• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಕೀಯಕ್ಕೆ ಬರಲು ಪ್ರಮುಖ ಕಾರಣ ಕಾಂಗ್ರೆಸ್ ಕಾರ್ಯಕರ್ತರು:ಸುಮಲತಾ ಸಂದರ್ಶನ

|
   Lok Sabha Elections 2019 : ಕುಮಾರಸ್ವಾಮಿ ಹಳೆಯದನ್ನೆಲ್ಲ ಮರೆತುಬಿಟ್ರು..ಏನೂ ಮಾಡಕಾಗಲ್ಲ | Oneindia Kannada

   ಮೈಸೂರು, ಮಾರ್ಚ್ 28:ಮಂಡ್ಯ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ರಾಷ್ಟ್ರ ರಾಜಕಾರಣವೇ ಮಂಡ್ಯದತ್ತ ಇಣುಕಿ ನೋಡುವಂತೆ ಮಾಡಿದ್ದು, ಸಿನಿಮಾ ನಟಿ, ಅಂಬರೀಶ್ ಪತ್ನಿ ಸುಮಲತಾ ಚುನಾವಣಾ ಅಖಾಡಕ್ಕೆ ಧುಮುಕಿದ ಮೇಲೆ.

   ಅನೇಕ ಸವಾಲುಗಳನ್ನು ನಾಜೂಕಾಗಿಯೇ ನಿಭಾಯಿಸುತ್ತಿರುವ ಸುಮಲತಾ ಅಂಬರೀಶ್ ತಮ್ಮ ರಾಜಕೀಯ ವೈರಿಗಳನ್ನು ಕ್ಲಿಷ್ಟವಾಗಿ ತೆಗೆದುಕೊಳ್ಳದೆ ಸ್ನೇಹಯುತವಾಗಿಯೇ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಇದರೊಟ್ಟಿಗೆ ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಸಕ್ಕರೆ ನಾಡು ಮಂಡ್ಯದಲ್ಲಿ ಸುಮಲತಾ ಪ್ರಚಾರದ ವೇಳೆ ಜನರು ಭಾವೋದ್ವೇಗಕ್ಕೆ ಒಳಗಾದಂತೆ ಭಾಸವಾಗುತ್ತಿದೆ. ಇದಕ್ಕೆ ಸುಮಲತಾ ಅವರ ಪ್ರಖರ ಮಾತುಗಳೇ ಕಾರಣವೆನ್ನಬಹುದು.

   ರಾಜಕೀಯ ಪಟ್ಟುಗಳನ್ನು ಪತಿ ಅಂಬರೀಶ್ ರನ್ನು ನೋಡಿ ಕಲಿತ ಸುಮಲತಾಗೆ ಈ ಕ್ಷೇತ್ರ ಹೊಸದಲ್ಲ. ಆದರೆ ಅಭ್ಯರ್ಥಿಯಾಗಿ ಮಾತ್ರ ಹೊಸದಷ್ಟೇ. ಈಗಾಗಲೇ ಹಲವು ಅಡೆತಡೆಗಳನ್ನು ರಾಜಕಾರಣದಲ್ಲಿ ಹತ್ತಿರದಲ್ಲಿ ಅನುಭವಿಸದಿದ್ದರೂ, ಅದರ ಅಸ್ಮಿತೆಯ ಅರಿವು ಅವರಿಗಿದೆ ಎಂಬುದನ್ನು ಅವರ ಮಾತುಗಳಿಂದಲೇ ತಿಳಿದುಕೊಳ್ಳಬಹುದು.

   ಸುಮಲತಾ ಅಂಬರೀಶ್ ಬಿಜೆಪಿ ಸೇರ್ತಾರೆ ಎಂದ ರಮೇಶ್ ಜಿಗಜಿಣಗಿ

   ಒಟ್ಟಾರೆ ಸುಮಲತಾ ಅವರ ಮುಂದಿರುವ ಯೋಜನೆಗಳೇನು ? ಅವರು ಗೆಲ್ಲಲು ಅಂಬರೀಶ್ ಹೆಸರನ್ನು ಬಳಸಿಕೊಳ್ಳುತ್ತಿದ್ದಾರಾ? ಹೀಗೆ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ಇದಕ್ಕೆ ಉತ್ತರವನ್ನು ಸ್ವತಃ ಸುಮಲತಾರವರೇ ಒನ್ ಇಂಡಿಯಾಕ್ಕೆ ನೀಡಿದ ಸುದೀರ್ಘ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅದರ ಸಾರಂಶ ಇಲ್ಲಿದೆ.

