಡ್ಯದ ಜನಾರ್ಧನ್ ಅವರೂ ಮಾತನಾಡಿ, ಎಲ್ಲರಿಗೂ ಮುಖಗವುಸು ಕಡ್ಡಾಯಗೊಳಿಸಿ ದೇವಾಲಯದ ಒಳಗೆ ಪ್ರವೇಶ ನೀಡಲಿ, ಈಗ ಕೊರೊನಾ ಸೋಂಕು ಕಡಿಮೆ ಆಗಿರುವುದರಿಂದ ಸೋಂಕು ಹರಡುವುದು ಕಡಿಮೆ ಆಗಿದೆ. ಈ ದಿಸೆಯಲ್ಲಿ ದೇವಾಲಯದ ಆಡಳಿತ ಮಂಡಳಿ ಶೀಘ್ರವೇ ಕ್ರಮ ಕೈಗೊಳ್ಳಲಿ, ಪ್ರವಾಸಿಗರು ನಿರಾಶರಾಗದಿರಲಿ ಎಂದು ಹೇಳಿದರು.
ಆದರೆ ಬೈಲುಕೊಪ್ಪೆಯ ಟಿಬೇಟಿಯನ್ ಗೋಲ್ಡನ್ ಟೆಂಪಲ್ ಗೆ ಪ್ರವಾಸಿಗರ ಪ್ರವೇಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಸಣ್ಣ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಟಿಬೇಟಿಯನ್ ಆಡಳಿತವು ಈ ಕುರಿತು ಶೀಘ್ರವೇ ಗೋಲ್ಡನ್ ಟೆಂಪಲ್ ಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿಕೊಡಲಿ ಎಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ. ಇದು ಖಾಸಗಿ ಪ್ರವಾಸಿ ತಾಣ ಆಗಿರುವುದರಿಂದ ಸರ್ಕಾರ ಸೂಚನೆ ನೀಡಲು ಆಗುತ್ತಿಲ್ಲ ಎನ್ನಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications