ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್.ವಿಶ್ವನಾಥ್‌ರಿಂದ ಅಚ್ಚರಿಯ ಸಲಹೆ
ಮೈಸೂರು: ಕೆಲವು ದಿನಗಳ ಹಿಂದೆಯ ತನಕವೂ ಕಾಂಗ್ರೆಸ್ ನೊಂದಿಗೆ ಕಾಣಿಸಿಕೊಂಡು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಎಂಎಲ್ ಸಿ ಎಚ್ ವಿಶ್ವನಾಥ್ ಅವರು ಇದೀಗ ರಾಜಕೀಯ ವರಸೆ ಬದಲಿಸಿರುವುದು ಗೋಚರಿಸಿದೆ. ಇದೀಗ ಮಾತನಾಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜಕೀಯ ಪಕ್ಕಕ್ಕಿಟ್ಟು ಮೈಸೂರಿನ ಯದುವಂಶದ ಕುಡಿಯನ್ನು ಪಕ್ಷಾತೀತವಾಗಿ, ಅವಿರೋಧವಾಗಿ ಆಯ್ಕೆ ಮಾಡಿ ಎಂಬ ಸಲಹೆ ನೀಡಿದ್ದಾರೆ.
ವಿಶ್ವನಾಥ್ ಅವರ ಈ ನಡೆ ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಮೊನ್ನೆಯ ತನಕವೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರನ್ನು ಟೀಕೆ ಮಾಡುತ್ತಾ ಬಂದಿದ್ದಲ್ಲದೆ, ಕಾಂಗ್ರೆಸ್ ಪಾಳಯದಲ್ಲಿಯೂ ಕಾಣಿಸಿಕೊಂಡಿದ್ದರು. ಆದರೆ ಯಾವಾಗ ಕಾಂಗ್ರೆಸ್ ಎಂ.ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಿತೋ ಆ ನಂತರ ಅಂತರ ಕಾಪಾಡಿಕೊಂಡಿದ್ದರು.

ಈ ನಡುವೆ ಬಿಜೆಪಿ ನಾಯಕರ ಬಗ್ಗೆ ವಿಶ್ವನಾಥ್ ಅವರು ಯಾವುದೇ ರೀತಿಯ ಟೀಕೆ ಮಾಡುತ್ತಿದ್ದರೂ ಬಿಜೆಪಿ ನಾಯಕರು ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಹೊಸ ರಾಜಕೀಯ ಬೆಳವಣಿಗೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎಚ್.ವಿಶ್ವನಾಥ್ ಅವರನ್ನು ಭೇಟಿ ಮಾಡಿ ಸಹಾಯ ಕೋರಿದ್ದಾರೆ.
ಮಹಾರಾಜರ ಕೊಡುಗೆ ಅಪರಿಮಿತ
ಈ ಬೆಳವಣಿಗೆ ಬಳಿಕ ಮಾತನಾಡಿರುವ ವಿಶ್ವನಾಥ್ ಅವರು ಮೈಸೂರಿಗೆ ಮಹಾರಾಜರ ಕೊಡುಗೆ ಅಪರಿಮಿತ. ಅಂತಹ ವಂಶದ ಕುಡಿ ಇಂದು ಲೋಕಸಭಾ ಚುನಾವಣಾ ಕಣದಲ್ಲಿದೆ. ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಯದುವಂಶಕ್ಕೆ ಎಲ್ಲರೂ ಗೌರವ ಸೂಚಿಸಬೇಕಿದೆ. ಹೊಸ ಹೊಸ ಆವಿಷ್ಕಾರಗಳನ್ನು ಮೈಸೂರಿಗೆ ಕೊಡುಗೆಯಾಗಿ ಕೊಟ್ಟವರು ಮೈಸೂರು ಅರಸರು ಎಂದಿದ್ದಾರೆ.
ಇಂದು ಆ ಅರಸರ ಕುಡಿ ಚುನಾವಣಾ ಕಣದಲ್ಲಿದೆ. ಈ ವೇಳೆ ರಾಜಕೀಯ ಲೇಪನ ಹೊರತುಪಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಪ್ರಭುತ್ವಕ್ಕೆ ಅದರದ್ದೇ ಆದ ಮನ್ನಣೆ ಇದೆ. ಇದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರಿಗೆ ತಿಳಿಯದ ವಿಚಾರವೇನಲ್ಲ. ಅವರು ಈ ವಿಷಯದಲ್ಲಿ ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ನಾನು ಬಿಜೆಪಿಯನ್ನು ಟೀಕಿಸಿದ್ದು ಸತ್ಯ
ಕುಡಿಯುವ ನೀರು, ಕರೆಂಟ್, ಶಾಲೆ, ಆಸ್ಪತ್ರೆ, ರಸ್ತೆ ಸೇರಿದಂತೆ ಎಲ್ಲಾ ಯೋಜನೆಗಳಲ್ಲಿ ಮಹಾರಾಜರ ಕೊಡುಗೆ ಇದೆ. ಇದನ್ನು ನೆನಪು ಮಾಡಿಕೊಂಡು ಅರಸರ ಕುಡಿಯಾದ ಯದುವೀರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮನಸ್ಸು ಮಾಡಲಿ ಎಂದ ಅವರು, ನಿಮ್ಮ ರಾಜಕೀಯ ಜಿದ್ದಾಜಿದ್ದಿ ಮಿಕ್ಕ 27 ಕ್ಷೇತ್ರಗಳಲ್ಲಿ ಇಟ್ಟುಕೊಳ್ಳಿ ಎಂದಿದ್ದಾರೆ.
ಇನ್ನೊಂದೆಡೆ ವಿಷಯಾಧಾರಿತವಾಗಿ ನಾನು ಬಿಜೆಪಿಯನ್ನು ಟೀಕಿಸಿದ್ದು ಸತ್ಯ. ಕಾಂಗ್ರೆಸ್ ಟಿಕೆಟ್ ಕೇಳಿದ್ದೂ ಸತ್ಯ. ಮಹಾರಾಜರಿಗಾಗಿ ನಾನು ಈ ನಿರ್ಧಾರ ತೆಗೆದು ಕೊಂಡಿದ್ದೇನೆ. ಮಹಾರಾಜರು ಯಾವುದೇ ಪಕ್ಷದಿಂದ ನಿಂತಿದ್ದರು ನಾನು ಇದೇ ನಿರ್ಧಾರ ತೆಗೆದು ಕೊಳ್ಳುತ್ತಿದ್ದೆ ಎಂದು ಇದೇ ಸಂದರ್ಭ ಹೇಳಿದರು.
ಬಿ.ವೈ.ವಿಜಯೇಂದ್ರ ಹೇಳಿದ್ದೇನು?
ಈ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಶಿವಮೊಗ್ಗದಲ್ಲಿ ಈಶ್ವರಪ್ಪ ಮುನಿಸು ಕುರಿತು ಪ್ರತಿಕ್ರಿಯಿಸಿ, ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ಸ್ವಲ್ಪ ಹೊಂದಾಣಿಕೆ ಆಗಲು ಸಮಯ ತೆಗೆದುಕೊಳ್ಳುತ್ತದೆ. ಶಿವಮೊಗ್ಗದ್ದು ಎಲ್ಲವು ಕೂಡ ಬಗೆಹರಿಯುತ್ತದೆ. ರಾಜ್ಯಾಧ್ಯಕ್ಷ ಬದಲಾದರೆ ನಾನು ಸ್ಪರ್ಧಿಸುವುದಲ್ಲ ಎಂದು ಹೇಳಿದ್ದು ಕಾಂಗ್ರೆಸ್ ಬಗ್ಗೆ, ನಮ್ಮ ಬಗ್ಗೆಯಲ್ಲ. ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿ, ಪ್ರಧಾನಿ ಭೇಟಿಯಾದಾಗಲೇ ವಿಚಾರ ಸ್ಪಷ್ಟವಾಗಿತ್ತು. ಅವರ ಬೆಂಬಲದಿಂದ ನಮ್ಮ ಶಕ್ತಿ ಹೆಚ್ಚಾಗಿದೆ. ಇದು ನಿರೀಕ್ಷಿತ ಎಂದರು.