    ಅನುಕಂಪದ ಮೇಲೆ ಮತವನ್ನು ಕೇಳುತ್ತಿಲ್ಲ

   ಅನುಕಂಪದ ಮೇಲೆ ಮತವನ್ನು ಕೇಳುತ್ತಿಲ್ಲ

   ಸುಮಲತಾರವರಿಗೆ ಮತವನ್ನು ಮಂಡ್ಯದ ಜನ ಏಕೆ ಹಾಕಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅವರು, ಅಂಬರೀಶ್ ಅವರನ್ನು ನೋಡಿ ಮತ ಹಾಕಿ ಎನ್ನುತ್ತಿಲ್ಲ. ನಿಮ್ಮ ಕೆಲಸ ಮಾಡುವ ಸಾಮರ್ಥ್ಯ ನನಗೆ ಇದ್ದರೆ ಮತ ಹಾಕಿ, ಅನುಕಂಪದ ಮೇಲೂ ಮತವನ್ನು ಕೇಳುತ್ತಿಲ್ಲ ಎಂದರು.ಅಂಬರೀಶ್ ಇದ್ದಾಗ ಯಾರೂ ಕೂಡ ಮಾತನಾಡಿರಲಿಲ್ಲ. ಅವರನ್ನು ಮಾತನಾಡಲು ಸಹ ಅಂಬರೀಶ್ ಬಿಡುತ್ತಿರಲಿಲ್ಲ. ನನಗೆ ಬೇರೆಯವರ ಮಾತುಗಳು ಇದುವರೆಗೂ ಕುಗ್ಗಿಸಿಲ್ಲ, ಮತ್ತಷ್ಟು ಬಲ ತಂದಿದೆ. ಇದರಿಂದ ಹೆದರಿಕೆ ಅಂದುಕೊಂಡರೆ ಅದು ಅವರ ದಡ್ಡತನ ಎಂದು ವಿರೋಧಿಗಳಿಗೆ ಪ್ರತಿಕ್ರಿಯೆ ನೀಡಿದರು.

   ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಚುನಾವಣಾ ಚಿಹ್ನೆ ಯಾವುದು?

    ಬಿಜೆಪಿಯ ಈ ನಿಲುವು ಖುಷಿ ತಂದಿದೆ

   ಬಿಜೆಪಿಯ ಈ ನಿಲುವು ಖುಷಿ ತಂದಿದೆ

   ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವ ಚುನಾವಣೆ ಇದು. ಮೋದಿ ಅಲೆ ಬಿಜೆಪಿಯಲ್ಲಿರುವಾಗ ಅವರ ಅಭ್ಯರ್ಥಿಯನ್ನು ಮಂಡ್ಯದಲ್ಲಿ ಹಾಕದಿರುವುದು ನಿಮಗೆ ಹೇಗೆ ಲಾಭ ತಂದುಕೊಡುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಯಿಸಿದ ಸುಮಲತಾ, I feel proud. ನನಗೆ ಆ ಪಕ್ಷದವರು ಬೇಷರತ್ ಬೆಂಬಲ ಘೋಷಿಸಿದ್ದಾರೆ. ಆ ಪಕ್ಷದವರೇ ತಿಳಿಸಿದಂತೆ ನಾವು ಅಂಬರೀಷ್ ಅವರನ್ನು ನೋಡಿ ಅಭ್ಯರ್ಥಿ ನಿಲ್ಲಿಸುತ್ತಿಲ್ಲ ಎಂದಿದ್ದಾರೆ. ಇದರಿಂದ ನನಗೆ ಖುಷಿಯಾಯಿತು ಎಂದು ಬಿಜೆಪಿ ಅವರನ್ನು ಪ್ರಶಂಸಿಸಿದರು.

