ತಾಳಿ ಕಟ್ಟಿದ ತಕ್ಷಣ ಪುನೀತ್ ದರ್ಶನಕ್ಕೆ ಬಂದ ದಂಪತಿ
ಮೈಸೂರು, ಜೂನ್ 10: ತಾಳಿ ಕಟ್ಟಿದ ನಂತರ ದೇವರ, ಹಿರಿಯರ ದರ್ಶನ ಪಡೆದು ಆಶೀರ್ವಾದ ತೆಗೆದುಕೊಳ್ಳುವುದು ರೂಢಿ. ಆದರೆ ಮೈಸೂರಿನಲ್ಲಿ, ಮದುವೆಯಾದ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದರ್ಶನ ಮಾಡಿ ಆರ್ಶೀವಾದ ಪಡೆದುಕೊಂಡಿದ್ದಾರೆ ಈ ಅಭಿಮಾನಿಗಳು.
ಬೆಟ್ಟ ಹತ್ತಿ ಚಾಮುಂಡಿ ದರ್ಶನ ಪಡೆದ ಪವರ್ ಸ್ಟಾರ್ ಪುನೀತ್
ಮೈಸೂರಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಸಿನಿಮಾ ಶೂಟಿಂಗ್ ಬಳಿ ಯೋಗೇಶ್ - ಚೈತ್ರ ನವದಂಪತಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಮಹಾರಾಜ ಕಾಲೇಜಿನಲ್ಲಿ ಯುವರತ್ನ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ನಾಗಮ್ಮ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಂಪತಿ, ಮಾಂಗಲ್ಯಧಾರಣೆ ಆದ ತಕ್ಷಣವೇ ಶೂಟಿಂಗ್ ಸ್ಥಳಕ್ಕೆ ಹೋಗಿ ನಟ ಪುನೀತ್ ಭೇಟಿಯಾಗಿ ಆಶಿರ್ವಾದ ಪಡೆದಿದ್ದಾರೆ. ಯೋಗೇಶ್, ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಪುನೀತ್ ರಾಜ್ ಕುಮಾರ್, ಯೋಗೇಶ್ - ಚೈತ್ರ ದಂಪತಿಗೆ ಶುಭ ಕೋರಿದ್ದಾರೆ.