ಸಿದ್ದರಾಮಯ್ಯಗೆ ರಾಜೀನಾಮೆ ಸವಾಲು ಎಸೆದ ಶ್ರೀರಾಮುಲು

ಮೈಸೂರು, ನವೆಂಬರ್ 19: ನಿಮಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಎದುರಿಸಿ ಎಂದು ಸಚಿವ ಶ್ರೀರಾಮುಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಪಂಥಾಹ್ವಾನ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಶ್ರೀರಾಮುಲು ಅವರು, ನಾನೂ ಇಂದೇ ರಾಜೀನಾಮೆ ನೀಡುತ್ತೇನೆ, ನೀವೂ ರಾಜೀನಾಮೆ ಕೊಡಿ ಇಬ್ಬರೂ ಮತ್ತೆ ಚುನಾವಣೆ ಎದುರಿಸೋಣ ಯಾರು ಗೆಲ್ತಾರೆ ನೋಡಿಯೇ ಬಿಡೋಣ ಎಂದು ಸವಾಲು ಹಾಕಿದ್ದಾರೆ.

ನನಗೆ ಅವಮಾನ ಮಾಡುವುದನ್ನು ಮೊದಲು ನಿಲ್ಲಿಸಿ, ಇಬ್ಬರೂ ಒಟ್ಟಿಗೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸೋಣ ಬನ್ನಿ ಎಂದು ಸಿದ್ದರಾಮಯ್ಯಗೆ ಪಂಥಾಹ್ವಾನ ನೀಡಿದ್ದಾರೆ.

ಶ್ರೀರಾಮುಲು ಅವರಿಗೆ ಮಾನ ಮರ್ಯಾದೆ ಇದ್ದರೆ ಆಗಲೇ ರಾಜೀನಾಮೆ ಕೊಡಬೇಕಿತ್ತು.ಡಿಸಿಎಂ‌ ಮಾಡುತ್ತೇವೆ ಅಂತಾ ಪ್ರಚಾರ ಮಾಡಿದರು ಕೊಟ್ಟರಾ ? ಎಂ.ಎಲ್.ಎ ಅಲ್ಲದವರಿಗೆ ಡಿಸಿಎಂ ಪಟ್ಟ ಕೊಟ್ಟಿದ್ದಾರೆ. ಎಸ್.ಟಿ ಗೆ ಶೇ.7 ರಷ್ಟು ಮೀಸಲಾತಿ ನೀಡದಿದ್ದರೆ ರಾಜೀನಾಮೆ ಕೊಡುತ್ತೇನೆ ಅಂದಿದ್ದರು. ಒಂದು ನಿಮಿಷ ಇರಲ್ಲ ಎಂದಿದ್ದರು.

ಬಿಜೆಪಿ-ಜೆಡಿಎಸ್ ಪರ ಜನ ಇಲ್ಲ ಹೀಗಾಗಿ ದುಡ್ಡಿನ ಮೂಲಕ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ ಇಂತಹ ಮುಖ್ಯಮಂತ್ರಿ ಚುನಾವಣಾ ಕಣದಲ್ಲಿರಬೇಕಾ ಎಂದು ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೈಸೂರಲ್ಲಿ 30 ಸಾವಿರ ಸೀರೆ ಸಿಕ್ಕಿತು ಯಾರದು, ಅದು ಯಾರ ದುಡ್ಡು ? ಎಲ್ಲಿಂದ ಬಂತು ? ಇದು ಅಕ್ರಮ ಅಲ್ವಾ ? ಕಾನೂನಿನಲ್ಲಿ ಸೀರೆ ಹಂಚುವುದಕ್ಕೆ ಅವಕಾಶ ಇದೆಯಾ ? ಸರ್ಕಾರದಲ್ಲಿ ಇದ್ದುಕೊಂಡು ಅಕ್ರಮ ಮಾಡುತ್ತಾರೆ.ಇವರಿಗೆ ನೈತಿಕತೆ ಇದೆಯೇ ಎಂದು ಕೇಳಿದ್ದಾರೆ.