   ಸುಮಲತಾ, ದರ್ಶನ್‌ಗೆ ಸಿಆರ್‌ಪಿಎಫ್ ಭದ್ರತೆ ಕೊಡಿ : ಬಿಜೆಪಿ ಪತ್ರ

    ಅವರ ಮಾತುಗಳಿಂದ ಯಾರಿಗೂ ಲಾಭವಿಲ್ಲ

   ಅವರ ಮಾತುಗಳಿಂದ ಯಾರಿಗೂ ಲಾಭವಿಲ್ಲ

   ಸೋಷಿಯಲ್ ಮೀಡಿಯಾದಲ್ಲಿ ನಟ ದರ್ಶನ್, ಯಶ್ ಕಾಣೆಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಅದರಲ್ಲೂ ನಟ ದರ್ಶನ್ ಸ್ಪಷ್ಟನೆ ಕೊಟ್ಟರೂ ಯಶ್ ಮಾತನಾಡುತ್ತಿಲ್ಲ ಏಕೆ? ಎಂಬುದಕ್ಕೆ ಉತ್ತರ ಕೊಟ್ಟ ಸುಮಲತಾ, ಯಾರೂ ಎಲ್ಲೂ ಹೋಗಿಲ್ಲ. ಅವರಿಗೆ ನಾವೇ ರೆಸ್ಟ್ ನೀಡಿದ್ದೇವೆ. ಅವರು ಬಂದ ಮೇಲೆ ನಿಮಗೆ ಗೊತ್ತಾಗಲಿದೆ. ನಮ್ಮ ಎದುರಾಳಿ ಪಕ್ಷದವರು ಭಯ ಬಿದ್ದಿದ್ದರಿಂದಲೇ ನಮ್ಮ ಪ್ರಚಾರದ ಬಗ್ಗೆ ಇಷ್ಟು ತಲೆಕೆಡಿಸಿಕೊಂಡಿದ್ದಾರೆ. ಅವರಿಗೆ ದರ್ಶನ್, ಯಶ್ ಗಿರುವ ಫ್ಯಾನ್ ಬೇಸ್ ಏನು ಎಂಬುದು ಗೊತ್ತಿದೆ. ಅವರ ಮಾತುಗಳಿಂದ ಯಾರಿಗೂ ಲಾಭವಿಲ್ಲ. ಬದಲಾಗಿ ಅವರ ಪಕ್ಷದಲ್ಲಿರುವ ದರ್ಶನ್, ಯಶ್ ಫ್ಯಾನ್ಸ್ ಗಳು ತಿರುಗಿ ಬಿದ್ದು ವೋಟ್ ಹಾಕಲ್ಲ ಅಷ್ಟೇ ಎಂದರು.

    ಮಾತನಾಡುವ ಮುಂಚೆ ಗಮನವಿರಲಿ

   ಮಾತನಾಡುವ ಮುಂಚೆ ಗಮನವಿರಲಿ

   ಐಟಿ ದಾಳಿ ಕುರಿತಾಗಿ ಪ್ರತಿಕ್ರಿಯಿಸಿದ ಸುಮಲತಾ, ಐಟಿ ದಾಳಿ ಮಾಡುವುದು ಕೇಂದ್ರ ಸಂಸ್ಥೆಗಳಿಂದ. ಮೂರು ತಿಂಗಳ ಹಿಂದೆಯೇ ತಯಾರಿ ನಡೆಸಿ ದಾಳಿ ನಡೆಸುತ್ತಾರೆ. ಕೇವಲ ಒಂದೇ ರಾತ್ರಿಯಲ್ಲಿ ದಾಳಿ ನಡೆಸಲು ಆಗುವುದಿಲ್ಲ. ಸಿಎಂ ಕುಮಾರಸ್ವಾಮಿ ಅವರ ಬಳಿಯೇ ಎಲ್ಲಾ ಗುಪ್ತಚರ ಇಲಾಖೆ ಇದೆ. ಪ್ರತಿಯೊಂದು ಮಾಹಿತಿಯೂ ಕೂಡ ಅವರಿಗೆ ಸಿಗುತ್ತದೆ. ಅದೆಲ್ಲವನ್ನೂ ಉಪಯೋಗಿಸಿ ದಾಳಿ ಬಗ್ಗೆ ತಿಳಿದುಕೊಳ್ಳಲಿ. ಮಾತನಾಡುವ ಮುಂಚೆ ಗಮನವಿರಲಿ ಎಂದು ಎಚ್ಚರಿಸಿದರು.

    'ಅವರ ಮಗನೂ ಬಣ್ಣ ಹಚ್ಚಿದ್ದಾರೆ ಅಲ್ಲವೇ?'

   'ಅವರ ಮಗನೂ ಬಣ್ಣ ಹಚ್ಚಿದ್ದಾರೆ ಅಲ್ಲವೇ?'

