ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐತಿಹಾಸಿಕ ಲ್ಯಾನ್ಸ್ ಡೌನ್ ಪುನರ್ನಿಮಾಣಕ್ಕೆ ಸಿಎಂ ಸಿದ್ದು ಗುದ್ದಲಿ ಪೂಜೆ

By Mahesh
|
Google Oneindia Kannada News

ಮೈಸೂರು, ಜ.11: ಸಾಂಸ್ಕೃತಿಕ ನಗರದ ಇತಿಹಾಸದ ಭಾಗವಾಗಿದ್ದ ಶತಮಾನದ ಕಥೆ ಹೇಳುವ ಲ್ಯಾನ್ಸ್ ಡೌನ್ ಕಟ್ಟಡದ ದುರಂತ ಸಂಭವಿಸಿ ಎರಡು ವರ್ಷಗಳ ಬಳಿಕ ಪುನರ್ ನಿರ್ಮಾಣ ಭಾಗ್ಯ ಕಾಣುತ್ತಿದೆ. ಮೈಸೂರು ಪ್ರವಾಸ ನಿರತರಾಗಿರುವ ಸಿಎಂ ಸಿದ್ದರಾಮಯ್ಯ ಅವರು ಭಾನುವಾರದಂದು ಲ್ಯಾನ್ಸ್ ಡೌನ್ ಪುನರ್ನಿಮಾಣ ಕಾರ್ಯಕ್ಕೆ ಚಾಲನೆ ನೀಡಿದೌರ್.

ಐತಿಹಾಸಿಕ ಲ್ಯಾನ್ಸ್ ಡೌನ್ ಪುನರ್ನಿಮಾಣ ಕಾರ್ಯಕ್ಕಾಗಿ ಕರ್ನಾಟಕ ಸರ್ಕಾರ 6 ಕೋಟಿ ರು ನೀಡುತ್ತಿದ್ದು, ಶಿಥಿಲಗೊಂಡಿರುವ ಕಟ್ಟಡ ಪುನರ್ ನಿರ್ಮಾಣ ಅವಶ್ಯವಾಗಿತ್ತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಹೇಳಿದರು.

CM Siddaramaih in Mysuru

ಲ್ಯಾನ್ಸ್ ಡೌನ್ ದುರಂತ: ಎರಡು ವರ್ಷಗಳ ಹಿಂದೆ(ಆಗಸ್ಟ್ 25,2012) ಮಳಿಗೆ ಸಂಖ್ಯೆ 17 ಮತ್ತು 18ರ ಮೇಲ್ಛಾವಣಿ ಕುಸಿದು ನಾಲ್ವರು ವ್ಯಕ್ತಿಗಳು ಸಾವನ್ನಪ್ಪಿದ್ದ ಘಟನೆ ಬಿಜೆಪಿ ಆಡಳಿತಾವಧಿಯಲ್ಲಿ ಸಂಭವಿಸಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅವರು ಜಿಲ್ಲೆಯ ಸರ್ವಪಕ್ಷ ಮುಖಂಡರ ಸಭೆ ನಡೆಸಿ ಮುಂದಿನ ಒಂದು ವರ್ಷದೊಳಗೆ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳುವ ಭರವಸೆ ನೀಡಿದ್ದರು. ಇದಕ್ಕಾಗಿ ರಾಜ್ಯ ಸರ್ಕಾರ ಎರಡು ಕೋಟಿ ಹಣ ಮಂಜೂರು ಮಾಡಿತ್ತು.

ಟಾರ್ ಸ್ಟೀಲ್ ಮುಖ್ಯಸ್ಥ ಡಾ.ವಿಶ್ವನಾಥ್ ಹಾಗೂ ಭಾರತೀಯ ಪರಂಪರೆ ನಗರಗಳ ಒಕ್ಕೂಟದ ಗೋವಿಂದನ್ ಕುಟ್ಟಿ ಅವರು ಪ್ರತ್ಯೇಕ ವರದಿಯನ್ನು ನೀಡಿದ್ದರು. ಈ ಎರಡೂ ವರದಿಗಳ ಅಂಶಗಳನ್ನು ಆಧರಿಸಿ ಪುನರುಜ್ಜೀವ ಯೋಜನೆ ಆಧಾರದ ಮೇಲೆ ಕಾಂಗ್ರೆಸ್ ಸರ್ಕಾರ ಈಗ ಪುನರ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.

century-old heritage Lansdowne building Renovation CM Launched Renovationworks

ಮೈಸೂರು ನಗರ ಪಾಲಿಕೆ ಅಧೀನದಲ್ಲಿರುವ ಈ ಪಾರಂಪರಿಕ ಕಟ್ಟಡದ ಪುನರ್ ನಿರ್ಮಾಣ ಯೋಜನೆಯಂತೆ ಪೂರ್ಣಗೊಳ್ಳುವ ತನಕ ಅಂಗಡಿ ಮಾಲೀಕರಿಗೆ ತಾತ್ಕಾಲಿಕವಾಗಿ ಮಳಿಗೆ ಹಾಕಿಕೊಳ್ಳಲು ಪಾಲಿಕೆ ಅನುಮತಿ ನೀಡಿದೆ. ಅದರೆ, ಮಾಸಿಕ ಬಾಡಿಗೆಯನ್ನು ಪಡೆದುಕೊಳ್ಳುತ್ತಿದೆ.

ಇಂದಿನ ಸಮಾರಂಭದಲ್ಲಿ ಸಿಎಂ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ ಶ್ರೀನಿವಾಸ ಪ್ರಸಾದ್, ಮೇಯರ್ ಆರ್ ಲಿಂಗಪ್ಪ, ಉಪ ಮಹಾಪೌರರಾದ ಮಹದೇವಮ್ಮ, ಶಾಸಕರಾದ ಎಂಕೆ ಸೋಮಶೇಖರ್, ವಾಸು, ಜಿಲ್ಲಾಧಿಕಾರಿ ಶಿಖಾ, ಮುಡಾ ಚೇರ್ಮನ್ ಕೆಆರ್ ಮೋಹನ್ ಕುಮಾರ್, ಮುಡಾ ಆಯುಕ್ತಎಸ್ ಪಾಲಯ್ಯ, ಮೈಸೂರು ಪಾಲಿಕೆ ಆಯುಕ್ತ ಸಿಜಿ ಬೆಟ್ಸೂರ್ ಮಠ ಮುಂತಾದವರು ಹಾಜರಿದ್ದರು.

English summary
Chief Minister Siddharamaiah on Sunday morning performed Bhoomi Puja for renovation of century-old heritage Lansdowne building. Two years ago city visited tragic death of four persons owing to the collapse of a roof of a shop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X