ಮಡಿಕೇರಿ ಘರ್ಷಣೆ: ಮೈಸೂರು ಡಿಸಿಯಿಂದ ತನಿಖೆ
ಮೈಸೂರು, ನವೆಂಬರ್, 13 : ಪ್ರಕೃತಿ ತಾಣವಾದ ಕೊಡಗಿನ ಮಡಿಕೇರಿಯಲ್ಲಿ ನಡೆಯುತ್ತಿರುವ ಟಿಪ್ಪು ಸುಲ್ತಾನ್ ವಿವಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪಿರಿಯಾಪಟ್ಟಣದ ಬೆಟ್ಟದತುಂಗ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳಿಗೆ ತೆರಳುವ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,' ಮಡಿಕೇರಿ ನವೆಂಬರ್ 10ರಿಂದ ಘರ್ಷಣೆ, ಗಲಾಟೆಯಿಂದ ಜರ್ಜರಿತಗೊಳ್ಳುತ್ತಿದೆ. ಇಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ಸಮಗ್ರ ತನಿಖೆ ನಡೆಸಲಾಗುವುದು. ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.[ಕೊಡವರು ಟಿಪ್ಪುವನ್ನು ವಿರೋಧಿಸುವುದೇಕೆ?]

ಬಿಜೆಪಿ ಸೇರಿದಂತೆ ವಿಹೆಚ್ ಪಿ, ಭಜರಂಗದಳ ಪಕ್ಷಗಳು ರಾಜ್ಯದಲ್ಲಿ ಅನಗತ್ಯ ಗೊಂದಲ ಏರ್ಪಡಿಸುತ್ತಿವೆ. ರಾಜ್ಯದಲ್ಲಿನ ಶಾಂತಿ ಕದಡಲು ಸಂಘಟನೆಗಳು ಯತ್ನಿಸುತ್ತಿವೆ. ಇದು ಸರಿಯಲ್ಲ. ಇದರಿಂದ ನಾನಾ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಪಕ್ಷಗಳ ಮೇಲೆ ಹರಿಹಾಯ್ದರು[700 ಬ್ರಾಹ್ಮಣರನ್ನು ನೇಣಿಗೇರಿಸಿದ್ದ ದಿನದಂದು ಟಿಪ್ಪು ಜಯಂತಿ ಆಚರಿಸಲಾಯಿತೇ?]
ಕರ್ನಾಟಕ ಸರ್ಕಾರ ಮಡಿಕೇರಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ನವೆಂಬರ್ 10ರಂದು ಆಚರಿಸಿದ ಪರಿಣಾಮ ರಾಜ್ಯ ಸಂಪೂರ್ಣ ಬೆಳಕಿನ ಹಬ್ಬದ ನಡುವೆಯೂ ಕತ್ತಲಮಯವಾಗಿದೆ. ಈ ಗಲಾಟೆಯಲ್ಲಿ ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ಘರ್ಷಣೆ ನಿಮಿತ್ತ ಹಲವೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.












Click it and Unblock the Notifications