   ಬಣ್ಣ ಹಚ್ಚಿದವರೆಲ್ಲಾ ಡ್ರಾಮಾ ಮಾಡುತ್ತಾರೆ ಎನ್ನುತ್ತಾರೆ ಸಿಎಂ ಮಾತಿಗೆ ಗರಂ ಆದ ಸುಮಲತಾ, ಹಾಗಾದರೆ ಅವರ ಮಗನೂ ಬಣ್ಣ ಹಚ್ಚಿದ್ದಾರೆ ಅಲ್ಲವೇ? ಸಿಎಂ ಕುಮಾರಸ್ವಾಮಿ ಕೂಡ ಸಿನಿಮಾ ಕ್ಷೇತ್ರದಲ್ಲಿ ಕೂಡ ಭಾಗಿಯಾಗಿದ್ದವರು. ಅವರ ಹೇಳಿಕೆ ಅವರಿಗೆ ತಿರುಗೇಟು ನೀಡುತ್ತದೆ ಎಂದರು. ರಾಜಕೀಯದಲ್ಲಿ ಅಭಿಷೇಕ್ ಗೆ ಪ್ಲಾಟ್ ಫಾರ್ಮ್ ಹಾಕಿಕೊಡಬೇಕು ಎಂದುಕೊಂಡಿದ್ದರೆ ಯಾವಾಗಲೋ ಹಾಕಬಹುದಿತ್ತು. ಅದಕ್ಕೆ ಪಕ್ಷೇತರವಾಗಿ ನಿಲ್ಲಿ ಕಷ್ಟಪಡಬೇಕೆಂಬ ನಸೀಬು ಇಲ್ಲ. ಎಲ್ಲಾ ಪಕ್ಷದ ನಾಯಕರು ರೆಡ್ ಕಾರ್ಪೆಟ್ ಸ್ವಾಗತವಿತ್ತು. ಅವನ ಗಮನ ಸಿನಿಮಾ ಕಡೆ ಕೊಡಲಿ. ನೋಡೋಣ ಎಂದು ತಮ್ಮ ಮಗನ ಭವಿಷ್ಯದ ಬಗ್ಗೆ ತಿಳಿಸಿದರು ಸುಮಲತಾ.

    ಮೊದಲು ಗೆಲುವಿನ ಕಡೆ ಗಮನಹರಿಸುವೆ

   ಮೊದಲು ಗೆಲುವಿನ ಕಡೆ ಗಮನಹರಿಸುವೆ

   ನೀವು ಗೆದ್ದರೆ ಬಿಜೆಪಿಗೆ ಬೆಂಬಲನಾ ಅಥವಾ ಕಾಂಗ್ರೆಸ್ ಗೆ ಕೊಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ಗೊತ್ತಿಲ್ಲ. ಮೊದಲು ಗೆಲುವಿನ ಕಡೆ ಗಮನ ಹರಿಸುತ್ತಿದ್ದೇನೆ. ಆಗಲೂ ಜನಾಭಿಪ್ರಾಯ ಸಂಗ್ರಹ ಮಾಡುತ್ತೇನೆ ಎಂದರು. ಅಷ್ಟೇ ಅಲ್ಲ, ಮಂಡ್ಯದ ರೈತರು ಮಣ್ಣಿನ ಮಕ್ಕಳು. ಅವರ ಅಭಿವೃದ್ಧಿ ಮೂಲ ಸೌಕರ್ಯಗಳು ನನ್ನ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದರು.

    ನನಗೆ ಈಗಲೂ ರಾಜಕೀಯದಲ್ಲಿ ಆಸಕ್ತಿ ಇಲ್ಲ

   ನನಗೆ ಈಗಲೂ ರಾಜಕೀಯದಲ್ಲಿ ಆಸಕ್ತಿ ಇಲ್ಲ

   ಅನೇಕ ಕಡೆ ಹೇಳಿದ್ದೀರಿ ನನಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ ಎಂದು ಹಾಗಾದರೆ ನಿಮಗೆ ರಾಜಕೀಯ ಆಸ್ತಿ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಸುಮಲತಾ, ನನಗೆ ಈಗಲೂ ರಾಜಕೀಯದಲ್ಲಿ ಆಸಕ್ತಿ ಇಲ್ಲ. ರಾಜಕೀಯಕ್ಕೆ ಬರಬೇಕು, ರಾಜಕಾರಣ ಮಾಡಬೇಕು ಅಂದುಕೊಂಡಿಲ್ಲ. ಆದರೆ ನಾನು ರಾಜಕೀಯಕ್ಕೆ ಬರಲು ಪ್ರಮುಖ ಕಾರಣ ಮಂಡ್ಯದ ಜನ, ಕಾಂಗ್ರೆಸ್ ಕಾರ್ಯಕರ್ತರು ಎಂದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Mandya independent candidate Sumalatha Ambreesh exclusive interview about politics and gossips. Sumalatha said that reason for coming to politics is Congress activists and Mandya people.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more