Mysuru Dasara: ಮಳೆಯ ನಡುವೆಯೂ ಜಂಬೂ ಸವಾರಿ ವೇಳೆ ಗಮನ ಸೆಳೆದ ಸ್ತಬ್ಧಚಿತ್ರ, ಕಲಾತಂಡಗಳು

ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಲಕ್ಷಾಂತರ ಮಂದಿ ಜನರ ಸಮ್ಮುಖದಲ್ಲಿ ಸಂಪನ್ನವಾಗಿದೆ. ಜಂಬೂಸವಾರಿಯಲ್ಲಿ ಮಳೆಯ ನಡುವೆಯೂ ಸ್ತಬ್ಧಚಿತ್ರ ಹಾಗೂ ಕಲಾತಂಡಗಳು ನಾಡಿನ ಕಲೆ, ಜಾನಪದ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ಮೂಲಕ ಗಮನ ಸೆಳೆದವು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಕಲಾ ತಂಡಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷರರನ್ನು ರಂಜಿಸಿದವು.

ಶನಿವಾರ ಸಿಎಂ ಸಿದ್ದರಾಮಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆ ಮೆರವಣಿಗೆ ಶುರುವಾಯಿತು. ಬೆಳಗ್ಗೆಯಿಂದಲೇ ಆಗಿದ್ದಾಗ್ಗೆ ಬಂದು ಹೋಗುತ್ತಿದ್ದ ಮಳೆ ಮಧ್ಯಾಹ್ನದ ಬಳಿಕ ಜೋರಾಯಿತು. ಮಳೆಯ ನಡುವೆಯೂ ಕಿಂಚಿತ್ತೂ ಉತ್ಸಾಹ ಕಡಿಮೆ ಮಾಡಿಕೊಳ್ಳದೇ ಜನರು ಕಾದು ಕುಳಿತಿದ್ದರು. ಮಳೆಯನ್ನು ಲೆಕ್ಕಿಸದೆ ಕಲಾತಂಡಗಳ ಕಲಾವಿದರು ನೃತ್ಯ ಮಾಡುತ್ತಾ ಮುಂದೆ ಸಾಗಿದರು.

Tableaus and Art Troupes at Mysuru Dasara Jambusavari Highlight State s Cultural Richness

ವೀರಭದ್ರ ಕುಣಿತ, ಬೀಸುಕಂಸಾಳೆ, ನಾದಸ್ವರ, ಎರಡು ಮರಗಾಲು ಕುಣಿತ, ಲಂಬಾಣಿ ನೃತ್ಯ, ನವಿಲು ನೃತ್ಯ, ತಮಟೆ ನಗಾರಿ, ಜಗ್ಗಲಗಿ ಮೇಳ, ಝಾಂಜ್ ಪಥಕ್ ಸೇರಿದಂತೆ ರಾಜ್ಯದ ನಾನಾ ಭಾಗಗಳ 90 ಕಲಾತಂಡಗಳು ಮೆರವಣಿಗೆಯಲ್ಲಿ ಪ್ರದರ್ಶನ ನೀಡಿದವು.

ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಪ್ಪಳ, ಉತ್ತರ ಕನ್ನಡ, ಉಡುಪಿ, ಕೋಲಾರ, ಬಳ್ಳಾರಿ, ಬಾಗಲಕೋಟೆ, ತುಮಕೂರ, ಹಾಸನ, ಮಂಡ್ಯ ಸೇರಿದಂತೆ ರಾಜ್ಯದ ಇನ್ನಿತರ ಜಿಲ್ಲೆಗಳ ಸ್ತಬ್ಧ ಚಿತ್ರಗಳ ಮುಂದೆ ಆಯಾ ಸ್ಥಳೀಯ ಕಲಾವಿದರು ಕುಣಿದು ಕುಪ್ಪಳಿಸಿದರು. ಹೊರ ರಾಜ್ಯಗಳ ಪೈಕಿ ಹರಿಯಾಣದ ಘೂಮರ್ ನೃತ್ಯ, ರಾಜಸ್ಥಾನದ ಜಾನಪದ ಕಲಾತಂಡದ ಚಕ್ರಿ ನೃತ್ಯ, ಉತ್ತರಾಖಂಡದ ಜನಪದ ಕಲಾತಂಡದಿಂದ ತಡಿಯಾಚಪ್ಲಾ ನೃತ್ಯ, ಕೇರಳ ಜನಪದ ನೃತ್ಯ ತಂಡದಿಂದ ಸಿಂಗಾರಿ ಮೇಳಂ, ತಮಿಳುನಾಡು ನೃತ್ಯ ತಂಡ ಕರಗಂ ಕವಾಡಿ ಕಲೆಯನ್ನು ಪ್ರದರ್ಶಿಸಿದವು.

