ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತದಾನ:ಅಂಗವಿಕಲರಿಗಾಗಿ ಸ್ವೀಪ್ ತಂಡ ಏನೆಲ್ಲಾ ಸಿದ್ಧತೆ ಮಾಡಿಕೊಂಡಿದೆ?

|
Google Oneindia Kannada News

ಮೈಸೂರು, ಏಪ್ರಿಲ್ 7:ಈ ಬಾರಿ ಮತದಾನ ದಿನದಂದು ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಮತಗಟ್ಟೆಗಳಿಗೆ ಬಂದು ಹೋಗಲು ಚುನಾವಣಾ ಆಯೋಗವು ವಾಹನ ವ್ಯವಸ್ಥೆ ಮಾಡಲಿದೆ. ಇದೇ ಉದ್ದೇಶಕ್ಕಾಗಿ ಈ ಬಾರಿ ಆಯೋಗವು ಪಿಡಬ್ಲ್ಯುಡಿ ಆಪ್ ಕೂಡ ಅಭಿವೃದ್ಧಿಪಡಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

'ಪ್ಲೇ ಸ್ಟೋರ್‌' ನಿಂದ ಈ ಆಪ್ ಡೌನ್‌ಲೋಡ್ ಮಾಡಿಕೊಂಡು ಹೆಸರು ನೋಂದಾಯಿಸಬಹುದು. ಅಲ್ಲದೇ, ಈ ಬಾರಿ ಪ್ರತಿ ಮತಗಟ್ಟೆಗಳಲ್ಲಿ ವ್ಹೀಲ್ ಚೇರ್ (ಗಾಲಿ ಕುರ್ಚಿ) ವ್ಯವಸ್ಥೆ ಮಾಡಲಾಗುತ್ತಿದೆ.

 ಚಾಮರಾಜನಗರದಲ್ಲಿ ಮತದಾನ ಜಾಗೃತಿಗೆ ಸ್ವೀಪ್ ಸಮಿತಿ ಮಾಡಿದ್ದೇನು? ಚಾಮರಾಜನಗರದಲ್ಲಿ ಮತದಾನ ಜಾಗೃತಿಗೆ ಸ್ವೀಪ್ ಸಮಿತಿ ಮಾಡಿದ್ದೇನು?

"ಅಂಗವಿಕಲ ಹಾಗೂ ಹಿರಿಯ ನಾಗರಿಕ ಮತದಾರರ ಬಗ್ಗೆ ವಿಶೇಷ ಕಾಳಜಿವಹಿಸಲಾಗುವುದು. ವ್ಹೀಲ್ ಚೇರ್ ಮತ್ತು ವಾಹನಕ್ಕಾಗಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ನಾವು ಕೂಡ ಮಾಹಿತಿ ಕಲೆ ಹಾಕಿ ನೋಂದಣಿ ಮಾಡುತ್ತಿದ್ದೇವೆ.ವಾಹನದ ವಿಷಯದಲ್ಲಿ ಅಂಗವಿಕಲರಿಗೆ ಮೊದಲು ಆದ್ಯತೆ ನೀಡಲಾಗುವುದು. ತೀರ ಅಸಹಾಯಕರು, ನಡೆಯಲು ಸಾಧ್ಯವಾಗದವರಿಗೂ ವಾಹನ ವ್ಯವಸ್ಥೆ ಮಾಡಲಾಗುವುದು. ಸಹಾಯಕ್ಕೆಂದು ಪ್ರತಿ ವಾಹನಕ್ಕೆ ಸ್ವಯಂಸೇವಕರನ್ನು ನೇಮಿಸಲಾಗುವುದು" ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಕೆ.ಜ್ಯೋತಿ ತಿಳಿಸಿದರು.

Special vehicle system for disabled people on voting day

ಅಂಗವಿಕಲ ಮತದಾರರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಹಾಗೂ ಮತದಾನ ಮಾಡುವಂತೆ ಹುರಿದುಂಬಿಸಲು ಈ ವ್ಯವಸ್ಥೆ ಮಾಡಲಾಗುತ್ತಿದೆ. ಊರುಗೋಲು, ರಾಂಪ್, ರೇಲಿಂಗ್, ಭೂತ ಕನ್ನಡಿ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ. ಯಾರೊಬ್ಬರೂ ಮತ ಚಲಾಯಿಸುವ ಹಕ್ಕು ಕಳೆದುಕೊಳ್ಳಬಾರದು ಎಂಬುದು ಚುನಾವಣಾ ಆಯೋಗದ ಆಶಯವಾಗಿದೆ.

ಸ್ವೀಪ್ ಸಮಿತಿಯ ಮೂಲಕ ಈ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಎಲ್ಲೆಲ್ಲಿ ಎಷ್ಟು ವಾಹನಗಳನ್ನು ನಿಯೋಜಿಸಬೇಕು ಎಂದು ಕಾರ್ಯಯೋಜನೆ ರೂಪಿಸುತ್ತಿದೆ. ಯಾವ ಮತಗಟ್ಟೆಗಳಲ್ಲಿ ಅಂಗವಿಕಲರು ಇದ್ದಾರೆ ಎಂಬುದನ್ನು ಗುರುತಿಸಲಾಗಿದೆ.

 1989ರ ಮತದಾನದ ದಾಖಲೆ ಮುರಿಯಲು ಮೈಸೂರು ಸ್ವೀಪ್ ಸಮಿತಿ ಕಸರತ್ತು 1989ರ ಮತದಾನದ ದಾಖಲೆ ಮುರಿಯಲು ಮೈಸೂರು ಸ್ವೀಪ್ ಸಮಿತಿ ಕಸರತ್ತು

ಜಿಲ್ಲೆಯಲ್ಲಿ ಒಟ್ಟು 18,932 ಅಂಗವಿಕಲ ಮತದಾರರು ಇದ್ದಾರೆ. ಸರತಿ ಸಾಲಿನಲ್ಲಿ ನಿಲ್ಲದೆಯೇ ಅವರು ಮತ ಚಲಾವಣೆ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.

English summary
This time Election Commission will arrange vehicle for disabled and senior citizens to come to the polling booth on voting day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X