ಜನರು ಯಾರನ್ನು ಗೆಲ್ಲಿಸುತ್ತಾರೆ ನೋಡೋಣ

ಮಾನ್ಯ ಸಿದ್ದರಾಮಯ್ಯನವರೇ, ನಿಮಗೊಂದು ಸವಾಲು. ಬಾದಾಮಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ನೀವು ಗೆದ್ದಿರಬಹುದು. ಮೀಸಲಾತಿ ಇಲ್ಲದ ಕ್ಷೇತ್ರವಾದರೂ ಸರಿಯೇ ನನ್ನ ವಿರುದ್ಧ ಗೆದ್ದು ತೋರಿಸಿ. ಶಾಸಕ‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ನಾನೂ ರಾಜೀನಾಮೆ ಕೊಟ್ಟು ಬರುತ್ತೇನೆ. ಜನ ಯಾರನ್ನು ಗೆಲ್ಲಿಸುತ್ತಾರೋ ನೋಡಿಯೇ ಬಿಡೋಣ.

ಮಾನ, ಮರ್ಯಾದೆ ಏನೆಂಬುದು ನಿಮಗೆ ಗೊತ್ತಿದೆಯೇ?

ನನಗೆ ಮಾನ, ಮರ್ಯಾದೆ ಇದೆಯಾ ಎಂದು ಕೇಳಿದ್ದೀರಿಲ್ಲಾ ಸಿದ್ದರಾಮಯ್ಯ. ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದ ನೀವು ನಂತರ ಅವರ ಮನೆಬಾಗಿಲಿಗೆ ಹೋಗಿ ಕರೆತಂದು ಮುಖ್ಯಮಂತ್ರಿ ಮಾಡಿ ನಂತರ ಶಡ್ಯಂತ್ರ ಮಾಡಿ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿದ ನಿಮಗೆ ಮಾನ, ಮರ್ಯಾದೆ ಎಂದರೆ ಏನು ಎಂಬುದು ಗೊತ್ತಿದೆಯೇ?

ಜೆಡಿಎಸ್‌ಗೆ ನೀವು ಅನ್ಯಾಯ ಮಾಡಿದ್ದೀರ

ಜೆಡಿಎಸ್‌ಗೆ ನೀವು ಅನ್ಯಾಯ ಮಾಡಿದ್ದೀರ

ಉಪಮುಖ್ಯಮಂತ್ರಿ ಮಾಡಿ ಹಣಕಾಸು ಖಾತೆಯಂತಹ ಮಹತ್ವದ ಖಾತೆಗಳನ್ನು ನೀಡಿದ್ದರೂ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಸುಳ್ಳು ಹೇಳಿಕೊಂಡು ನಿಮ್ಮನ್ನು ಬೆಳೆಸಿ ನಾಯಕನನ್ನಾಗಿ ರೂಪಿಸಿದ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿ ಆ ಪಕ್ಷದ ಹಿರಿಯ ನಾಯಕರಿಗೆಲ್ಲಾ ಅನ್ಯಾಯ ಮಾಡಿ ಮುಖ್ಯಮಂತ್ರಿಯಾಗಿದ್ದು ನಿಮ್ಮ ಸ್ವಾರ್ಥವಲ್ಲವೇ ಸಿದ್ದರಾಮಯ್ಯನವರೇ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನಾನೇನು ಸ್ವಾರ್ಥದ ಕೆಲಸ ಮಾಡಿದ್ದೀನಿ?

ನಾನೇನು ಸ್ವಾರ್ಥದ ಕೆಲಸ ಮಾಡಿದ್ದೀನಿ?

ನಾನೆಲ್ಲಿ ಸ್ವಾರ್ಥದ ಕೆಲಸ ಮಾಡಿದ್ದೀನಿ ಹೇಳಿ ಸಿದ್ದರಾಮಯ್ಯನವರೇ ಎಂದು ಶ್ರೀರಾಮುಲು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+