ಪ್ರತಿಯೊಂದು ಊರಿನ ದೇವಸ್ಥಾನ, ಪ್ರಕೃತಿ ಸೌಂದರ್ಯ, ಪಾರಂಪರಿಕ ಕಟ್ಟಡಗಳು, ಕಲೆ, ಸಂಸ್ಕೃತಿಯ ವಿಶೇಷದೊಂದಿಗೆ ಸರ್ಕಾರದ ಕಾರ್ಯಕ್ರಮಗಳ ಪರಿಚಯ, ಸಾಧನೆಗೂ ಸ್ತಬ್ಧ ಚಿತ್ರ ಮೆರವಣಿಗೆ ಭೂಮಿಕೆಯಾಯಿತು. ರಾಜ್ಯದ 31 ಜಿಲ್ಲೆಗಳಿಂದ ತಲಾ ಒಂದೊಂದು ಸ್ತಬ್ಧಚಿತ್ರಗಳು, ರಾಜ್ಯ ಸರಕಾರದ 9 ಇಲಾಖೆಗಳ ಸ್ತಬ್ಧಚಿತ್ರಗಳು, 6 ನಿಗಮ ಮಂಡಳಿಗಳ ಸ್ತಬ್ಧಚಿತ್ರಗಳು, ಕೇಂದ್ರ ಸರಕಾರದ 2, ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ 1 ಹಾಗೂ ಉಪ ಸಮಿತಿಯ 2 ಸ್ತಬ್ಧಚಿತ್ರಗಳು ಸೇರಿದಂತೆ ಒಟ್ಟು 51 ಸ್ತಬ್ಧಚಿತ್ರಗಳು ದಸರಾ ಜಂಬೂಸವಾರಿಯ ಮೆರುಗು ಹೆಚ್ಚಿಸಿದವು.

Tableaus and Art Troupes at Mysuru Dasara Jambusavari Highlight State s Cultural Richness

ನಿಗಮ ಮಂಡಳಿ ಸಾಧನೆ ಸ್ತಬ್ದಚಿತ್ರ

ಕೆಎಂಎಫ್‌, ರೇಷ್ಮೆ ಉದ್ಯಮ ನಿಗಮ, ಕಾವೇರಿ ನೀರಾವರಿ ನಿಗಮ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ, ರೈಲ್ವೆ ಇಲಾಖೆ, ಮುಕ್ತ ವಿವಿಯ ಕಾರ್ಯಕ್ರಮಗಳ ವಿಶೇಷವನ್ನು ಸ್ತಬ್ಧಚಿತ್ರ ಮೂಲಕ ಪರಿಚಯಿಸುವ ಪ್ರಯತ್ನ ನಡೆಯಿತು. ಅಂತಿಮವಾಗಿ ದಸರಾ ಸ್ತಬ್ಧಚಿತ್ರ ಉಪ ಸಮಿತಿ ಸಾಮಾಜಿಕ ನ್ಯಾಯ ವಿಷಯ ಕುರಿತು ಸ್ತಬ್ಧಚಿತ್ರ ನಿರ್ಮಾಣ ಮಾಡಿದ್ದು ವಿಶೇಷವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+