ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುದೀಪ್ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದು ನಿಜ: ಸಿದ್ದರಾಮಯ್ಯ

By Yashaswini
|
Google Oneindia Kannada News

Recommended Video

ಕಿಚ್ಚ ಸುದೀಪ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು | Oneindia Kannada

ಮೈಸೂರು, ಏಪ್ರಿಲ್ 23: ನಟ ಸುದೀಪ್ ಭೇಟಿಯಾಗಿ, 'ಅಣ್ಣ ನಿಮ್ಮ ಒಬ್ಬರ ಕ್ಷೇತ್ರದಲ್ಲಿ ಬೇಕಾದರೆ ಪ್ರಚಾರಕ್ಕೆ ಬರುತ್ತೇನೆ' ಎಂದು ಕೇಳಿದ್ದು ನಿಜ. ಆದರೆ ನಾವು ಯಾವ ಸ್ಟಾರ್ ಪ್ರಚಾರಕರನ್ನೂ ಕರೆತರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, "ವರುಣದಲ್ಲಿ ಯತೀಂದ್ರನೇ ಸ್ಟಾರ್ ಪ್ರಚಾರಕ. ಅಲ್ಲಿನ ಲೋಕಲ್ ಲೀಡರ್ ಗಳೇ ಸ್ಟಾರ್ ಪ್ರಚಾರಕರು," ಎಂದರು.

ಕುತೂಹಲ ಕೆರಳಿಸಿದ ಕಿಚ್ಚ ಸುದೀಪ್, ಸಿಎಂ ಸಿದ್ದರಾಮಯ್ಯ ಭೇಟಿಕುತೂಹಲ ಕೆರಳಿಸಿದ ಕಿಚ್ಚ ಸುದೀಪ್, ಸಿಎಂ ಸಿದ್ದರಾಮಯ್ಯ ಭೇಟಿ

"ಸಿಸಿಎಲ್ ಗೆ ಆಹ್ವಾನ ನೀಡಲು ಸುದೀಪ್ ನನ್ನ ಬಳಿ ಬಂದಿದ್ದರು. ಆ ವೇಳೆ, 'ಅಣ್ಣ ನಿಮ್ಮ ಒಬ್ಬರ ಕ್ಷೇತ್ರದಲ್ಲಿ ಬೇಕಾದರೆ ಪ್ರಚಾರಕ್ಕೆ ಬರುತ್ತೇನೆ' ಎಂದು ಹೇಳಿದ್ದರು. ಆದರೆ ನಮಗೆ ಯಾವ ಸ್ಟಾರ್ ಪ್ರಚಾರಕರ ಅವಶ್ಯಕತೆ ಇಲ್ಲ. ಬಾದಾಮಿ ಹಾಗೂ ಚಾಮುಂಡೇಶ್ವರಿಯ ಎರಡು ಕ್ಷೇತ್ರದಲ್ಲಿ ಯಾವ ಸ್ಟಾರ್ ಪ್ರಚಾರಕರ ಸಹಾಯವಿಲ್ಲದೇ ಗೆಲುವು ಶತಃಸಿದ್ಧ," ಎಂದರು.

Siddaramaiah clarifies about film stars election campaign for Congress

ಅಂಬರೀಷ್ ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಸಂದೇಶ್ ನಾಗರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿ, "ಈ ವಿಚಾರದಲ್ಲಿ ಹೇಳೋಕೆ ಜೆಡಿಎಸ್ ನ ಸಂದೇಶ್ ನಾಗರಾಜ್ ಯಾರೀ? ಒಂದು ವೇಳೆ ಅಂಬರೀಷ್ ನಿಲ್ಲುವುದಿಲ್ಲ ಎಂಬುವುದಾದರೆ ಈ ಬಗ್ಗೆ ಹೈಕಮಾಂಡ್ ಗೆ ತಿಳಿಸುತ್ತೇವೆ. ಬಳಿಕ ಮಂಡ್ಯದಲ್ಲಿ ಯಾರು ಸ್ಪರ್ಧೆ ಮಾಡಬೇಕು ಎನ್ನುವುದನ್ನು ತೀರ್ಮಾನಿಸುತ್ತೇವೆ," ಎಂದು ಕಿಡಿಕಾರಿದರು.

ಬಿಜೆಪಿಯಿಂದ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಬಿಜೆಪಿಯಿಂದ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

ಬಾದಾಮಿಯಲ್ಲಿ ಸಿಎಂಗೆ ಗೋಡಂಬಿನೂ ಸಿಗುವುದಿಲ್ಲವೆಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, "ತಾನೂ ಗೆಲ್ಲೋಕಾಗದೆ ಹೆಂಡತಿಯನ್ನೂ ಗೆಲ್ಲಿಸೋಕೆ ಆಗದವನು ಬೇರೆಯವರನ್ನು ಸೋಲಿಸ್ತೀನಿ ಅನ್ನುವುದು ಹಾಸ್ಯಾಸ್ಪದ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರೀ ಕುತೂಹಲ ಹುಟ್ಟಿಸಿರುವ ಕುಮಾರಸ್ವಾಮಿ, ಕಿಚ್ಚ ಸುದೀಪ್ ಭೇಟಿ!ಭಾರೀ ಕುತೂಹಲ ಹುಟ್ಟಿಸಿರುವ ಕುಮಾರಸ್ವಾಮಿ, ಕಿಚ್ಚ ಸುದೀಪ್ ಭೇಟಿ!

ನಟ ಪ್ರಕಾಶ್ ರೈ ಕಾಂಗ್ರೆಸ್ ನತ್ತ ಒಲವು ತೋರುತ್ತಿದ್ದಾರೆ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, "ನಟ ಪ್ರಕಾಶ್ ರೈ ಜಾತ್ಯಾತೀತದ ಪರ ಹಾಗೂ ಕೋಮುವಾದದ ವಿರುದ್ಧ ಅಷ್ಟೇ," ಎಂದು ನುಡಿದರು.

ಬಾದಾಮಿಯಲ್ಲಿ ಗೆಲುವು ಶತಃಸಿದ್ಧ. ಅಲ್ಲಿ ಪ್ರಚಾರಕ್ಕೆ ಹೋಗದೆಯೇ ಗೆಲ್ಲುತ್ತೇನೆ. ಕುಮಾರಸ್ವಾಮಿ ಎರಡೂ ಕ್ಷೇತ್ರದಲ್ಲಿ ಸೋಲುತ್ತಾರೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ, ಹಳೆ ಮೈಸೂರಲ್ಲಿ ಜೆಡಿಎಸ್ ನಮಗೆ ಎದುರಾಳಿ. ಈ ಬಾರಿ 130 ಕ್ಕೂ ಅಧಿಕ ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

English summary
"It is true that actor Sudeep met and said that he is ready to do election campaign. But we do not bring any star campaigner to our constituency," said CM Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X