ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿ ಬಾರಿಯೂ ಜೆಡಿಎಸ್ ಯಾಕೆ ಗೆಲ್ಲಬೇಕು?; ಸಿದ್ದರಾಮಯ್ಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂ6: "ಜೆಡಿಎಸ್‌ಗೆ ಈಗಲೂ ಬಿಜೆಪಿ ಗೆಲ್ಲಬಾರದು ಎಂಬ ಆಸಕ್ತಿ ಇದ್ದರೆ ಅವರ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿ ಮಾಡಿಸಲಿ. ನಾವು ಅನೇಕ ಬಾರಿ ಜೆಡಿಎಸ್‌ಗೆ ನೆರವಾಗಿಲ್ವ?. ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವಾಗ ನಾವು ಬೆಂಬಲಿಸಲಿಲ್ಲವೇ?" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜೆಡಿಎಸ್ ಮತ್ತು ಬಿಜೆಪಿಯಲ್ಲಿನ ಕೆಲ ಆತ್ಮಸಾಕ್ಷಿಯ ಮತಗಳು ಕಾಂಗ್ರೆಸ್ ಬರುತ್ತವೆ. ನಮ್ಮ ಗೆಲುವಿಗೆ ಎಷ್ಟು ಮತ ಬೇಕೋ ಅಷ್ಟು ಆತ್ಮಸಾಕ್ಷಿಯ ಮತಗಳು ಜೆಡಿಎಸ್, ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದೆ ಬರುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಇಳಿಸಲು ಆರ್‌ಎಸ್‌ಎಸ್ ತಂತ್ರ; ಸಿದ್ದರಾಮಯ್ಯ ಸಿಎಂ ಇಳಿಸಲು ಆರ್‌ಎಸ್‌ಎಸ್ ತಂತ್ರ; ಸಿದ್ದರಾಮಯ್ಯ

"ಮೂವತ್ತೇಳು ಸ್ಥಾನ ಇದ್ದ ಜೆಡಿಎಸ್‌ಗೆ ನಾವು ಸಿಎಂ ಸ್ಥಾನ ಕೊಡಲಿಲ್ಲವೇ?. ಹೀಗೆ ಹಲವು ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಾವು ಜೆಡಿಎಸ್‌ಗೆ ಸಹಕಾರ ಕೊಟ್ಟಿದ್ದೇವೆ.‌ ಈಗ ಅಲ್ಪಸಂಖ್ಯಾತರೊಬ್ಬರು ಗೆಲ್ಲಲು ಜೆಡಿಎಸ್ ತನ್ನ ಅಭ್ಯರ್ಥಿಯ ನಿವೃತ್ತಿ ಘೋಷಿಸಲಿ. ಪ್ರತಿ ಬಾರಿಯೂ ಜೆಡಿಎಸ್ ಯಾಕೆ ಗೆಲ್ಲಬೇಕು?" ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆಗ ಸಿದ್ದರಾಮಯ್ಯ ಎಂಎಲ್ಎಗಳನ್ನು ಕಳುಹಿಸಿದರು ಅಂದರು. ಈಗ ಈ ರೀತಿ ಹೇಳುತ್ತಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು?. ಅವರ ರೀತಿ ಸುಳ್ಳು ಹೇಳಲು ನಮಗೆ ಬರುವುದಿಲ್ಲ. ಟಾರ್ಚರ್ ವಿಚಾರ ಅಂದು ಏಕೆ ಹೇಳಲಿಲ್ಲ?. ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ ಆಗ ಟಾರ್ಚರ್ ಬಗ್ಗೆ ಹೇಳಿಲ್ಲ.‌ ಈಗ ಹೇಳಿದರೆ ನಂಬಬೇಕಾ?. ಕುಮಾರಸ್ವಾಮಿ ಅವರನ್ನೇ ಈ ಬಗ್ಗೆ ಕೇಳಿ" ಎಂದು.

