ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಸಾಮಾ ಬಿನ್ ಲಾಡೆನ್ ಶಿಷ್ಯ ಅಬುಜುಭೇದಾಗೆ ಮೈಸೂರಿನ ನಂಟು ರಿವೀಲ್!

|
Google Oneindia Kannada News

ಮೈಸೂರು, ಅಕ್ಟೋಬರ್. ೦3: ಭಯೋತ್ಪಾದಕ ಅಬು ಜುಬೇಧಾ ಮೈಸೂರಿನಲ್ಲಿ ನೆಲೆಸಿ ವ್ಯಾಸಂಗ ಮಾಡಿದ್ದನು ಎಂಬ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

2002ರ ಭಯೋತ್ಪಾದನಾ ಕೃತ್ಯದಲ್ಲಿ ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದ ಎಂಬ ಆರೋಪದ ಮೇಲೆ ಅಮೆರಿಕಾ ಪಡೆಗಳಿಂದ ಬಂಧಿತನಾದ ಜೇನ್ ಅಲ್‍ಅಬಿದಿನ್ ಮುಹಮದ್ ಹುಸೇನ್ ಅಬು ಜುಬೇಧಾನನ್ನು ಇದೀಗ ಕ್ಯೂಬಾದಲ್ಲಿರುವ ಗೌಂಟೋನಾಮೋ ಸಾಗರದ ಬಂಧಿತರ ಶಿಬಿರದಲ್ಲಿ ಬಿಗಿ ಭದ್ರತೆಯಲ್ಲಿ ಇಡಲಾಗಿದೆ.

ಒಸಾಮಾ ಬಿನ್ ಲಾಡೆನ್ ನ ಹಿರಿಯ ಲೆಫ್ಟಿನೆಂಟ್ ಹಾಗೂ ಕೌಂಟರ್ ಇಂಟೆಲಿಜೆನ್ಸ್ ಅಧಿಕಾರಿಯಾಗಿದ್ದ ಜುಬೇಧಾ ಅಲ್ ಖೈದಾದಲ್ಲಿ 3ನೇ ಶ್ರೇಣಿಯ ಅಧಿಕಾರಿಯಾಗಿದ್ದ ಎಂದು ಹೇಳಲಾಗಿದೆ.

ಅಲ್ ಖೈದಾ ವಿಶ್ವ ವಾಣಿಜ್ಯ ಕೇಂದ್ರ (ವರ್ಲ್ಡ್ ಟ್ರೇಡ್ ಸೆಂಟರ್)ದ ಮೇಲೆ ನಡೆಸಿದ 9/11 ದಾಳಿ ಸೇರಿದಂತೆ ಪ್ರತಿಯೊಂದು ದೊಡ್ಡಮಟ್ಟದ ಕಾರ್ಯಾಚರಣೆಯಲ್ಲಿಯೂ ಈತನು ಭಾಗಿಯಾಗಿದ್ದನಲ್ಲದೆ, ಅಮೆರಿಕಾದ ವಿರುದ್ಧ ಮುಂದೆ ನಡೆಸಬೇಕಿದ್ದ ಎಲ್ಲಾ ಕಾರ್ಯಾಚರಣೆಗಳನ್ನು ರೂಪಿಸಿದ್ದನು ಎಂದು ಆರೋಪಿಸಲಾಗಿದೆ.

ರಾಮನಗರದಲ್ಲಿ ನಡೆದಿತ್ತು ಬೌದ್ಧಗುರು ದಲೈಲಾಮ ಹತ್ಯೆಗೆ ಸಂಚುರಾಮನಗರದಲ್ಲಿ ನಡೆದಿತ್ತು ಬೌದ್ಧಗುರು ದಲೈಲಾಮ ಹತ್ಯೆಗೆ ಸಂಚು

2002ರಲ್ಲಿ ಬಂಧಿತನಾದ ಜುಬೇಧಾ ಸುಮಾರು ನಾಲ್ಕೂವರೆ ವರ್ಷಗಳ ಕಾಲ ಅಮೆರಿಕಾದ ಸಿಐಎ ಅಧೀನದಲ್ಲಿ ಗುಪ್ತ ಸ್ಥಳದಲ್ಲಿ ವಿಚಾರಣೆಯನ್ನು ಎದುರಿಸಿದ್ದನು. ಆನಂತರ ಅವನನ್ನು ವಿವಿಧ ಸೆರೆಮನೆಗಳಲ್ಲಿ ಇಡಲಾಗಿತ್ತು. ಈ ಸಂಬಂಧ ಸಿಐಎ ಈತ ವಿವಿಧ ರಾಷ್ಟ್ರಗಳಲ್ಲಿ ನಡೆಸಿದ ಭಯೋತ್ಪಾದನಾ ಕೃತ್ಯದ ಬಗ್ಗೆ ತನಿಖೆ ನಡೆಸುತ್ತಿದೆ. ಮುಂದೆ ಓದಿ...