ಕೇಂದ್ರದ ಅನುದಾನದ ವಿಚಾರವಾಗಿ ಅಮಿತ್ ಶಾ ವಿರುದ್ಧ ಸಿಎಂ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಬಾಯಲ್ಲಿ ಪದೇ ಪದೇ ಸುಳ್ಳು ಬರುತ್ತಿದೆ. ಇದು ಅವರಿಗೆ ಶೋಭೆ ತರುವುದಿಲ್ಲ. ಯುಪಿಎ ಅವಧಿಯಲ್ಲಿ 1ಲಕ್ಷ ಕೋಟಿ ಕೊಟ್ಟಿದೆ. ಕಳೆದ 10 ವರ್ಷದಲ್ಲಿ 4 ಲಕ್ಷ ಕೋಟಿಗೂ ಅಧಿಕ ಅನುದಾನ ಬಂದಿದೆ. ಮೂಲ ಭೂತ ಸೌಕರ್ಯ ಕೊಟ್ಟಿದ್ದಾರೆ. ಇದು ಒಂದು ರೀತಿಯಲ್ಲಿ ಹಾಸ್ಯಾಸ್ಪದ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಜನರಿಗೆ ಈ ಸರ್ಕಾರ ಶಾಪ
ಆದರೂ ಇವರಿಗೆ ರಾಜ್ಯದ ರೈತರ ಬಗ್ಗೆ ಯಾಕೆ ಕರುಣೆ ಬರಲಿಲ್ಲ. ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಕಿಂಚಿತ್ತೂ ಅನಿಸಲಿಲ್ಲ. ರೈತರ ಸಂಕಷ್ಟಕ್ಕದಲ್ಲಿದ್ದಾರೆ ಅವರಿಗೆ ಕರುಣೆ ತೋರಿಸಿ. ರೈತರಿಗೆ ರಾಜ್ಯದ ಜನರಿಗೆ ಈ ಸರ್ಕಾರ ಶಾಪವಾಗಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮೊದಲು ಮಾಡಿ ಎಂದು ತಿರುಗೇಟು ನೀಡಿದ್ದಾರೆ.
-
ಮಾರ್ಚ್ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಕರ್ನಾಟಕದಲ್ಲಿ ಜೀವ ಬಲಿ ಪಡೆಯುತ್ತಿರುವ ಖಾಸಗಿ ಬಸ್ಗಳು: 6 ವರ್ಷಗಳಲ್ಲಿ 3,823 ಅಪಘಾತ ಪ್ರಕರಣಗಳು ವರದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ












Click it and Unblock the Notifications