"ನಾವು ಅನೇಕ ಬಾರಿ ಜೆಡಿಎಸ್‌ಗೆ ನೆರವಾಗಿಲ್ವಾ. ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವಾಗ ನಾವು ಬೆಂಬಲಿಸಲಿಲ್ವಾ?" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಹಲವು ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಾವು ಜೆಡಿಎಸ್‌ಗೆ ಸಹಕಾರ ಕೊಟ್ಟಿದ್ದೇವೆ. ಈಗ ಅಲ್ಪಸಂಖ್ಯಾತರೊಬ್ಬರು ಗೆಲ್ಲಲು ಜೆಡಿಎಸ್ ತನ್ನ ಅಭ್ಯರ್ಥಿಯ ನಿವೃತ್ತಿ ಘೋಷಿಸಲಿ. ಪ್ರತಿ ಬಾರಿಯೂ ಜೆಡಿಎಸ್ ಯಾಕೆ ಗೆಲ್ಲಬೇಕು?" ಎಂದು ಪ್ರಶ್ನಿಸಿದರು.

RSS ಚಡ್ಡಿ ಮತ್ತು ಹಿಂದೆ ಸಿದ್ದರಾಮಯ್ಯ ಪಂಚೆ ಕಳಚಿದ್ದ ಘಟನೆRSS ಚಡ್ಡಿ ಮತ್ತು ಹಿಂದೆ ಸಿದ್ದರಾಮಯ್ಯ ಪಂಚೆ ಕಳಚಿದ್ದ ಘಟನೆ

ಪ್ರತಾಪ್ ಸಿಂಹ, ಮೋದಿ ಇಬ್ಬರೂ ವಕೀಲರಾ.?

ಪ್ರತಾಪ್ ಸಿಂಹ, ಮೋದಿ ಇಬ್ಬರೂ ವಕೀಲರಾ.?

"ನಾನು ಆರ್ಥಿಕತೆ ಬಗ್ಗೆ ಮಾತನಾಡಿರೋದು ತಪ್ಪು, ಸರಿ ಎಂದು ಹೇಳಲು ಪ್ರತಾಪ್ ಸಿಂಹ ಆರ್ಥಿಕ ತಜ್ಞನಾ?. ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಆರ್ಥಿಕ ತಜ್ಞರೇ. ನಾನು ಓದಿದ ಲಾ ಬಗ್ಗೆ ಪ್ರಶ್ನಿಸಲು ಪ್ರತಾಪ್ ಸಿಂಹ, ಮೋದಿ ಇಬ್ಬರೂ ವಕೀಲರಾ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

"ಬೆಂಗಳೂರು, ಮೈಸೂರು ರಾಷ್ಟ್ರೀಯ ಹೆದ್ದಾರಿಗೂ ಪ್ರತಾಪ್ ಸಿಂಹಗೂ ಏನು ಸಂಬಂಧ‌‌?. ಪ್ರತಾಪ್ ಸಿಂಹ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಕಿ. ಮೀ. ಹೆದ್ದಾರಿ ಬರುತ್ತದೆ. ಬೆಂಗಳೂರಿನವರೆಗೆ ಯಾಕೆ ಹೋಗ್ತಾರೆ. ಅಲ್ಲಿ ಎಂಪಿಗಳಿಲ್ವ?. ನಾನು ಮೈಸೂರಿಗೆ ಏನು ಮಾಡಿದ್ದೇನೆ, ಅವರು ಏನು ಮಾಡಿದ್ದಾರೆ ಚರ್ಚೆಗೆ ಬರಲಿ. ಚರ್ಚೆಗೆ ನಾನು ಬರುವುದಿಲ್ಲ ನಮ್ಮ ಲಕ್ಷ್ಮಣನನ್ನು ಕಳುಹಿಸುತ್ತೇನೆ. ದಾಖಲೆ ಸಮೇತ ಬಂದು ಲಕ್ಷ್ಮಣನ ಜೊತೆ ಚರ್ಚೆ ಮಾಡಲಿ. ಅವನಿಗೆ ಉತ್ತರ ಕೊಡಲಿ" ಎಂದು ಸಿದ್ದರಾಮಯ್ಯ ಹೇಳಿದರು.