 ವಿಚಾರಣೆ ನಡೆಸಿದ ಅಧಿಕಾರಿಗಳು

ವಿಚಾರಣೆ ನಡೆಸಿದ ಅಧಿಕಾರಿಗಳು

ಜುಬೇಧಾ ಮೈಸೂರಿನ ಸಂಪರ್ಕ ಕುರಿತು ಮಾಹಿತಿ ದೊರೆತ ಕೂಡಲೇ ರಾಜ್ಯ ಮತ್ತು ಕೇಂದ್ರದ ಆಂತರಿಕ ಭದ್ರತಾ ಪೊಲೀಸ್ ವಿಭಾಗದ ಅಧಿಕಾರಿಗಳು ಮೈಸೂರು ನಗರಕ್ಕೆ ಆಗಮಿಸಿ, ಆತನ ಬಗ್ಗೆ ಮಾಹಿತಿ ಕಲೆ ಹಾಕಿದರಲ್ಲದೆ, ಮೈಸೂರಿನ ಜತೆಗಿನ ಆತನ ನಂಟು ಹಾಗೂ ಅವನೊಂದಿಗೆ ಸಂಪರ್ಕ ಹೊಂದಿದ್ದವರ ಬಗ್ಗೆ ವಿಚಾರಣೆ ನಡೆಸಿದ್ದಾರೆ.

 ರಾಮನಗರದಲ್ಲಿ ಜಾರ್ಖಂಡ್‌ನ ಶಂಕಿತ ನಕ್ಸಲೈಟ್‌ ಬಂಧನ ರಾಮನಗರದಲ್ಲಿ ಜಾರ್ಖಂಡ್‌ನ ಶಂಕಿತ ನಕ್ಸಲೈಟ್‌ ಬಂಧನ

 3 ವಿಷಯಗಳಲ್ಲಿ ಅನುತ್ತೀರ್ಣ

3 ವಿಷಯಗಳಲ್ಲಿ ಅನುತ್ತೀರ್ಣ

ಜುಬೇಧಾ ತನ್ನ ನಾಲ್ವರು ಸೌದಿ ಸ್ನೇಹಿತರೊಂದಿಗೆ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಕಾಲೇಜಿನಲ್ಲಿ 1989ರಲ್ಲಿ ಪ್ರಥಮ ವರ್ಷದ ಬಿಎಸ್ ಸಿಗೆ ಪ್ರವೇಶ ಪಡೆದಿದ್ದ.

ಭೌತಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಗಣಕ ವಿಜ್ಞಾನವನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದನು.

 ಎಎನ್ಐ ತಂಡದಿಂದ ಮುಂದುವರೆದ ಶಂಕಿತ ಉಗ್ರ ಮುನೀರ್ ವಿಚಾರಣೆ ಎಎನ್ಐ ತಂಡದಿಂದ ಮುಂದುವರೆದ ಶಂಕಿತ ಉಗ್ರ ಮುನೀರ್ ವಿಚಾರಣೆ

ಒಂದು ವರ್ಷ ಅಧ್ಯಯನ ಮಾಡಿ 3 ವಿಷಯಗಳಲ್ಲಿ ಅನುತ್ತೀರ್ಣನಾದ ನಂತರ ಕಾಲೇಜಿಗೆ ಹಿಂತಿರುಗಲಿಲ್ಲ.

 ಗಾಯಗೊಂಡಿದ್ದ ಜುಬೇಧಾ

ಗಾಯಗೊಂಡಿದ್ದ ಜುಬೇಧಾ

ವ್ಯಾಸಂಗದ ವೇಳೆ ಅಬು ಜುಬೇಧಾ ಮೈಸೂರಿನ ಉದಯ ಗಿರಿಯ ಮನೆಯೊಂದನ್ನು ಬಾಡಿಗೆಗೆ ಪಡೆದು ತನ್ನ ನಾಲ್ವರು ಸಹಚರರೊಂದಿಗೆ ವಾಸವಾಗಿದ್ದ.

ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ ಪ್ಯಾಲೆಸ್ಟೈನ್ ಕುಟುಂಬದಲ್ಲಿ ಜನಿಸಿದ್ದ ಜುಬೇಧಾ ಮೈಸೂರಿನಿಂದ ದಿಲ್ಲಿ ಮೂಲಕ ಪಾಕಿಸ್ತಾನ ಸೇರಿಕೊಂಡಿದ್ದನು. ನಂತರ ಸೋವಿಯತ್ ಪಡೆಗಳೊಂದಿಗೆ ಹೋರಾಡಲು ಆಫ್ಘಾನಿಸ್ತಾನ್ ಗೆ ತೆರಳಿದ್ದನು. ಈ ಯುದ್ಧದಲ್ಲಿ ಜುಬೇಧಾ ಗಾಯಗೊಂಡಿದ್ದನು ಎನ್ನಲಾಗಿದೆ.

 ಫಿಲೋಮಿನಾಗಾಗಿ ಹುಡುಕಾಟ

ಫಿಲೋಮಿನಾಗಾಗಿ ಹುಡುಕಾಟ

ಜುಬೇಧಾ ಡೈರಿಯಲ್ಲಿ ನಮೂದಾಗಿದ್ದ ಮಾಹಿತಿ ಪ್ರಕಾರ 20 ವರ್ಷದ ಅಬು ಜುಬೇಧಾಗೆ ಅಡುಗೆ ಮಾಡಿ ಕೊಡುತ್ತಿದ್ದ 33 ವರ್ಷದ ಫಿಲೋಮಿನಾಗಾಗಿ ಆಂತರಿಕ ಭದ್ರತಾ ಅಧಿಕಾರಿಗಳು ಶೋಧ ನಡೆಸಿದರು ಎಂದು ಗೊತ್ತಾಗಿದೆ.

English summary
In 1989 Abu Jubeda, a terrorist, settled in Mysore. This shocking factor has come to light recently. That time he studied at Sharada Vilas College, Krishnamurthipuram, Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X