ದಳಪತಿಗಳ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ

ದಳಪತಿಗಳ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ

ರಾಜ್ಯಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಸಿದ್ದರಾಮಯ್ಯ ಒಳ ಒಪ್ಪಂದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಸಿಎಂ ಇಬ್ರಾಹಿಂಗೆ ಮಾನ ಮರ್ಯಾದೆ ಇಲ್ಲ. ಅವನು ಜೆಡಿಎಸ್‌ನಲ್ಲಿ ಕ್ಯಾಪ್ಟೀವ್ ಪ್ರೆಸಿಡೆಂಟ್ ಇದ್ದಂತೆ. ಕುಳಿತುಕೊಳ್ಳಿ ಎಂದರೆ ಕುಳಿತುಕೊಳ್ಳಬೇಕು. ನಿಂತುಕೊಳ್ಳಿ ಎಂದರೆ ನಿಂತುಕೊಳ್ಳಬೇಕು. ಎಂಎಲ್‌ಸಿ ಮಾಡುತ್ತೇವೆ ಎಂದು ಕರೆದುಕೊಂಡು ಹೋದರು. ಏನೋ ಒಂದು ಹುದ್ದೆ ಕೊಟ್ಟಿದ್ದಾರೆ ಅಂತ ಬಾಯಿಗೆ ಬಂದಂತೆ ಮಾತನಾಡುತ್ತಾನೆ" ಎಂದರು.


"ದಲಿತರಿಗೆ ನಾವು ಏನ್ ಮಾಡಿದ್ದೀವಿ ಅಂತ ಎಲ್ಲರಿಗೂ ಗೊತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹೆಚ್ಚು ಆದ್ಯತೆ ಕೊಟ್ಟಿದ್ದು ದಲಿತರಿಗೆ. ದಲಿತರಿಗೆ ಕಾಂಗ್ರೆಸ್‌ನಲ್ಲಿ ಹೆಚ್ಚು ಸ್ಥಾನಮಾನ ನೀಡಲಾಗಿದೆ. ಹೀಗಾಗಿ ಜೆಡಿಎಸ್ ನವರಿಂದ ಹೇಳಿಸಿಕೊಳ್ಳಬೇಕಿಲ್ಲ?‌" ಎಂದು ವಾಗ್ದಾಳಿ ನಡೆಸಿದರು.

ಸಮಿತಿ ವಿಸರ್ಜನೆ ಪರಿಹಾರ ಅಲ್ಲ. ಪರಿಷ್ಕರಣೆಯನ್ನೇ ರದ್ದು ಮಾಡಿ

ಸಮಿತಿ ವಿಸರ್ಜನೆ ಪರಿಹಾರ ಅಲ್ಲ. ಪರಿಷ್ಕರಣೆಯನ್ನೇ ರದ್ದು ಮಾಡಿ

ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಪಠ್ಯಪುಸ್ತಕ ವಿವಾದ ವಿಚಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ ಅವರು, "ಸಮಿತಿ ವಿಸರ್ಜನೆ ಪರಿಹಾರ ಅಲ್ಲ. ಪರಿಷ್ಕರಣೆಯನ್ನೇ ರದ್ದು ಮಾಡಿ, ಬರಗೂರು ರಾಮಚಂದ್ರಪ್ಪ ಅವರ ಪರಿಷ್ಕರಣೆಯೇ ಜಾರಿಯಾಗಲಿ.

ಹಿಂದೂಗಳ ಭಾವನೆಗೆ ದಕ್ಕೆಯಾಗುವ ಕೆಲಸ ಮಾಡಿದ್ದಾರೆ. ಕವಿಗಳ, ಮಹಾತ್ಮರ ಕೃತಿಚೌರ್ಯ ನಡೆದಿವೆ. ನಾನು ಹಿಂದೂ ಅಲ್ವ, ನೀವು ಹಿಂದೂ ಅಲ್ವ, ಅಂಬೇಡ್ಕರ್ ಹಿಂದೂ ಅಲ್ವ, ಭಗತ್ ಸಿಂಗ್ ಹಿಂದೂ ಅಲ್ವ, ಕುವೆಂಪು ಹಿಂದೂ ಅಲ್ವ. ಎಲ್ಲರಿಗೂ ಅವಮಾನ ಆಗಿದೆ" ಎಂದರು.

English summary
Leader of opposition Siddaramaiah reaction on Rajya Sabha elections and Congress second candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X